ಚಂಡೀಗಢ: ಹಾಕಿ ಕುರಿತಾದ ಚಿತ್ರ ಸೂರ್ಮಾದಲ್ಲಿ ನಟಿಸುತ್ತಿರುವ ದಿಲ್ಜಿತ್ ದೋಸಾಂಜ್ ಈ ಚಿತ್ರದಲ್ಲಿ ನಟಿಸಲು ಎರಡು ಮೂರು ಬಾರಿ ನಿರಾಕರಿಸಿದ್ದೆ ಎಂದು ಹೇಳಿದ್ದಾರೆ.
ದಿಲ್ಜಿತ್ ದೋಸಾಂಜ್, ಚಿತ್ರದಲ್ಲಿ ಭಾರತೀಯ ಹಾಕಿ ತಂಡದ ನಾಯಕ ಸಂದೀಪ್ ಸಿಂಗ್ ಅವರ ಪಾತ್ರ ನಿರ್ವಹಿಸುತ್ತಿದ್ದು, ಷಾದ್ ಅಲಿ ನಿರ್ದೇಶನದ ಚಿತ್ರದಲ್ಲಿ ನಟಿಸಲು ಈ ಹಿಂದೆ ಎರಡು ಮೂರು ಬಾರಿ ನಿರಾಕರಿಸಿದ್ದೆ ಎಂದು ಹೇಳಿದ್ದಾರೆ. ಈ ಹಿಂದೆ ಹಾಕಿ ಕುರಿತಾಗಿ ಚಕ್ ದೇ ಇಂಡಿಯಾ, ಅಕ್ಷಯ್ ಕುಮಾರ್ ಅವರ ಗೋಲ್ಡ್ ಸಿನಿಮಾ ಬಂದಿದೆ. ಮತ್ತೊಂದು ಸಿನಿಮಾವನ್ನು ಬೇಕಾದರೆ ಉಚಿತವಾಗಿ ಮಾಡುತ್ತೇನೆ ಎಂದಿದ್ದೆ. ಆದರೆ ನನಗೆ ಸೂರ್ಮಾ ಚಿತ್ರದ ಕಥೆ ಗೊತ್ತಿರಲಿಲ್ಲ. ಕೇವಲ ಅದು ಹಾಕಿ ಕುರಿತಾದ ಸಿನಿಮಾ ಎಂದಷ್ಟೇ ಗೊತ್ತಿತ್ತು ಎಂದು ದಿಲ್ಜಿತ್ ದೋಸಾಂಜ್ ಹೇಳಿದ್ದಾರೆ.
ಉಡ್ತಾ ಪಂಜಾಬ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ದಲ್ಜಿದ್ ದೋಸಾಂಜ್ ನಟಿಸಿದ್ದು, ಸಂದೀಪ್ ಸಿಂಗ್ ಅವರ ಜೀವನ ಪಯಣದ ಕಥೆ ಕೇಳಿದ ನಂತರ ಸೂರ್ಮಾ ಚಿತ್ರದಲ್ಲಿ ನಟಿಸಲು ಒಪ್ಪಿಗೆ ಸೂಚಿಸಿದ್ದಾಗಿ ದೋಸಾಂಜ್ ತಿಳಿಸಿದ್ದಾರೆ.