ಬಹುನಿರೀಕ್ಷಿತ ಚಿತ್ರ ಕುರುಕ್ಷೇತ್ರದಲ್ಲಿ ತಮ್ಮ ಭಾಗದ ಶೂಟಿಂಗ್ ನ್ನು ಮುಗಿಸಿರುವ ನಿಖಿಲ್ ಕುಮಾರ್, ನಿರ್ದೇಶಕ ಎ.ಹರ್ಷ ಜೊತೆ ಮುಂದಿನ ಸಿನಿಮಾಕ್ಕೆ ಸಜ್ಜಾಗುತ್ತಿದ್ದಾರೆ. ಸೀತಾರಾಮ ಕಲ್ಯಾಣ ಎಂದು ಚಿತ್ರಕ್ಕೆ ಶೀರ್ಷಿಕೆ ಇಡಲಾಗಿದೆ.
ಇದೇ 20ರಿಂದ ಚಿತ್ರದ ಶೂಟಿಂಗ್ ಆರಂಭವಾಗಲಿದ್ದು ಇಷ್ಟು ದಿನ ನಾಯಕಿಗಾಗಿ ಚಿತ್ರತಂಡ ಹುಡುಕಾಟ ನಡೆಸುತ್ತಿತ್ತು. ಕನ್ನಡದ ನಾಯಕಿಯೇ ಬೇಕೆಂದು ನಿರ್ದೇಶಕರು ಬಯಸಿದ್ದರು. ಹಲವು ನಾಯಕಿಯರ ಹುಡುಕಾಟ ನಡೆಸಿದ ನಂತರ ಇದೀಗ ಅಂತಿಮವಾಗಿ ರಚಿತಾ ರಾಮ್ ಅವರನ್ನು ಆಯ್ಕೆ ಮಾಡಲಾಗಿದೆ. ಚನ್ನಾಂಬಿಕಾ ಕ್ರಿಯೇಷನ್ ಈ ಬಗ್ಗೆ ಅಧಿಕೃತ ಮಾಹಿತಿ ನೀಡಲು ಬಾಕಿಯಿದೆಯಷ್ಟೆ.
ರಚಿತಾ ರಾಮ್ ಅವರ ಬಳಿ ಈಗಾಗಲೇ ಉತ್ತಮ ಚಿತ್ರಗಳಿವೆ. ಜಾನಿ ಜಾನಿ ಯಸ್ ಪಪ್ಪಾ ನಂತರ ಅಯೋಗ್ಯ ಚಿತ್ರಗಳಿಗೆ ನಾಯಕಿಯಾಗಿ ಈಗಾಗಲೇ ರಚಿತಾ ಆಯ್ಕೆಯಾಗಿದ್ದಾರೆ.