ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿದ್ದ ಕಾಲೇಜ್ ಕುಮಾರ್ ಚಿತ್ರವನ್ನು ನಿರ್ದೇಶಿಸಿದ್ದ ಹರಿ ಸಂತೋಷ್ ಇದೀಗ ಶರಣ್ ಅವರಿಗೊಂದು ಚಿತ್ರ ಮಾಡುತ್ತಿರುವುದು ಪಕ್ಕಾ ಆಗಿದೆ.
ತರುಣ್ ಸುಧೀರ್ ಅವರು ಕಥೆ ಬರೆದಿದ್ದು ನಿರ್ದೇಶನದ ಜವಾಬ್ದಾರಿಯನ್ನು ಹರಿ ಸಂತೋಷ್ ಹೊತ್ತಿದ್ದಾರೆ. ಕನ್ನಡದಲ್ಲಿ ರೋಸ್ ಮತ್ತು ಲೀಡರ್ ಚಿತ್ರಗಳನ್ನು ನಿರ್ಮಿಸಿದ್ದ ತರುಣ್ ಶಿವಪ್ಪ ಅವರು ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಸದ್ಯಕ್ಕೆ ಶರಣ್ ಚಿತ್ರ ನಾಯಕನಾಗಿ ಪಕ್ಕಾ ಆಗಿದ್ದು ಉಳಿದಂತೆ ನಾಯಕಿ, ಕಲಾವಿದರು, ತಂತ್ರಜ್ಞರ ಮಾಹಿತಿ ಸದ್ಯಕ್ಕಿಲ್ಲ.
ಅನಿಲ್ ಕುಮಾರ್ ನಿರ್ದೇಶನದ ರ್ಯಾಂಬೋ 2 ಚಿತ್ರದಲ್ಲಿ ಶರಣ್ ಬ್ಯುಸಿಯಾಗಿದ್ದಾರೆ. ಹೊಸ ಚಿತ್ರದ ಮುಹೂರ್ತ ಡಿಸೆಂಬರ್ 15ರೊಳಗೆ ನಡೆಯಲಿದ್ದು ಈ ನಂತರ ಚಿತ್ರದ ಕುರಿತು ಸಂಪೂರ್ಣ ಮಾಹಿತಿ ಸಿಗಲಿದೆ. ಚಿತ್ರ ಜನವರಿ 15ರ ನಂತರ ಚಿತ್ರೀಕರಣ ನಡೆಯಲಿದ್ದು ಹರಿ ಸಂತೋಷ್ ಸದ್ಯ ಪ್ರೀ-ಪ್ರೋಡೆಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.