ರಾಮ ರಾಮ ರೇ ಚಿತ್ರದಲ್ಲಿ ಸಹನಟನೊಂದಿಗೆ ನಟಿ ಬಿಂಬಶ್ರೀ
ರಾಮ ರಾಮ ರೇ ಚೊಚ್ಚಲ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ್ದರೂ ಕೂಡ ಅದಾಗಿ ಸುಮಾರು ಒಂದು ವರ್ಷ ಕಳೆದ ನಂತರ ಇನ್ನೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ ನಟಿ ಬಿಂಬಶ್ರೀ. ತಮ್ಮ ಮೊದಲ ಚಿತ್ರದಲ್ಲಿ ಡಿ-ಗ್ಲಾಮರಸ್ ಪಾತ್ರ ವಹಿಸಿ ಪ್ರಶಂಸೆ ಗಿಟ್ಟಿಸಿಕೊಂಡಿದ್ದ ಬಿಂಬಶ್ರೀ ಇದೀಗ ತಮ್ಮ ಅವತಾರವನ್ನು ಬದಲಾಯಿಸಲು ಹೊರಟಿದ್ದಾರೆ.
ರಾಮ ರಾಮ ರೇಯ ಸುಬ್ಬಿ ಪಾತ್ರದ ರೀತಿಯ ಪಾತ್ರ ಮಾಡಲು ಅನೇಕರು ನನ್ನನ್ನು ಸಂಪರ್ಕಿಸಿದ್ದರು. ಆದರೆ ಅದೇ ತರಹದ ಪಾತ್ರಗಳನ್ನು ಮಾಡಲು ನನಗಿಷ್ಟವಿರಲಿಲ್ಲ. ಬೇರೆ ಪಾತ್ರಗಳಿಗಾಗಿ ನಾನು ಕಾಯುತ್ತಿದ್ದೆ. ಇನ್ನು ಕೆಲವರು ಬೇರೆ ರೀತಿಯ ಪಾತ್ರಗಳು ಆದರೆ ಎರಡನೇ ಪಾತ್ರಕ್ಕೆ ಸಂಪರ್ಕಿಸಿದ್ದರು. ಅದು ಕೂಡ ಮಾಡಲು ನನಗೆ ಇಷ್ಟವಿರಲಿಲ್ಲ. ಹೆಸರಿಗೆ ಮಾತ್ರ ಚಿತ್ರಗಳಲ್ಲಿ ನಟಿಸದೆ ಪಾತ್ರಗಳಿಗೆ ಪ್ರಾಮುಖ್ಯತೆ ಸಿಗುವುದು ನನಗೆ ಮುಖ್ಯವಾಗಿದೆ. ಇದೆಲ್ಲಾ ಆಗಲು ಸ್ವಲ್ಪ ಸಮಯ ಹಿಡಿಯಿತು ಎಂದು ಇಷ್ಟು ಸಮಯದ ಗ್ಯಾಪ್ ನ ಬಗ್ಗೆ ಹೇಳುತ್ತಾರೆ.
ಇನ್ನೂ ಶೀರ್ಷಿಕೆಯಿಡದೆ ಚಿತ್ರಕ್ಕೆ ಪ್ರಶಾಂತ್ ಎಂಬುವವರು ನಿರ್ದೇಶನ ಮಾಡುತ್ತಿದ್ದಾರೆ. ಇದೊಂದು ತ್ರಿಕೋನ ಪ್ರೇಮಕಥೆ ಎನ್ನುತ್ತಾರೆ ಬಿಂಬಶ್ರೀ. ಮಂಡ್ಯದಲ್ಲಿ ಇದೀಗ ತಮ್ಮ ಎರಡನೇ ಚಿತ್ರದ ಶೂಟಿಂಗ್ ನಲ್ಲಿ ನಿರತರಾಗಿದ್ದಾರೆ. ಚಿತ್ರದಲ್ಲಿ ಸೈಕಲ್ ಒಂದು ಮುಖ್ಯ ಪಾತ್ರವಾಗಿದೆ. ಚಿತ್ರದ ಸಂಭಾಷಣೆ ಇನ್ನೊಂದು ತಿಂಗಳಲ್ಲಿ ಮುಗಿಯಲಿದೆ. ಇದರೊಟ್ಟಿಗೆ ಮೂರನೇ ಚಿತ್ರದ ಬಗ್ಗೆ ಮಾತುಕತೆಯಲ್ಲಿದ್ದಾರೆ ಬಿಂಬಶ್ರೀ. ಮುಂದಿನ ದಿನಗಳಲ್ಲಿ ಉತ್ತಮ ಪಾತ್ರಗಳು ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ ಬಿಂಬಶ್ರೀ.