ರಾಜರಥ ಸಿನಿಮಾ ತಂಡದೊಂದಿಗೆ ಶೃತಿ ಹರಿಹರನ್ 
ಸಿನಿಮಾ ಸುದ್ದಿ

ರಾಜರಥ ಸಿನಿಮಾದ ವಿಶೇಷ ಪಾತ್ರದಲ್ಲಿ ಶೃತಿ ಹರಿಹರನ್

ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ತಯಾರಾಗುತ್ತಿರುವ ಅನೂಪ್ ಭಂಡಾರಿ ನಿರ್ದೇಶನದ ರಾಜರಥ ಸಿನಿಮಾದಲ್ಲಿ ನಟಿ ಶೃತಿ ಹರಿಹರನ್ ಅತಿಥಿ...

ಬೆಂಗಳೂರು: ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ತಯಾರಾಗುತ್ತಿರುವ ಅನೂಪ್ ಭಂಡಾರಿ  ನಿರ್ದೇಶನದ ರಾಜರಥ ಸಿನಿಮಾದಲ್ಲಿ  ನಟಿ ಶೃತಿ ಹರಿಹರನ್ ಅತಿಥಿ ಪಾತ್ರದಲ್ಲಿ ಅಭಿನಯಿಸಲಿದ್ದಾರೆ.
ತೆಲುಗಿನ ಆರ್ಯ ಕೂಡ ಕನ್ನಡದ ರಾಜರಥ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅನೂಪ್ ಪ್ರಾಜೆಕ್ಟ್ ನಲ್ಲಿ ಕೆಲಸ ಮಾಡಲು ಶೃತಿ  ಉತ್ಸುಕರಾಗಿದ್ದಾರೆ, ಇವರಿಬ್ಬರು ಸ್ನೇಹಿತರಾಗಿದ್ದು, ಫ್ರೆಂಡ್ ಶಿಫ್ ಗಾಗಿ ಶೃತಿ ವಿಶೇಷ ಪಾತ್ರದಲ್ಲಿ ನಟಿಸಲಿದ್ದಾರೆ. ನಾನು ಅನೂಪ್ ಮತ್ತು ನಿರೂಪ್ ಸಹೋದರರ ಸಿನಿಮಾದಲ್ಲಿ ನಟಿಸಬೇಕೆಂದು ಯಾವಾಗಲೂ ಬಯಸುತ್ತಿದ್ದೆ ಎಂದು ಶೃತಿ ಹರಿಹರನ್ ಹೇಳಿದ್ದಾರೆ.
ರಂಗಿತರಂಗ ಸಿನಿಮಾ ಮಾಡುವ ವೇಳೆ ಅದರಲ್ಲಿ  ನಾನು ಪಾತ್ರ ಮಾಡಲು ಬಯಸಿದ್ದರು, ಆದರೆ ಅದೇ ವೇಳೆ ನನ್ನ ಲೂಸಿಯಾ ಸಿನಿಮಾ ಬಿಡುಗಡೆಯಾಗಿತ್ತು. ಹೀಗಾಗಿ ಆ ಚಿತ್ರದಲ್ಲಿ ನಟಿಸಲು ಸಾಧ್ಯವಾಗಲಿಲ್ಲ, ಅದನ್ನು ಸಿನಿಮಾ ಬಿಡುಗಡೆಯಾದ ನಂತರ ಅನೂಪ್ ಈ ವಿಷಯ ತಿಳಿಸಿದ್ದರು, ಅದಾದ ನಂತರ ನಾನು ಅನೂಪ್ ಸಿನಿಮಾದಲ್ಲಿ ನಟಿಸಲು ಕಾಯುತ್ತಿದ್ದೆ ಎಂದು ಶೃತಿ ಹೇಳಿದ್ದಾರೆ.
ತೆಲುಗು ಮತ್ತು ಕನ್ನಡದಲ್ಲಿ ಬರುತ್ತಿರುವ ರಾಜರಥ ದ್ವಿಭಾಷಾ ಸಿನಿಮಾದ ಬಗ್ಗೆ ನಿರ್ದೇಶಕರು ಕರೆ ಮಾಡಿ ಹೇಳಿದ ತಕ್ಷಣವೇ, ಎರಡನೇ ಯೋಚನೆಯಿಲ್ಲದೇ ನಾನು ಒಪ್ಪಿಕೊಂಡೆ. ಈ ಸಿನಿಮಾದಲ್ಲಿ ನನ್ನ ಅವಶ್ಯಕತೆಯಿದ್ದರೇ ಖಂಡಿತಾ ಅನೂಪ್ ನನಗೆ ಕರೆ ಮಾಡುತ್ತಾರೆ ಎಂದು ನನಗೆ ತಿಳಿದಿತ್ತು. ರಾಜರಥ ಸಿನಿಮಾಗಾಗಿ ಮೈಸೂರಿನಲ್ಲಿ ಶೂಟಿಂಗ್ ಮುಗಿಸಿದ್ದೇನೆ, ಅವರ ಪ್ರಾಜೆಕ್ಟ್ ನಲ್ಲಿ ನನಗೆ ಉತ್ತಮ ಪಾತ್ರ ನೀಡಿರುವುದಕ್ಕೆ ನನದೆ ಸಂತಸ ವಾಗಿದೆ ಎಂದು ಶೃತಿ ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT