ಬೆಂಗಳೂರು: ಮಾಧವ ಚಿತ್ರರಂಗ ಪ್ರವೇಶಿಉತ್ತಿರುವ ಇನ್ನೊಂದು ಹೊಸ ಪ್ರತಿಭೆ. ಚಾನನಿರಾಜು ನೀರಮಾನ್ವಿ ಮಾರ್ಗದರ್ಶನದಲ್ಲಿ ಮಾಧವ ಹೊಸ ಚಿತ್ರದ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ಸಿನಿಮಾ ಉದ್ಯಮದ ವಿವಿಧ ವಿಭಾಗಗಳಲ್ಲಿ ಲ್ಲಿ ಕೆಲಸ ಮಾಡಿದ ಇವರು ನಂತರದಲ್ಲಿ ನಿರ್ದೇಶಕರಾದ ಚೇತನ್ ಕುಮಾರ್ ಮತ್ತು ಎಪಿ ಅರ್ಜುನ್ ಅವರಲ್ಲಿಸಹಾಯಕನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ.
ಇದೀಗ ಮಾಧವ ಸ್ವತಂತ್ರ ನಿರ್ದೇಶಕರಾಗಿದ್ದಾರೆ ತಮ್ಮದೇ ಚಿತ್ರ ನಿರ್ದೇಶನ ಪ್ರಾರಂಭಿಸಿದ್ದಾರೆ. ಅಂದಹಾಗೆ ಮಾಧವ, ನಟ ಯೋಗಿಶ್ ಅವರ ಸೋದರ ಸಂಬಂಧಿಯಾಗಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಲೂಸ್ ಮಾದ ಎಂದೇ ಖ್ಯಾತನಾಗಿರುವ ಯೋಗೀಶ್ ನಾಗರಾಹುವಿನ ಕಾರ್ಯನಿರ್ವಾಹಕ ನಿರ್ಮಾಪಕರಾಗಿದ್ದರು. ಇದೀಗ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ, ಈ ಚಿತ್ರಕ್ಕೆ ಸಜೀದ್ ಖುರೇಷಿ ಸಹ ಬೆಂಬಲ ಸೂಚಿಸಿದ್ದಾರೆ.
ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ಅವರ ಜನ್ಮ ದಿನವಾದ ಇಂದು ಚಿತ್ರದ ಶೀರ್ಷಿಕೆಯನ್ನು ಅನಾವರಣ ಗೊಳಿಸಲು ಅಚಿತ್ರತಂಡವು ಯೋಜಿಸಿದ್ದು ಚಾನನಿರಾಜು ಚಿತ್ರದ ಶೀರ್ಷಿಕೆಯನ್ನು ಬಹಿರಂಗಪಡಿಸದೆ ಹೋದರೂ, ನಮಗೆ ಲಭಿಸಿದ ಮಾಹಿತಿಯಂತೆ ಚಿತ್ರದ ಹೆಸರು 'ಭರಣಿ' ಎಂದಿದೆ. ಆದರೆ ಚಿತ್ರದ ಕುರಿತ ಇನ್ನೊಂದು ಸ್ವಾರಸ್ಯಕರ ಸಂಗತಿ ಎಂದರೆ ಚಿತ್ರಕ್ಕೆ 'ಪಾರ್ವತಮ್ಮನ ಮಗ' ಎನ್ನುವ ಉಪಶೀರ್ಷಿಕೆ ಇದೆ. ಇದು ಚಿತ್ರದ ಕುರಿತಂತೆ ಹೆಚ್ಚು ಭಾವನಾತ್ಮಕತೆಯನ್ನು ಉಂಟು ಮಾಡುತ್ತದೆ.
ಚಿತ್ರ ನಿರ್ಮಾಪಕರು ನಟ ನಟಿಯರ ಆಯ್ಕೆಯನ್ನು ಅಂತಿಮ ಗೊಳಿಸಿದ ಬಳಿಕ ಮುಂಬರುವ ಜನವರಿಯಿಂದ ಚಿತ್ರ ಸೆಟ್ಟೇರಲಿದೆ. ಆಗ ಇದಕ್ಕೆ ಸಂಬಂಧಿಸಿ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.