ಧೃವ ಸರ್ಜಾ 
ಸಿನಿಮಾ ಸುದ್ದಿ

ಎಪಿ ಅರ್ಜುನ್ ಹಾಗೂ ಚೇತನ್ ಕುಮಾರ್ ಗೆ ಜೊತೆ ಧೃವ ಸರ್ಜಾ ಮತ್ತೊಂದು ಚಿತ್ರ!

ಧೃವ ಸರ್ಜಾ ಹ್ಯಾಟ್ರಿಕ್ ಸಾಧನೆ ಮಾಡಿದ್ದು, ಎಪಿ ಅರ್ಜುನ್ ಅವರ ನಿರ್ದೇಶನದ ಮೊದಲ ಸಿನಿಮಾದಿಂದ ಹಿಡಿದು, ಚೇತನ್ ಕುಮಾರ್ ಅವರ ಬಹದ್ದೂರ್ ಹಾಗೂ ಭರ್ಜರಿ ವರೆಗೂ ಸತತ ಯಶಸ್ಸುಗಳನ್ನು ಕಂಡಿದ್ದಾರೆ.

ಧೃವ ಸರ್ಜಾ ಹ್ಯಾಟ್ರಿಕ್ ಸಾಧನೆ ಮಾಡಿದ್ದು, ಎಪಿ ಅರ್ಜುನ್ ಅವರ ನಿರ್ದೇಶನದ ಮೊದಲ ಸಿನಿಮಾದಿಂದ ಹಿಡಿದು, ಚೇತನ್ ಕುಮಾರ್ ಅವರ ಬಹದ್ದೂರ್ ಹಾಗೂ ಭರ್ಜರಿ ವರೆಗೂ ಸತತ ಯಶಸ್ಸುಗಳನ್ನು ಕಂಡಿದ್ದಾರೆ.
ಭರ್ಜರಿ ಸಿನಿಮಾ ಶತದಿನಗಳನ್ನು ಪೂರೈಸಿರುವುದಕ್ಕೆ ಧೃವ ಸರ್ಜಾ ಅವರ ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಈ ಬೆನ್ನಲ್ಲೇ ಅಭಿಮಾನಿಗಳಿಗೆ ಮತ್ತೊಂದು ಸುದ್ದಿ ಇದ್ದು ಧೃವ ಸರ್ಜಾ ಮತ್ತೊಮ್ಮೆ ಎ.ಪಿ ಅರ್ಜುನ್ ಹಾಗು ಚೇತನ್ ಕುಮಾರ್ ಅವರೊಂದಿಗೆ ಸಿನಿಮಾ ಮಾಡಲಿದ್ದಾರೆ ಎಂದು ಸಿಟಿ ಎಕ್ಸ್ ಪ್ರೆಸ್ ವರದಿ ಮೂಲಕ ತಿಳಿದುಬಂದಿದೆ. 
ಎ.ಪಿ ಅರ್ಜುನ್, ಚೇತನ್ ಕುಮಾರ್ ಅವರೊಂದಿಗೆ ಕೆಲಸ ಮಾಡಿದರೆ ಮತ್ತೊಮ್ಮೆ ಇತಿಹಾಸ ನಿರ್ಮಿಸಬಹುದು ಎಂದು ಹೇಳಿದ್ದಾರೆ. ಇಷ್ಟೇ ಅಲ್ಲದೇ ಅಯೋಗ್ಯನ ಮೂಲಕ ನಿರ್ದೇಶಕನಾಗುತ್ತಿರುವ ಮಹೇಶ್ ಅವರೊಂದಿಗೂ ಧೃವ ಸರ್ಜಾ ಸಿನಿಮಾ ಮಾಡಲಿದ್ದಾರೆ ಎಂದು ತಿಳಿದುಬಂದಿದೆ. ಈಗಾಗಲೇ ಸ್ಕ್ರಿಪ್ಟ್ ನ್ನು ಒಪ್ಪಿರುವ ಧೃವ ಸರ್ಜಾ, ಪೊಗರು ಚಿತ್ರದ ನಂತರ ಈ ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದು, ಶೀಘ್ರವೇ ಚಿತ್ರದ ಬಗ್ಗೆ ಮಾಹಿತಿ ಬಹಿರಂಗವಾಗಲಿದೆ. ಚಿತ್ರ ನಿರ್ಮಾಪಕರ ಪೈಕಿ ಉದಯ್ ಮೆಹ್ತಾ ಧೃವ ಸರ್ಜಾ ಅವರೊಂದಿಗೆ ಕೆಲಸ ಮಾಡಲು ಉತ್ಸುಕರಾಗಿದ್ದು, ಇದನ್ನು ಗಮನದಲ್ಲಿಟ್ಟುಕೊಂಡು ಧೃವ ಸರ್ಜಾ ತಮ್ಮ ಶೆಡ್ಯೂಲ್‌ ನ್ನು ನಿಗದಿಪಡಿಸುತ್ತಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!