ಸ್ಯಾಂಡಲ್ವುಡ್ ಹಿರಿಯ ನಟ ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಗೌಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದು ಈ ಚಿತ್ರವನ್ನು ಸಂದೇಶ್ ನಾಗರಾಜ್ ನಿರ್ಮಾಣ ಮಾಡಲಿದ್ದಾರೆ.
ಅಭಿಷೇಕ್ ರನ್ನು ಚಿತ್ರರಂಗಕ್ಕೆ ಪರಿಚಯಿಸಲಾಗುತ್ತಿದ್ದು ಈ ಚಿತ್ರವನ್ನು ಸಂದೇಶ್ ಪ್ರೊಡೆಕ್ಷನ್ ಅಡಿಯಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು ಈ ಚಿತ್ರವನ್ನು ನಿರ್ಮಾಪಕ ಸಂದೇಶ್ ನಾಗರಾಜ್ ಅವರ ಪುತ್ರ ನಿರ್ಮಿಸುತ್ತಿದ್ದಾರೆ. ಈ ಚಿತ್ರದ ಕುರಿತಂತೆ ಸಂದೇಶ್ ನಾಗರಾಜ್ ಅವರು ಔಪಚಾರಿಕವಾಗಿ ಘೋಷಿಸಿದ್ದು ಈ ಚಿತ್ರವನ್ನು ಪವನ್ ಒಡೆಯರ್ ಅಥವಾ ಚೇತನ್ ಕುಮಾರ್ ಅವರು ನಿರ್ದೇಶಿಸುವ ಸಾಧ್ಯತೆ ಇದೆ.
ಚಿತ್ರದ ಕುರಿತಂತೆ ತಯಾರಿ ಕೆಲಸಗಳು ನಡೆಯುತ್ತಿವೆ. ಸಂದೇಶ್ ಪ್ರೋಡೆಕ್ಷನ್ ಅಡಿಯಲ್ಲಿ ತಯಾರಾಗುತ್ತಿರುವ 31ನೇ ಚಿತ್ರ ಇದಾಗಲಿದ್ದು ಈ ಹಿಂದೆ ದರ್ಶನ್ ಅಭಿನಯದ ಐರಾವತ ಚಿತ್ರವನ್ನು ನಿರ್ಮಾಣ ಮಾಡಲಾಗಿತ್ತು.
ಅಭಿಷೇಕ್ ಪಾದಾರ್ಪಣೆ ಚಿತ್ರಕ್ಕಾಗಿ ಇಬ್ಬರು ನಿರ್ದೇಶಕರನ್ನು ಪರಿಗಣಿಸಲಾಗಿದ್ದು ಮುಂದಿನ ದಿನಗಳಲ್ಲಿ ಪವನ್ ಒಡೆಯರ್ ಅಥವಾ ಚೇತನ್ ಕುಮಾರ್ ಒಬ್ಬರನ್ನು ಆಯ್ಕೆ ಮಾಡಲಾಗುತ್ತದೆ. ಚಿತ್ರಕಥೆಗೆ ಹೆಚ್ಚು ಹೊತ್ತು ನೀಡಲಾಗುತ್ತಿದ್ದು ಈ ಇಬ್ಬರು ನಿರ್ದೇಶಕರ ಪೈಕಿ ಯಾರ ಸ್ಕ್ರೀಪ್ಟ್ ಅಭಿಷೇಕ್ ಗೆ ಒಪ್ಪುತ್ತದೆಯೋ ಅವರನ್ನು ನಿರ್ದೇಶಕನನ್ನಾಗಿ ಆಯ್ಕೆ ಮಾಡಲಾಗುವುದು ಎಂದು ಸಂದೇಶ್ ನಾಗರಾಜ್ ಅವರು ಹೇಳಿದ್ದಾರೆ.
ಅಭಿಷೇಕ್ ರನ್ನು ಅದ್ಧೂರಿಯಾಗಿ ಸ್ಯಾಂಡಲ್ವುಡ್ ಗೆ ಪರಿಚಯಿಸಲು ಸಕಲ ಸಿದ್ಧತೆಗಳು ನಡೆಯುತ್ತಿದ್ದು ನಟನ ಕೌಶಲ್ಯ ಕಲಿಕೆಯಲ್ಲಿ ಅಭಿಷೇಕ್ ತೊಡಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics