ರೊಮ್ಯಾಂಟಿಕ್ ದೃಶ್ಯಗಳ ಯಶಸ್ಸು ಉತ್ತಮ ಛಾಯಾಗ್ರಹಣವನ್ನು ಅವಲಂಬಿಸಿದೆ: ಸಂತೋಷ್ ರೈ
ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಕಿರಿಕ್ ಪಾರ್ಟಿ ರಶ್ಮಿಕಾ ಮಂದಣ್ಣ ಅಭಿನಯದ ಬಹು ನಿರೀಕ್ಷಿತ ಚಿತ್ರ 'ಚಮಕ್' ನ ಛಾಯಾಗ್ರಾಹಕ ಸಂತೋಷ್ ರೈ ವಾಣಿಜ್ಯೋದ್ದೇಶಿತ ಚಲನಚಿತ್ರಗಳ ಅನುಭವಿ ಛಾಯಾಗ್ರಾಹಕರಾಗಿದ್ದಾರೆ.ಇವರು ಸಾಮಾನ್ಯವಾಗಿ ಚಿತ್ರಕಥೆ ಉತ್ತಮವಾಗಿದ್ದರೆ ಮಾತ್ರವೇ ಆ ಚಿತ್ರದ ಛಾಯಾಗ್ರಹಣಕ್ಕೆ ಒಪ್ಪಿಕೊಳ್ಳುತ್ತಾರೆ. ಇದೀಗ ಸುನಿ ನಿರ್ದೇಶನದ 'ಚಮಕ್' ಗೂ ಸಹ ಅದರ ಉತ್ತಮ ಕಥಾಹಂದರದ ಕಾರಣ ಸಂತೋಷ್ ಈ ಪ್ರಾಜಕ್ಟ್ ಒಪ್ಪಿಕೊಂಡಿದ್ದಾರಂತೆ.
"ಚಿತ್ರದ ಚಿತ್ರೀಕರಣವು ಹೆಚ್ಚಿನ ಸಮಯ ತೆಗೆದುಕೊಳ್ಳುವ ಕಾರಣ ನಾನು ಚಿತ್ರದ ಆಯ್ಕೆಗಳಲ್ಲಿ ಅತ್ಯಂತ ಎಚ್ಚರ ವಹಿಸುತ್ತೇನೆ. "ರೋಮ್ಯಾಂಟಿಕ್ ಚಿತ್ರದ ದೃಶ್ಯಗಳನ್ನು ಸೆರೆಹಿಡಿಯುವುದು ಸ್ವತಃ ಒಂದು ಕಲೆ. ಪ್ರೇಮ ಕಥೆಗಳಲ್ಲಿ ದೃಶ್ಯಗಳು ಸಾಕಷ್ಟು ಗಮನ ಸೆಆಳೆಯುತ್ತವೆ. ಹೀಗಾಗಿ ನಾನು ಸಹ ರೊಮ್ಯಾಂಟಿಕ್ ಚಿತ್ರಗಳ ಛಾಯಾಗ್ರಹಣ ಮಾಡಲು ಹೆಚ್ಚು ಒತ್ತು ನೀಡುತ್ತೇನೆ" ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡುತ್ತಾ ಸಂತೋಷ್ ಹೇಳಿದರು.
"ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ನಂತಹಾ ಉತ್ತಮ ನಿರ್ಮಾಣ ಸಂಸ್ಥೆಯೊಡನೆ ನಿರ್ದೇಶಕ ಸುನಿ ಸಂಪರ್ಕ ಹೊಂದಿದ್ದು ಅವರ ಚಿತ್ರದಲ್ಲಿ ಣಾನು ಪಾಲುದಾರನಾಗಿರುವುದು ನನಗೆ ಸಂತಸ ಉಂಟು ಮಾಡಿದೆ." ಈ ಚಿತ್ರಕ್ಕಾಗಿ ಕಶ್ರೇಷ್ಠ ದರ್ಜೆಯ ಕ್ಯಮರಾಗಳಾದಾ ಕ್ಯಾಮೆರಾ ಆರ್ರಿ ಅಲೆಕ್ಸಾ SXT ಬಳಕೆಯಾಗುತ್ತಿದ್ದು ಕನ್ನಡ ಚಿತ್ರಗಳಲ್ಲಿ ಇದೇ ಮೊದಲ ಬಾರಿಗೆ ಇಂತಹಾ ಕ್ಯಾಮರಾ ತಂತ್ರಜ್ಞಾನ ಬಳಸಿ ಚಿತ್ರೀಕರಣ ನಡೆದಿದೆ. ಸಂತೋಷ್ ಈ ಕ್ಯಾಮರಾಗಳಿಂದ ಇಟಲಿ ಸೇರಿದಂತೆ ವಿದೇಶದಲ್ಲಿ ಚಿತ್ರೀಕರಣ ನಡೆಸಿದ್ದಾರೆ. ಒಂದು ಚಿತ್ರ ಉತ್ತಮವಾಗಿ ಮೂಡಿ ಬರಲು ನಾವು ನೂತನ ಪ್ರಯೋಗಗಳನ್ನು ನಡೆಸುವುದು ಅವಶ್ಯ ಎಂದು ಅವರು ಹೇಳುತ್ತಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos