ಶಾನ್ವಿ ಮತ್ತು ಮನೋರಂಜನ್ 
ಸಿನಿಮಾ ಸುದ್ದಿ

'ಗ್ಲಾಮರಸ್ ನಿಂದ ದೂರವಿರುವ ಮನೋರಂಜನ್ ಗೆ ಕಥೆ ಮೇಲೆ ಹೆಚ್ಚು ನಂಬಿಕೆ'

ಮನೋರಂಜನ್ ಗೆ ಕಲೆ ಎಂಬುದು ರಕ್ತಗತವಾಗಿಯೇ ಬಂದಿದೆ. ಸಾಹೇಬ ಸಿನಿಮಾದಲ್ಲಿ ನಟಿಸುತ್ತಿರು ಮನೋರಂಜನ್ ತಮ್ಮ ತಂದೆಯ ಹೆಸರನ್ನು ಬಳಸಿಕೊಳ್ಳದೇ ...

ಬೆಂಗಳೂರು: ಮನೋರಂಜನ್ ಗೆ ಕಲೆ ಎಂಬುದು ರಕ್ತಗತವಾಗಿಯೇ ಬಂದಿದೆ. ಸಾಹೇಬ ಸಿನಿಮಾದಲ್ಲಿ ನಟಿಸುತ್ತಿರು ಮನೋರಂಜನ್ ತಮ್ಮ ತಂದೆಯ ಹೆಸರನ್ನು ಬಳಸಿಕೊಳ್ಳದೇ ತನ್ನದೇ ದಾರಿಯಲ್ಲಿ ಹೆಸರು ಮಾಡುವ ಬಯಕೆ ಹೊಂದಿದ್ದಾರೆ.
ಸಿಟಿ ಎಕ್ಸ್ ಪ್ರೆಸ್ ಜೊತೆ ತಮ್ಮ ಸಾಹೇಬ ಸಿನಿಮಾದ ಅನುಭವಗಳನ್ನು ಮನೋರಂಜನ್ ಹಂಚಿಕೊಂಡಿದ್ದಾರೆ. ಅದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ. 
ನಿರ್ದೇಶಕ ಭರತ್ ಅವರ ಜೊತೆ ಕೆಲಸ ಮಾಡುವುದು ಒಂದು ವಿಶೇಷ ಅನುಭವ. ನನ್ನ ಕಡೆಯಿಂದ ನಾನು ಸಾಕಷ್ಟು ಪ್ರಾಮಾಣಿಕನಾಗಿದ್ದೇನೆ, ಸಿನಿಮಾವನ್ನು ಹೇಗೆ ಪ್ರಮೋಟ್ ಮಾಡಬೇಕು ಎಂಬುದರ ಬಗ್ಗೆ ನಾನು ಇನ್ನೂ ಕಲಿಯುತ್ತಿದ್ದೇನೆ. ಸಿನಿಮಾ ರಿಲೀಸ್ ಆಗಲು ವಿಳಂಭವಾಗಿದ್ದನ್ನು ಹೊರತು ಪಡಿಸಿದರೇ ನಾನು, ಚಿತ್ರೀಕರಣವನ್ನು ತುಂಬಾ ಎಂಜಾಯ್ ಮಾಡಿದ್ದೇನೆ. ಸಿನಿಮಾ ರಿಲೀಸ್ ಆಗದಿರುವುದಕ್ಕೆ ಹಲವಾರು ಟೀಕೆಗಳು ಕೇಳಿ ಬಂದಿವೆ, ಆದರೆ ಅದಕ್ಕಾಗಿ ನಾನು ಸಾರಿ ಕೇಳುತ್ತೇನೆ, ಅವರ ಪ್ರತಿಕ್ರಿಯೆ ಬಗ್ಗೆ ನನಗೆ ಅರ್ಥವಾಗುತ್ತದೆ.ಏಕೆಂದರೆ ಮೊದಲು ರಣಧೀರ ದ ಬಗ್ಗೆ ಪ್ಲಾನ್ ಮಾಡಿದ್ದೆವು. ಆದರೆ ಅದರ ಶೂಟಿಂಗ್ ಆರಂಭವಾಗಲೇ ಇಲ್ಲ, ಹೀಗಾಗಿ ಸಾಹೇಬ ಸಿನಿಮಾ ಮುಂದಿನ ವಾರ ಬಿಡುಗಡೆಗೆ ಸಿದ್ಧವಾಗಿದೆ.
