ಸಹ ಸ್ಪರ್ಧಿ ಸಮೀರ್ ಆಚಾರ್ಯಗೆ ಥಳಿಸುತ್ತಿರುವ ಸಂಯುಕ್ತಾ ಹೆಗ್ಡೆ 
ಸಿನಿಮಾ ಸುದ್ದಿ

ಸಹ ಸ್ಪರ್ಧಿಗೆ ಥಳಿಸಿದ ಕಿರಿಕ್ ಹುಡುಗಿ ಸಂಯುಕ್ತ ಹೆಗ್ಡೆ ಬಿಗ್ ಹೌಸ್ ನಿಂದ ಕಿಕ್ ಔಟ್!

ಕನ್ನಡದ ಬಿಗ್ ಬಾಸ್ ರಿಯಾಲಿಟಿ ಶೋ ಮತ್ತೊಮ್ಮೆ ಕೆಟ್ಟ ಕಾರಣಕ್ಕೆ ಸುದ್ದಿಯಾಗಿದ್ದು, ಶೋಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದಿದ್ದ ಕಿರಿಕ್ ಹುಡುಗಿ ಸಂಯುಕ್ತ ಹೆಗ್ಡೆ ಮನೆಯಲ್ಲೂ ಕಿರಿಕ್ ಮಾಡಿಕೊಂಡು ಹೊರ ಬಂದಿದ್ದಾರೆ.

ಬೆಂಗಳೂರು: ಕನ್ನಡದ ಬಿಗ್ ಬಾಸ್ ರಿಯಾಲಿಟಿ ಶೋ ಮತ್ತೊಮ್ಮೆ ಕೆಟ್ಟ ಕಾರಣಕ್ಕೆ ಸುದ್ದಿಯಾಗಿದ್ದು, ಶೋಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದಿದ್ದ ಕಿರಿಕ್ ಹುಡುಗಿ ಸಂಯುಕ್ತ ಹೆಗ್ಡೆ ಮನೆಯಲ್ಲೂ ಕಿರಿಕ್ ಮಾಡಿಕೊಂಡು ಹೊರ ಬಂದಿದ್ದಾರೆ.
ಅತಿಥಿಯಾಗಿ ಬಿಗ್ ಬಾಸ್ ಮನೆಗೆ ಬಂದಿದ್ದ, ನಟಿ ಸಂಯುಕ್ತ ಹೆಗಡೆ ಮನೆಗೆ ಬಂದು ಇನ್ನೂ 15 ದಿನಗಳೂ ಕಳೆದಿಲ್ಲ ಆಗಲೇ ಸಹಸ್ಪರ್ಧಿ ಮೇಲೆ ಹಲ್ಲೆ ಮಾಡಿ ಶೋನಿಂದ ಕಿಕ್ ಔಟ್ ಆಗಿದ್ದಾರೆ. ಪ್ರತಿ ದಿನದ ಟಾಸ್ಕ್ ನಂತೆ ಬುಧವಾರ  ಸ್ಪರ್ಧಿಗಳಿಗೆ ಟಾಸ್ಕ್ ವೊಂದನ್ನು ನೀಡಲಾಗಿತ್ತು. ಅದರಂತೆ ಮಹಿಳಾ ತಂಡ ಹಾಗೂ ಪುರುಷ ತಂಡದ ಸ್ಪರ್ಧಿಗಳಿಗೆ ದಾರ ಕಟ್ಟಿದ ಗೋಪುರವನ್ನು ನೀಡಲಾಗಿತ್ತು. ಪುರುಷ ಸ್ಪರ್ಧಿಗಳು ಮಹಿಳಾ ಸ್ಪರ್ಧಿಗಳ ಬಳಿ ಇರುವ ಗೋಪುರದ  ದಾರವನ್ನು ಕತ್ತರಿಯಿಂದ ಕತ್ತರಿಸಬೇಕಿತ್ತು. ಈ ವೇಳೆ ತನ್ನನ್ನು ಸಮೀರ್ ಆಚಾರ್ಯ ಮುಟ್ಟಿದ್ರು ಅಂತ ಸಂಯುಕ್ತ ಅವರ ಮೇಲೆ ಕೈ ಮಾಡಿದ್ದಾರೆ. ಅಲ್ಲದೆ ಎರಡುಬಾರಿ ಅವರಿಗೆ ಹೊಡೆದಿದ್ದಾರೆ. ಈ ಕಾರಣದಿಂದ ಟಾಸ್ಕ್ ಅರ್ಧಕ್ಕೆ  ನಿಂತಿತು. 
ಈ ವೇಳೆ ಇಬ್ಬರನ್ನು ಕನ್ಫೆಶನ್ ರೂಮ್ ಗೆ ಕರೆದ ಬಿಗ್‍ಬಾಸ್ ಸಮೀರ್ ಮತ್ತು ಸಂಯುಕ್ತಾ ಹೇಳಿಕೆಯನ್ನು ಪಡೆದರು. ಕಡೆಗೆ ಸಂಯುಕ್ತಾ ಭಾವಾವೇಷದಿಂದ ಸಮೀರ್ ಮೇಲೆ ಕೈ ಮಾಡಿದ್ದಾರೆಂದು ಹೊರ ಹೋಗುವಂತೆ ಆದೇಶಿದರು.  ಮನೆಯಿಂದ ಹೊರ ಹೋಗುವ ಮುನ್ನ ಸಂಯುಕ್ತಾ ಸಮೀರ್ ಬಳಿ ಕ್ಷಮೆ ಕೇಳಿದರು. ಸಮೀರ್ ಕೂಡಾ ಸಂಯುಕ್ತಾರನ್ನು ಉದ್ದೇಶಿಸಿ ಇನ್ನೊಮ್ಮೆ ಯಾರ ಬಳಿಯೂ ಹೀಗೆ ಕೋಪ ಮಾಡಿಕೊಳ್ಳಬೇಡಿ ಎಂದು ಹೇಳಿ ಸಂಯುಕ್ತಾರನ್ನು  ಮನೆಯಿಂದ ಬೀಳ್ಕೊಟ್ಟರು.
ಬಿಗ್ ಬಾಸ್ ಮನೆ ಪ್ರವೇಶಕ್ಕೂ ಮುನ್ನ ತಮ್ಮ ಅಭಿನಯದ ಕಾಲೇಜ್ ಕುಮಾರ್ ಚಿತ್ರಕ್ಕೆ ಸಂಬಂಧಿಸಿದಂತೆಯೂ ನಿರ್ಮಾಪಕರೊಂದಿಗೆ ಕಿರಿಕ್ ಮಾಡಿಕೊಂಡಿದ್ದ ಸಂಯುಕ್ತ ಚಿತ್ರದ ಪ್ರಚಾರ ಕಾರ್ಯಕ್ರಮಕ್ಕೆ ಆಗಮಿಸಲಿಲ್ಲ ಎಂದು  ನಿರ್ಮಾಪಕರು ದೂರಿದ್ದರು. ಇದೀಗ ಮತ್ತೊಮ್ಮೆ ಬಿಗ್ ಬಾಸ್ ಮನೆಯಲ್ಲೂ ಕಿರಿಕ್ ಮಾಡಿಕೊಂಡು ಶೋಯಿಂದ ಹೊರ ನಡೆದಿದ್ದಾರೆ.
ಈ ಹಿಂದೆ ನಟ ಹುಚ್ಚಾ ವೆಂಕಟ್ ಕೂಡ ಸಹಸ್ಪರ್ಧಿಗೆ ಥಳಿಸುವ ಮೂಲಕ ಬಿಗ್ ಬಾಸ್ ರಿಯಾಲಿಟಿ ಶೋಯಿಂದ ಹೊರ ನಡೆದಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: MI vs RCB; ಫಿಲ್ ಸಾಲ್ಟ್, ಕೊಹ್ಲಿ, ಪಾಟಿದಾರ್ ಭರ್ಜರಿ ಬ್ಯಾಟಿಂಗ್, ಮುಂಬೈಗೆ ಗೆಲ್ಲಲು 241 ರನ್ ಬೃಹತ್ ಗುರಿ!

ಅತ್ಯಂತ ಸುಂದರ 'ಮದುವೆ ಹೆಣ್ಣು', 1 ಬಿಲಿಯನ್ ಡಾಲರ್ ಹಣ ಕೊಡಿ: Uganda ಸೇನಾ ಮುಖ್ಯಸ್ಥನ ವಿಚಿತ್ರ ಬೇಡಿಕೆ; Turkey ಬೇಸ್ತು!

ನೀವೇನ್ ಮುಚ್ಚೋದು.. ನಾವೇ ಬಂದ್ ಮಾಡ್ತೀವಿ: Hormuz ಜಲಸಂಧಿ ದಾಟುವ ಹಡಗುಗಳಿಗೆ US ನೌಕಾಪಡೆ ತಡೆ; ಇರಾನ್ ಗೆ ಟ್ರಂಪ್ ಶಾಕ್!

ಪಕ್ಷ ವಿರೋಧಿ ಚಟುವಟಿಕೆ: ಜಬ್ಬಾರ್ ರಾಜೀನಾಮೆ ಬೆನ್ನಲ್ಲೇ ಮತ್ತೊಂದು ಶಾಕ್; KPCC ಅಲ್ಪಸಂಖ್ಯಾತ ಘಟಕವನ್ನೇ ವಿಸರ್ಜಿಸಿದ DK Shivakumar

SCROLL FOR NEXT