ಹಿನ್ನೆಲೆ ಗಾಯಕ ಎಲ್ಎನ್ ಶಾಸ್ತ್ರಿ
ಬೆಂಗಳೂರು: ಖ್ಯಾತ ಹಿನ್ನೆಲೆ ಗಾಯಕ ಎಲ್ಎನ್ ಶಾಸ್ತ್ರಿ ಅವರು ಅನಾರೋಗ್ಯಕ್ಕೊಳಗಾಗಿದ್ದು, ಕರುಳಿನ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ.
ಸಿನಿಮಾ ಪತ್ರಕರ್ತ ಗಣೇಶ್ ಕಾಸರಗೋಡು ಎಲ್ಎನ್ ಶಾಸ್ತ್ರಿ ಅವರ ಆರೋಗ್ಯದ ಬಗ್ಗೆ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದು, ಎಲ್ಎನ್ ಶಾಸ್ತ್ರಿ ಅವರು ಕರುಳಿನ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ ಎಂದು ಹೇಳಿದ್ದಾರೆ. ಕರುಳಿನ ಕ್ಯಾನ್ಸರ್ ನ ನೋವಿನಿಂದ ಬಳಲುತ್ತಿರುವ ಎಲ್ಎನ್ ಶಾಸ್ತ್ರಿ ಅವರಿಗೆ ಆರ್ಥಿಕ ಮುಗ್ಗಟ್ಟು ಕಾಡುತ್ತಿದ್ದು, ಸಹಾಯಹಸ್ತಕ್ಕಾಗಿ ಕಾದಿದ್ದಾರೆ ಎಂದು ಗಣೇಶ್ ಕಾಸರಗೋಡು ಹೇಳಿದ್ದಾರೆ.
ಲಕ್ಷ್ಮಿನರಸಿಂಹ ಶಾಸ್ತ್ರಿ ಅವರ ಬ್ಯಾಂಕ್ ಖಾತೆಯ ಮಾಹಿತಿಯನ್ನೂ ಹಂಚಿಕೊಳ್ಳಲಾಗಿದೆ. ಅಕೌಂಟ್ ನಂಬರ್: 54055948416 SBI Bank Vinayaka Layout Vijayanagar Bangalore, Karnataka, IFSC: SBIN0040790 ಆರ್ಥಿಕ ನೆರವು ನೀಡಲು ಇಚ್ಛಿಸುವವರು ಈ ಬ್ಯಾಂಕ್ ಗೆ ಹಣ ಳಿಸಬಹುದಾಗಿದೆ.