ಸಂಗ್ರಹ ಚಿತ್ರ 
ಸಿನಿಮಾ ಸುದ್ದಿ

ನಟಿ ಪಾರ್ವತಿ ಮೆನನ್ ಗೆ ಬೆದರಿಕೆ ಹಾಕಿದ್ದ ವ್ಯಕ್ತಿಯ ಬಂಧನ

ದಕ್ಷಿಣ ಭಾರತದ ಖ್ಯಾತ ನಟಿ ಪಾರ್ವತಿ ಮೆನೆನ್ ಗೆ ಸಾಮಾಜಿಕ ಜಾಲತಾಣದಲ್ಲಿ ಅತ್ಯಾಚಾರ, ಆ್ಯಸಿಡ್ ದಾಳಿಗಳಂತಹ ಬೆದರಿಕೆ ಹಾಕುತ್ತಿದ್ದ ವ್ಯಕ್ತಿಯನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.

ತಿರುವನಂತಪುರಂ: ದಕ್ಷಿಣ ಭಾರತದ ಖ್ಯಾತ ನಟಿ ಪಾರ್ವತಿ ಮೆನೆನ್ ಗೆ ಸಾಮಾಜಿಕ ಜಾಲತಾಣದಲ್ಲಿ ಅತ್ಯಾಚಾರ, ಆ್ಯಸಿಡ್ ದಾಳಿಗಳಂತಹ ಬೆದರಿಕೆ ಹಾಕುತ್ತಿದ್ದ ವ್ಯಕ್ತಿಯನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.
ಚಿತ್ರೋತ್ಸವ ಒಂದರಲ್ಲಿ ಭಾಗವಹಿಸಿದ್ದ ಪಾರ್ವತಿ ಮಮ್ಮುಟ್ಟಿ ನಟನೆಯ ‘ಕಸಬಾ’ ಚಿತ್ರದ ಸಂಭಾಷಣೆಯೊಂದನ್ನು ವಿರೋಧಿಸಿದ್ದರು, ಚಿತ್ರದಲ್ಲಿರುವ ಸಂಭಾಷಣೆಯು ಮಹಿಳೆಯರನ್ನು ಅವಹೇಳನ ಮಾಡಿದೆ ಎಂದವರು ಹೇಳಿದ್ದರು.  ಪಾರ್ವತಿ ಅವರ ಈ ಹೇಳಿಕೆಗೆ ವ್ಯಾಪಕ ಟೀಕೆಗಳು ಎದರಾಗಿದ್ದವು. ಅಲ್ಲದೆ ಸಾಮಾಜಿಕ ಜಾಲತಾಣಜಲ್ಲೂ ಟೀಕೆಗಳು ಬರಲಾರಂಭಿಸಿದ್ದವು. ಅಂತೆಯೇ  23 ವರ್ಷದ ಯುವಕನೊಬ್ಬ ಸಾಮಾಜಿಕ ಜಾಲತಾಣದಲ್ಲಿ ನಟಿ ಪಾರ್ವತಿಗೆ  ಅತ್ಯಾಚಾರ ಮತ್ತು ಆ್ಯಸಿಡ್ ದಾಳಿ ಮಾಡುವ ಕುರಿತು ಬೆದರಿಕೆ ಹಾಕಿದ್ದ.
ಇದರಿಂದ ಆಘಾತಕ್ಕೊಳಗಾಗಿದ್ದ ನಟಿ ಪಾರ್ವತಿ ತಿರುವನಂತಪುರ ಪೊಲೀಸರಿಗೆ ದೂರು ನೀಡಿದ್ದರು. ಐಟಿ ಕಾಯ್ದೆಯಡಿ ದೂರು ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿ ಇದೀಗ ಯುವಕನೋರ್ವನನ್ನು ಬಂಧಿಸಿದ್ದಾರೆ.  ಬಂಧಿತ ಯುವಕನನ್ನು ಸಿ.ಎಸ್. ಪಿಂಟೋ ಎಂದು ಗುರುತಿಸಲಾಗಿದೆ. ಪ್ರಸ್ತುತ ದುಷ್ಕರ್ಮಿ ಬಂಧನದಿಂದ ನಟಿ ಪಾರ್ವತಿ ನಿಟ್ಟಿಸಿರುವ ಬಿಡುವಂತಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿ ಕಟ್ಟಡ ದುರಂತ: ಮೃತರ ಸಂಖ್ಯೆ 7ಕ್ಕೆ ಏರಿಕೆ; ತಲೆಮರೆಸಿಕೊಂಡಿರುವ PG ಮಾಲೀಕನ ವಿರುದ್ಧ Lookout Notice ಜಾರಿ, ಇಂದು High courtನಲ್ಲಿ ತುರ್ತು ವಿಚಾರಣೆ..!

Devi Awards 2026: ಮಹಿಳೆಯರನ್ನು ಕೇವಲ ಫಲಾನುಭವಿಗಳಾಗಿ ನೋಡುವ ಬದಲು ಅಭಿವೃದ್ಧಿಯ ಪಾಲುದಾರರು, ನಾಯಕಿಯರನ್ನಾಗಿ ಪರಿಗಣಿಸಬೇಕು- ಒಡಿಶಾ ಡಿಸಿಎಂ

West asia conflict: ಬೆದರಿಕೆಗೆ ಮಣಿಯಲ್ಲ, ದಾಳಿ ನಿಲ್ಲದ ಹೊರತು ಹಾರ್ಮುಜ್ ಜಲಸಂಧಿ ತೆರೆಯಲ್ಲ: ಅಮೆರಿಕಾಕ್ಕೆ Iran ಖಡಕ್ ಸಂದೇಶ..!

'ಅಹಿಂದ ಯಾರ ಆಸ್ತಿಯೂ ಅಲ್ಲ'.. ಕರೆಯದೇ ಹೇಗೆ ಹೋಗಲಿ?: ಗುರುವಿನ ವಿರುದ್ಧ ಸಚಿವ ಸತೀಶ್ ಜಾರಕಿಹೊಳಿ ಗರಂ!

ದೆಹಲಿ ಹಾಸ್ಟೆಲ್ ದುರಂತ: ಸಾವಿನ ಸಂಖ್ಯೆ 6ಕ್ಕೆ ಏರಿಕೆ; 11 ಮಂದಿ ರಕ್ಷಣೆ, ಮುಂದುವರಿದ ರಕ್ಷಣಾ ಕಾರ್ಯಾಚರಣೆ