ಬೆಳಗಾವಿ: ಹಿರಿಯ ರಂಗಕರ್ಮಿ ಏಣಗಿ ಬಾಳಪ್ಪ ಆ.18 ರಂದು ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
1914ರಲ್ಲಿ ಜನಿಸಿದ್ದ ಏಣಗಿ ಬಾಳಪ್ಪ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಏಣಗಿ ಬಾಳಪ್ಪ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಏಣಗಿಯ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ರಂಗಭೂಮಿಯಲ್ಲಿ ಅಪಾರ ಸಾಧನೆ ಮಾಡಿದ್ದ ಏಣಗಿ ಬಾಳಪ್ಪ ನಡೆದಾಡುವ ರಂಗಭೂಮಿಯ ವಿಶ್ವಕೋಶ ಎಂದೇ ಖ್ಯಾತಿ ಗಳಿಸಿದ್ದರು.
103 ವರ್ಷದ ಏಣಗಿ ಬಾಳಪ್ಪ ಬೆಳಗಾವಿ ಜಿಲ್ಲೆಯ 'ಸವದತ್ತಿ' ತಾಲ್ಲೂಕಿನ 'ಏಣಗಿ' ಗ್ರಾಮದದಲ್ಲಿ 1914ರಲ್ಲಿ ಲೋಕುರ ಮನೆತನದ ಬಾಳಮ್ಮ ಹಾಗು ಕರಿಬಸಪ್ಪನವರ ಮಗನಾಗಿ ಜನಿಸಿದರು. ನಾಟಕ ಮಾಸ್ತರರಾಗಿದ್ದ ಚಿಕ್ಕೋಡಿ ಶಿವಲಿಂಗ ಸ್ವಾಮಿಗಳು ಬಾಳಪ್ಪನವರನ್ನು ಶಿಷ್ಯರನ್ನಾಗಿ ಸ್ವೀಕರಿಸಿ ಉದ್ಧರಿಸಿದರು. ಸ್ತ್ರೀ ಪಾತ್ರದ ಮೂಲಕವೇ ಇವರು ಪ್ರಸಿದ್ಧರಾದವರು. 'ಕಿತ್ತೂರು ರುದ್ರಮ್ಮ' ನಾಟಕದ ರುದ್ರಮ್ಮನ ಪಾತ್ರ ಇವರ ಮೊಟ್ಟಮೊದಲ ಸ್ರೀಪಾತ್ರವಾಗಿತ್ತು.