ಬಿಗ್ ಬಾಸ್ 10 ವಿಜೇತ ಮನ್ವೀರ್ ಗುರ್ಜರ್
ನೊಯ್ಡಾ: ಸಂಚಾರಕ್ಕೆ ತಡೆಯೊಡ್ಡಿ ತೊಂದರೆಯುಂಟುಮಾಡಿದ ಸಂಬಂಧ ಹಿಂದಿಯ ಬಿಗ್ ಬಾಸ್ 10 ಸರಣಿಯ ವಿಜೇತ ಮನ್ವೀರ್ ಗುರ್ಜರ್ ಮತ್ತು ಅವರ ಬೆಂಬಲಿಗರ ವಿರುದ್ಧ ನೊಯ್ಡಾ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ.
ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10ರಲ್ಲಿ ವಿಜೇತರಾದ ಮನ್ವೀರ್ನನ್ನು ಸ್ವಾಗತಿಸಲು ಅವರ ಅಭಿಮಾನಿಗಳು ಜನವರಿ 31ರಂದು ಅದ್ದೂರಿ ಸ್ವಾಗತ ಆಯೋಜಿಸಿದ್ದರು.ಕಾರ್ಯಕ್ರಮ ಆಯೋಜಕರು ನೊಯ್ಡಾದ 46 ವಲಯ ಉದ್ಯಾನವನದಲ್ಲಿ ಕಾರ್ಯಕ್ರಮ ನಡೆಸಲು ಅನುಮತಿ ಪಡೆದಿದ್ದರು. ಆದರೆ ಅಂದು ಪರಿಸ್ಥಿತಿ ಕೈ ಮೀರಿ ಸ್ಥಳದ ಹೊರಗೆ ತೀವ್ರ ಸಂಚಾರ ದಟ್ಟಣೆಯುಂಟಾಯಿತು. ಗುರ್ಜರ್ ಅಭಿಮಾನಿಗಳು ಕಾರ್ಯಕ್ರಮ ನಡೆದ ಸ್ಥಳದ ಹೊರಗೆ ಗಂಟೆಗಟ್ಟಲೆ ಸಂಚಾರ ತಡೆದಿದ್ದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯುಂಟಾಯಿತು ಎಂದು ಸೆಕ್ಟರ್ 39ರ ಹಿರಿಯ ಅಧಿಕಾರಿ ಅಮರ್ ನಾಥ್ ಯಾದವ್ ತಿಳಿಸಿದ್ದಾರೆ.
ಸಂಚಾರ ದಟ್ಟಣೆಯುಂಟಾಗಿ ಸಾರ್ವಜನಿಕರಿಗೆ ತೊಂದರೆಯುಂಟುಮಾಡಿದ ಹಿನ್ನೆಲೆಯಲ್ಲಿ ಮನ್ವೀರ್ ಮತ್ತು ಆತನ ಬೆಂಬಲಿಗರ ವಿರುದ್ಧ ಕೇಸು ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.