ಬೆಂಗಳೂರು: ಗಜಕೇಸರಿ, ಹೆಬ್ಬುಲಿ ಚಿತ್ರಗಳ ಭಾರೀ ಯಶಸ್ಸಿನ ನಂತರ ನಿರ್ದೇಶಕ ಎಸ್.ಕೃಷ್ಣ ನಿರ್ಮಾಣದ ಮುಂದಿನ ಸಿನಿಮಾದಲ್ಲಿ ಸುದೀಪ್ ನಟಿಸಲಿದ್ದಾರೆ.
ಆರ್ ಆರ್ ಆರ್ ಪ್ರೊಡಕ್ಷನ್ ನಲ್ಲಿ ಗೃಹ ಲಕ್ಷ್ಮಿ, ಗಂಗಾ, ಸುಬ್ಬಲಕ್ಷ್ಮಿ ಸಂಸಾರ ಧಾರಾವಾಹಿಗಳನ್ನು ನಿರ್ಮಿಸಿರುವ ಸ್ವಪ್ನ ಕೃಷ್ಣ ಸುದೀಪ್ ಚಿತ್ರ ನಿರ್ದೇಶಿಸಲಿದ್ದಾರೆ.
ಗಣೇಶ ಚತುರ್ಥಿಯಂದು ಕೃಷ್ಣ ಟ್ವಿಟ್ಟರ್ ನಲ್ಲಿ ಈ ಸುದ್ದಿ ಪ್ರಕಟಿಸಿದ್ದಾರೆ. ಹೊಸ ಜರ್ನಿ ಸ್ವಪ್ನ ಕೃಷ್ಣ ಅವರ ನಿರ್ಮಾಣದಲ್ಲಿ ತಯಾರಾಗುತ್ತಿದ್ದು, ಸುದೀಪ್ ಗೆ ಅಭಿನಂದನೆ ತಿಳಿಸಿದ್ದಾರೆ.
ಹೊಸ ಸಿನಿಮಾಗೆ ಮುಂಗಡವಾಗಿ ಸುದೀಪ್ ಅವರಿಗೆ ನಾನು ನೀಡಿರುವುದು ಕೇವಲ 1,001 ರು ಮಾತ್ರ ಎಂದು ಕೃಷ್ಣ ಹೇಳಿದ್ದಾರೆ., ಅಕ್ಟೋಬರ್ ತಿಂಗಳ ಅಂತ್ಯದಲ್ಲಿ ಸಿನಿಮಾ ಶೂಟಿಂಗ್ ಆರಂಭವಾಗಲಿದ್ದು, ಸೆಪ್ಟಂಬರ್2 ರಂದು ಸುದೀಪ್ ಹುಟ್ಟು ಹಬ್ಬವಿದೆ, ಅಂದು ಸುದೀಪ್ ಹೊಸಲುಕ್ ನಲ್ಲಿ ಕಾಣಿಸಿಕೊಂಡಿರುವ ಫೋಟೋ ರಿಲೀಸ್ ಮಾಡುವುದಾಗಿ ತಿಳಿಸಿದ್ದಾರೆ.
ವಿಲ್ಲನ್ ಚಿತ್ರದ ವೇಳೆ ಬ್ಯಾಂಕಾಕ್ ನಲ್ಲಿ ಆಸ್ಟ್ರೇಲಿಯನ್ ಛಾಯಾಗ್ರಾಹಕನಿಂದ ಸುದೀಪ್ ಅವರ ಹೊಸ ಫೋಟೋ ಶೂಟ್ ನಡೆಸಲಾಗಿದೆ ಎಂದು ಕೃಷ್ಣ ಹೇಳಿದ್ದಾರೆ.
ಆರಂಭದಲ್ಲಿ ಕಾಮಿಡಿ ಕಥೆ ಆಧರಿತ ಸಿನಿಮಾ ಮಾಡಲು ನಿರ್ಧರಿಸಿದ್ದೆ. ಕ್ರೀಡಾ ಕಥೆಯಿರುವ ಸಿನಿಮಾ ಮಾಡಲುಪ ಕೆಲವರು ಸೂಚಿಸಿದರು ಹಾಗಾಗಿ ಕಮರ್ಷಿಯಲ್ ಎಂಟರ್ಟೈನರ್ ಸಿನಿಮಾ ಮಾಡಲು ನಿರ್ದರಿಸಿದ್ದಾರೆ, ಬಾಕ್ಸಿಂಗ್ ಸಂಬಂಧಿತ ಸಿನಿಮಾವಾಗಿದ್ದು, ಭಾವಾನಾತ್ಮಕ ಸಂದೇಸ ಕೂಡ ಅಡಗಿದೆ ಎಂದು ಮೂಲಗಳು ತಿಳಿಸಿವೆ.
ಸದ್ಯ ಬೇರೊಂದು ಪ್ರಾಜೆಕ್ಟ್ ನಲ್ಲಿ ಸುದೀಪ್ ಬ್ಯುಸಿಯಾಗಿದ್ದಾರೆ, ಇದೇ ಮೊದಲ ಬಾರಿಗೆ ತಮ್ಮ ವೃತ್ತಿ ಜೀವನದಲ್ಲಿ ಸುದೀಪ್ ಶರ್ಟ್ ಇಲ್ಲದೇ ಕಾಣಿಸಿಕೊಳ್ಳಲಿದ್ದಾರೆ.