ಬೆಂಗಳೂರು: ‘ಸರಿಗಮಪ ಸೀಸನ್ 13’ ಕಾರ್ಯಕ್ರಮದಲ್ಲಿ ರನ್ನರ್ ಆಪ್ ಆಗಿದ್ದ ಮೆಹಬೂಬ್ ಸಾಬ್ ಅವರು ಸಂದೇಶ್ ಶೆಟ್ಟಿ ನಿರ್ದೇಶನದ ‘ಕತ್ತಲ ಕೋಣೆ’ ಚಿತ್ರದಲ್ಲಿ ಹಾಡುವ ಅವಕಾಶವನ್ನು ಪಡೆದಿದ್ದಾರೆ.
ಮೆಹಬೂಬ್ ಧ್ವನಿಯನ್ನು ಇಷ್ಟಪಟ್ಟ ನಿರ್ದೇಶಕರು ಕರೆ ಮಾಡಿ ತನ್ನ್ ಚಿತ್ರಕ್ಕೆ ಹಾಡೊಂದನ್ನು ಹಾಡುವಂತೆ ಕೇಳಿಕೊಂಡಿದ್ದಾರೆ. ಇದಕ್ಕೆ ಮೆಹಬೂಬ್ ಕೂಡಾ ಒಪ್ಪಿದ್ದಾರೆ. ಹಾಡಿನ ರೆಕಾರ್ಡಿಂಗ್‌ಗೆ ಡೇಟ್ ಇನ್ನೂ ನಿಗದಿಯಾಗಿಲ್ಲ.
ದಾವಣಗೆರೆ ವೀರೇಶ್ವರ ಪುಣ್ಯಾಶ್ರಮದಲ್ಲಿ ಸಂಗೀತ ಅಭ್ಯಾಸ ಮಾಡಿ ಸಂಗೀತದಲ್ಲಿ ಆಸಕ್ತಿ ಬೆಳೆಸಿಕೊಂಡ ಮೆಹಬೂಬ್ ಆಕಸ್ಮಿಕವಾಗಿ ಸರಿಗಮಪ ಸೀಸನ್-13ರಲ್ಲಿ ಪಾಲ್ಗೊಂಡು ರನ್ನರ್ ಅಪ್ ಸ್ಥಾನ ಪಡೆದಿದ್ದರು.
ಮೂಲತಃ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಹರ್ಲಾಪುರ ಗ್ರಾಮದ ಮೆಹಬೂಬ್ ಸಾಬ್ ಪಿಂಜಾರ ಸಮಾಜದ ಶರೀಫ್ ಮತ್ತು ರಜೀಯಾ ಬೇಗಂ ದಂಪತಿ ಪುತ್ರ. 28 ವರ್ಷದ ಇವರಿಗೆ ಒಬ್ಬ ಸಹೋದರ, ಇಬ್ಬರು ಸಹೋದರಿ ಇದ್ದಾರೆ. ತಂದೆ ಕೂಲಿ ಕೆಲಸ ಮಾಡಿ ಕುಟುಂಬ ಸಲಹುತ್ತಿದ್ದಾರೆ. ಪರಿಶ್ರಮಕ್ಕೆ ತಕ್ಕ ಫಲ ಸಿಗುವುದು ಖಚಿತ ಎನ್ನಲು ಇದೀಗ ಮೆಹಬೂಬ್ ಹೊಸ ಉದಾಹರಣೆ ಆಗಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos