ಬಟರ್ ಫ್ಲೈ ಚಿತ್ರತಂಡ 
ಸಿನಿಮಾ ಸುದ್ದಿ

ಹಿಂದಿ ಭಾಷೆಯ ಚಿತ್ರಕ್ಕಿಂತ ಭಿನ್ನವಾಗಿರುತ್ತೆ 'ಕ್ವೀನ್': ರಮೇಶ್ ಅರವಿಂದ್

ನಿರ್ದೇಶಕ ರಮೇಶ್ ಅರವಿಂದ್ ಸದ್ಯ ಬಾಲಿವುಡ್ ನಟಿ ಕಂಗನಾ ರಣಾವತ್ ನಟಿಸಿದ್ದ ಯಶಸ್ವಿ ಕ್ವೀನ್ ಚಿತ್ರದ ಕನ್ನಡ ಮತ್ತು ತಮಿಳು ಅವತರಣಿಕೆ ಚಿತ್ರದ ನಿರ್ದೇಶನದಲ್ಲಿ...

ನಿರ್ದೇಶಕ ರಮೇಶ್ ಅರವಿಂದ್ ಸದ್ಯ ಬಾಲಿವುಡ್ ನಟಿ ಕಂಗನಾ ರಣಾವತ್ ನಟಿಸಿದ್ದ ಯಶಸ್ವಿ ಕ್ವೀನ್ ಚಿತ್ರದ ಕನ್ನಡ ಮತ್ತು ತಮಿಳು ಅವತರಣಿಕೆ ಚಿತ್ರದ ನಿರ್ದೇಶನದಲ್ಲಿ ತೊಡಗಿಕೊಂಡಿದ್ದಾರೆ. 
ಕನ್ನಡದ ಆವತರಣಿಕೆ ಬಟರ್ ಫ್ಲೈ ಚಿತ್ರದಲ್ಲಿ ಪಾರುಲ್ ಯಾದವ್ ಅಭಿನಯಿಸುತ್ತಿದ್ದರೆ ತಮಿಳಿನ ಆವತರಣಿಕೆಯಲ್ಲಿ ಕಾಜೋಲ್ ಅಗರ್ವಾಲ್ ನಟಿಸುತ್ತಿದ್ದಾರೆ. ಸದ್ಯ ಚಿತ್ರತಂಡ ಗೋಕರ್ಣಾದಲ್ಲಿ ಬಿಡುಬಿಟ್ಟಿದ್ದು ಬಟರ್ ಫ್ಲೈ ಚಿತ್ರದ ಕೆಲ ಭಾಗದ ಚಿತ್ರೀಕರಣವನ್ನು ಪೂರೈಸಿದೆ. ಇನ್ನ ಕನ್ನಡ ಮತ್ತು ತಮಿಳು ಆವತರಣಿಕೆಯ ಎರಡು ಚಿತ್ರಗಳ ಚಿತ್ರೀಕರಣಕ್ಕೆ ಚಿತ್ರತಂಡ ವಿದೇಶಕ್ಕೆ ತೆರಳಲಿದೆ. 
ರಮೇಶ್ ಅರವಿಂದ್ ಈ ಹಿಂದೆ ಚಿತ್ರದ ಕೆಲ ಫೋಟೋಗಳನ್ನು ಹಂಚಿಕೊಂಡಿದ್ದರು. ಪಾರುಲ್ ಯಾದವ್ ಲಂಗಾ ಬ್ಲೌಸ್ ನಲ್ಲಿ ಪಕ್ಕಾ ಹಳ್ಳಿ ಹುಡುಗಿಯಂತೆ ಕಾಣಿಸಿಕೊಂಡಿದ್ದರು. ಈ ಬಗ್ಗೆ ಮಾತನಾಡಿದ ರಮೇಶ್ ಅರವಿಂದ್ ಅವರು ಹಿಂದಿಯ ಬಾಷೆಯ ಕ್ವೀನ್ ಗಿಂತ ಈ ಚಿತ್ರ ಭಿನ್ನವಾಗಿತ್ತದೆ ಎಂದು ಹೇಳಿದ್ದಾರೆ. 
ಬಟರ್ ಫ್ಲೈ ಚಿತ್ರದ ಮೂಲಕ ಕನ್ನಡಕ್ಕೆ ಸಂಗೀತ ನಿರ್ದೇಶಕ ಅಮಿತ್ ತ್ರಿವೇದಿ ಪಾದಾರ್ಪಣೆ ಮಾಡುತ್ತಿದ್ದಾರೆ. ಹಿಂದಿ ಕ್ವೀನ್ ಚಿತ್ರಕ್ಕಿಂತ ಭಿನ್ನವಾಗಿ ಹೊಸ ರಾಗಗಳನ್ನು ಸಂಯೋಜನೆ ಮಾಡಿದ್ದಾರೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!