ರಜನಿಕಾಂತ್ 
ಸಿನಿಮಾ ಸುದ್ದಿ

ರಜನಿಕಾಂತ್ ಗೆ 67ನೇ ಜನ್ಮ ದಿನದ ಸಂಭ್ರಮ, ಸಂಭ್ರಮಾಚರಣೆಗಳಿಂದ ದೂರ ಉಳಿಯಲಿರುವ ಸೂಪರ್ ಸ್ಟಾರ್

ಸೂಪರ್ ಸ್ಟಾರ್ ನಟ ರಜನಿಕಾಂತ್ ಗೆ ಇಂದು 67ನೇ ಜನ್ಮ ದಿನದ ಸಂಭ್ರಮ. ಆದರೆ ಅಭಿಮಾನಿಗಳ ಪಾಲಿನ ಆರಾದ್ಯ ದೈವವಾದ ನಟ ರಜನಿಕಾಂತ್ .........

ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಗೆ ಇಂದು 67ನೇ  ಜನ್ಮ ದಿನದ ಸಂಭ್ರಮ. ಆದರೆ ಅಭಿಮಾನಿಗಳ ಪಾಲಿನ ಆರಾದ್ಯ ದೈವವಾದ ನಟ ರಜನಿಕಾಂತ್ ಈ ಬಾರಿ ಹುಟ್ಟು ಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಳ್ಳದೆ ಇರಲು ತೀರ್ಮಾನಿಸಿದ್ದಾರೆ.
ತಮಿಳುನಾಡಿಗೆ ಇತ್ತೀಚೆಗೆ ಅಪ್ಪಳಿಸಿದ ಓಖಿ ಚಂಡಮಾರುತದ ಕಾರಣ ಬಹಳಷ್ಟು ಹಾನಿಯಾಗಿದೆ. ಇದರಿಂದ 40ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ನೂರಾರು ಮಂದಿ ನಾಪತ್ತೆಯಾಗಿದ್ದಾರೆ. ರಾಜ್ಯದಲ್ಲಿನ ಈ ಕಠಿಣ ಸಂದರ್ಭದ ಕಾರಣ ನಟ ತಾನು ಅದ್ದೂರಿ ಹುಟ್ಟುಹಬ್ಬ ಆಚರಿಸಿಕೊಳ್ಳದೆ ಇರಲು ತೀರ್ಮಾನಿಸಿದ್ದಾರೆ.
ಕಳೆದ ಬಾರಿ ಚೆನ್ನೈ ಪ್ರವಾಹ ಹಾಗೂ ಜಯಲಲಿತಾ ಅವರ ಸಾವಿನ ಕಾರಣದಿಂದ ರಜನಿ ಹುಟ್ಟು ಹಬ್ಬ ಆಚರಣೆಯಿಂದ ದೂರ ಸರಿದಿದ್ದು ಈ ಬಾರಿ ಓಖಿ ಚಂಡಮಾರುತದ ಹಾವಳಿ ಕಾರಣ ಅಭಿಮಾನಿಗಳಿಗೆ ಮತ್ತೆ ನಿರಾಶೆಯುಂಟುಮಾಡಿದ್ದಾರೆ.
ರಜನಿಕಾಂತ್ ಸದ್ಯ ಶಂಕರ್ ಅವರ 2.0 ಹಾಗೂ ಪಾ ರಂಜಿತ್ ಅವರ ಕಾಲ ಚಿತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಜನುಮ ದಿನವಾದ ಇಂದು ರಜನಿ ಆಪ್ತೇಷ್ಟರ ಜತೆ ಕೆಲ ಸಮಯ ಕಳೆಯಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT