ಶ್ರೇಯಸ್ ಮಂಜು 
ಸಿನಿಮಾ ಸುದ್ದಿ

'ಕರ್ಣ'ನಾದ ನಿರ್ಮಾಪಕ ಮಂಜು ಪುತ್ರ ಶ್ರೇಯಸ್!

2018 ನೇ ವರ್ಷ ಸ್ಯಾಂಡಲ್ ವುಡ್ ಪಾಲಿಗೆ ಮಕ್ಕಳ ವರ್ಷವಾಗಿ ಕಾಣಿಸುತ್ತಿದೆ. ಅಂಬರೀಶ್ ಪುತ್ರ ಅಭಿಷೇಕ್ ಇದೇ ವರ್ಷ ಚಿತ್ರರಂಗ ಪ್ರವೇಶ ಮಾಡಲಿದ್ದಾರೆ.

ಬೆಂಗಳೂರು: 2018 ನೇ ವರ್ಷ ಸ್ಯಾಂಡಲ್ ವುಡ್ ಪಾಲಿಗೆ ಮಕ್ಕಳ ವರ್ಷವಾಗಿ ಕಾಣಿಸುತ್ತಿದೆ. ಅಂಬರೀಶ್ ಪುತ್ರ ಅಭಿಷೇಕ್ ಇದೇ ವರ್ಷ ಚಿತ್ರರಂಗ ಪ್ರವೇಶ ಮಾಡಲಿದ್ದಾರೆ. ಅದರೊಡನೆ ಖ್ಯಾತ ನಿರ್ಮಾಪಕ ಕೆ. ಮಂಜು ಅವರ ಮಗ ಶ್ರೇಯಸ್ ಮಂಜು ಸಹ ಸಿನಿಮಾ ರಂಗಕ್ಕೆ ಎಂಟ್ರಿ ಆಗಲಿದ್ದಾರೆ.
ಮಗನ ಬೆಳ್ಳಿತೆರೆ ಪ್ರವೇಶದ ಕುರಿತು ನಿರ್ಮಾಪಕ ಮಂಜು ಸಾಕಷ್ಟು ತಯಾರಿ ನಡೆಸಿದ್ದು ಶ್ರೇಯಸ್ ಮಂಜು ಮೊದಲ ಚಿತ್ರವನ್ನು ಇಮ್ರಾನ್ ಸರ್ಧಾರಿಯಾ ನಿರ್ದೇಶಿಸಲಿದ್ದಾರೆ. ಇದರೊಡನೆಯೇ ಇದೀಗ ಹೊಸ ಸುದ್ದಿಯೊಂದು ಬಂದಿದ್ದು ಅದರಂತೆ ಶ್ರೇಯಸ್ ಅವರ ಎರಡನೇ ಚಿತ್ರಕ್ಕೆ 'ಕೃಷ್ಣ ಲೀಲಾ' ಚಿತ್ರಕಥೆಗಾಗಿ ರಾಜ್ಯ ಪ್ರಶಸ್ತಿ ಪಡೆದಿರುವ ರಘು ಕೋವಿ ಆಕ್ಷನ್ ಕಟ್ ಹೇಳುತ್ತಿದ್ದಾರೆ!
ಹೌದು ಅಚ್ಚರಿಯಾದರೂ ಇದು ನಿಜ. ಮೊದಲ ಚಿತ್ರ ಬಿಡುಗಡೆಗೆ ಮುನ್ನವೇ ಎರಡನೇ ಚಿತ್ರಕ್ಕೆ ತಯಾರಿ ನಡೆದಿದೆ. ಅಂದಹಾಗೆ ಆ ಚಿತ್ರಕ್ಕೆ 'ಕರ್ಣ' ಎಂದು ಹೆಸರಿಡಲಾಗಿದೆ. 1986 ರಲ್ಲಿ ವಿಷ್ಣುವರ್ಧನ್ ಹಾಗೂ ಸುಮಲತಾ ಅಭಿನಯದಲ್ಲಿ ಮೂಡಿಬಂದಿದ್ದ 'ಕರ್ಣ' ಚಿತ್ರ ಯಶಸ್ವಿ ಚಿತ್ರವೆನಿಸಿತ್ತು. ಇದು ಹಿಂದಿಯಲ್ಲಿ ಅನಿಲ್ ಕಪೂರ್ ಹಾಗೂ ಅಮೃತಾ ಸಿಂಗ್ ಅಭಿನಯಿಸಿದ್ದ 'ಸಾಹೇಬ' ಚಿತ್ರದ ಕನ್ನಡ ಅವತರಣಿಕೆಯಾಗಿದೆ.
"ಚಿತ್ರದ ಟೈಟಲ್ ಕೇಳಿದಾಕ್ಷಣ ಇದೊಂದು ಕಾಲ್ಪನಿಕ ಕಥೆಯಲ್ಲ ಎಂದೆನಿಸುತ್ತದೆ. ಆದರೆ ಇದನ್ನು ತೆರೆಯ ಮೇಲೆ ತರಲು ಸಾಕಷ್ಟು ಕಾಲಾವಕಾಶ ಬೇಕು. ನಿರ್ಮಾಪಕ ಮಂಜು ಚಿತ್ರಕಥೆಯ ಕುರಿತು ಸಾಕಷ್ಟು ಮುತುವರ್ಜಿ ವಹಿಸಿದ್ದಾರೆ. ಚಿತ್ರದಲ್ಲಿ ಬರುವ ಪ್ರತಿಯೊಂದು ಶಾಟ್ ಸಹ ಕಥೆಗೆ ವ್ಯತಿರಿಕ್ತವಾಗಿರಬಾರದು ಎನ್ನುವುದು ಅವರ ಕಾಳಜಿ." ಎಂದು ಚಿತ್ರದ ಕುರಿತಂತೆ ನಮ್ಮ ಮೂಲಗಳು ಮಾಹಿತಿ ನೀಡಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಏ.10 ಕ್ಕೆ ರಾಜ್ಯಸಭಾ ಸದಸ್ಯರಾಗಿ ನಿತೀಶ್ ಕುಮಾರ್ ಪ್ರಮಾಣ ವಚನ ಸ್ವೀಕಾರ! ಸಿಎಂ ಸ್ಥಾನಕ್ಕೆ ರಾಜೀನಾಮೆ?

ಬಾಗಲಕೋಟೆ ಉಪಚುನಾವಣೆ: BJP ಅಭ್ಯರ್ಥಿ ವಿರುದ್ಧ ಕರಪತ್ರ ಹಂಚಿಕೆ: ಇಬ್ಬರು ಪೊಲೀಸ್ ಅಧಿಕಾರಿಗಳ ಎತ್ತಂಗಡಿ!

ವಿಶೇಷ ಪಡೆ, ಹತ್ತಾರು ಸೇನಾ ವಿಮಾನ: ಶತ್ರು ನೆಲದಲ್ಲಿ ಬಿದ್ದ ತನ್ನ ಪೈಲಟ್​ ನ್ನು ಅಮೆರಿಕ ರಕ್ಷಿಸಿದ್ದೇ ರೋಚಕ!

ಅಕ್ರಮ ಬಾಂಗ್ಲಾ ವಲಸಿಗರಿಗೆ ಹೊಸ ತಲೆನೋವು; ಗಡಿಗಳಲ್ಲಿ ಹಾವು. ಮೊಸಳೆಗಳ ನಿಯೋಜನೆ: BSF ಗಂಭೀರ ಚಿಂತನೆ!

ಇರಾನ್ ವಿರುದ್ಧದ ಯುದ್ಧ ಅಮೆರಿಕಾಗೆ ತಿರುಗುಬಾಣ!: ಇಂಧನ, ಸಾರಿಗೆ ದರ ದುಪ್ಪಟ್ಟು, ಜನಸಾಮಾನ್ಯರು ಹೈರಾಣ; ಟ್ರಂಪ್ ಗೆ ಹಿಡಿಶಾಪ!

SCROLL FOR NEXT