ಮುಂಬೈ: ಬಾಲಿವುಡ್ ನಟ ಹೃತಿಕ್ ರೋಷನ್ ಅವರ ತಾಯಿ ಪಿಂಕ್ ರೋಷನ್ ಅವರು ಉದಾರತೆಯನ್ನು ಮರೆದಿದ್ದು, ತೂಕ ಇಳಿಸಿಕೊಳ್ಳಲು ಮುಂಬೈಗೆ ಬಂದಿರುವ ವಿಶ್ವದ ಅತ್ಯಂತ ತೂಕದ ಮಹಿಳೆ ಎಮನ್ ಅಹ್ಮದ್ ಅವರ ಚಿಕಿತ್ಸೆಗೆ ಧನಸಹಾಯ ಮಾಡಿದ್ದಾರೆ.
ಈಜಿಪ್ಟ್ ಮೂಲದ ಎಮನ್ ಅಹ್ಮದ್ ಅವರು 500 ಕೆಜಿ ತೂಕವಿದ್ದು, ತೂಕ ಇಳಿಸಿಕೊಳ್ಳುವ ಸಲುವಾಗಿ ಮುಂಬೈಗೆ ಆಗಮಿಸಿದ್ದಾರೆ. ಚಿಕಿತ್ಸೆಗೆ ಬರೋಬ್ಬರಿ ರೂ.1 ಕೋಟಿ ಖರ್ಚಾಗಲಿದೆ.
ಈ ಹಿನ್ನಲೆಯಲ್ಲಿ ಚಿಕಿತ್ಸೆಗಾಗಿ ಬಾಲಿವುಡ್ ಸ್ಟಾರ್ ನಟ ಹೃತಿಕ್ ರೋಷನ್ ಅವರ ತಾಯಿ ಪಿಂಕಿ ರೋಷನ್ ಅವರು ರೂ. 10 ಲಕ್ಷ ಹಣನನ್ನು ಸಹಾಯಧನವಾಗಿ ನೀಡಿದ್ದಾರೆ.
ಮುಂಬೈನ ಸೈಫೀ ಆಸ್ಪತ್ರೆ ಎಮನ್ ಅಹ್ಮದ್ ಅವರಿಗೆ ಚಿಕಿತ್ಸೆ ನೀಡುತ್ತಿದೆ. ಈಗಾಗಲೇ ಎಮನ್ ಅವರಿಗೆ ಬಾರಿಯಾಟ್ರಿಕ್ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದ್ದು, ಚಿಕಿತ್ಸೆಗೆ ಮಹಿಳೆ ಸ್ಪಂದಿಸುತ್ತಿದ್ದಾರೆ. ಚಿಕಿತ್ಸೆಯಂತೆ ಈ ವರೆಗೂ ಸುಮಾರು 30 ಕೆಜಿಯಷ್ಟು ತೂಕವನ್ನು ಮಹಿಳೆ ಕಳೆದುಕೊಂಡಿದ್ದಾರೆ.