ಸಾಹೇಬ ಸಿನಿಮಾ ಸಾಫ್ಟ್ ಕಥೆಯುಳ್ಳುದಾಗಿದೆ. ನಂದಕಿಶೋರ್ ನಿರ್ದೇಶನದ ವಿಐಪಿಯಲ್ಲಿ ಮಾಸ್ ರೋಲ್, ನನ್ನ ಮೂರನೇ ಸಿನಿಮಾಗೆ ಇನ್ನೂ ಟೈಟಲ್ ಅಂತಿಮವಾಗಿಲ್ಲ, ಅದರಲ್ಲಿ ತಂದೆ ಮತ್ತು ಮಗನ ಬಾಂಧವ್ಯದ ಕಥೆಯಾಗಿದೆ,ಇದು ವಿಭಿನ್ನ ಪಾತ್ರಗಳ ಮೇಲೆ ಪ್ರಯೋಗ ಮಾಡಲು ಸರಿಯಾದ ಸಮಯವಾಗಿದೆ.ಇದು ನನಗೆ ವಿಭಿನ್ನ ಅವಕಾಶ ನೀಡಿದೆ, ಹೀಗಾಗಿ ಮುಂದಿನ 10 ಸಿನಿಮಾಗಳಲ್ಲಿ  ವೈವಿಧ್ಯಮಯ ಪಾತ್ರ ನಿರ್ವಹಿಸಲಿದ್ದೇನೆ ಎಂದು ಹೇಳಿದ್ದಾರೆ.
ರವಿಚಂದ್ರನ್ ಅವರ ಪುತ್ರ ಎಂಬ ಹೆಸರಿರುವುದು ಮೊದಲ ಸಿನಿಮಾದಲ್ಲಿ ಬಹು ದೊಡ್ಡ ಸವಾಲು ಒಡ್ಡಿದೆ. ಕ್ರೇಜಿ ಸ್ಟಾರ್ ಅವರ ರೋಮ್ಯಾನ್ ಗಿಂತ ಪ್ರೇಕ್ಷಕರು ಹೆಚ್ಚಿನದನ್ನು ನಿರೀಕ್ಷಿಸುತ್ತಿರುತ್ತಾರೆ. ಸುಂದರವಾದ ನಾಯಕಿ, ಕಿಸ್ ಮತ್ತು ನನ್ನ ಸುತ್ತಮುತ್ತ ಹಲವು ಸಂಖ್ಯೆಯಲ್ಲಿ ಹುಡುಗಿಯರು ಇರುವುದನ್ನು ಬಯಸುತ್ತಾರೆ.
ಆದರೆ ಸಾಹೇಬ ಚಿತ್ರ ಸಂಪೂರ್ಣ ಕಥೆಯೇ ಜೀವಾಳವಾಗಿದೆ, ಉದ್ದೇಶಪೂರ್ವಕವಾಗಿಯೇ ಮೃದು ಪಾತ್ರವನ್ನು ಆರಿಸಿಕೊಳ್ಳಲಾಗಿದೆ ಎಂದು ಮನೋರಂಜನ್ ಹೇಳಿದ್ದಾರೆ. ಸಾಹೇಬ ಸಿನಿಮಾ ನನ್ನ ಹೃದಯಕ್ಕೆ ಹತ್ತಿರವಾದದ್ದಾಗಿದೆ, ನಾನು ಒಂಟಿಯಾಗಿರುತ್ತಿದ್ದ ವೇಳೆಯಲ್ಲಿ ಶಾನ್ವಿ ನನಗೆ ಉತ್ತಮ ಗೆಳತಿಯಾಗಿದ್ದಾಳೆ. ನಾನು ಕೂಡ ಸಿನಿಮಾದಲ್ಲಿ ಅತ್ಯುತ್ತಮವಾಗಿ ಡ್ಯಾನ್ಸ್ ಮಾಡಿದ್ದೇನೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT