'ಪಿಂಕ್' ಸಿನೆಮಾದ ಸ್ಟಿಲ್ 
ಸಿನಿಮಾ ಸುದ್ದಿ

ರಾಷ್ಟ್ರಪತಿ ಜೊತೆಗೆ 'ಪಿಂಕ್' ಸಿನೆಮಾ ವೀಕ್ಷಿಸಲಿರುವ ಬಿಗ್ ಬಿ, ತಾಪ್ಸೀ

ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರೊಂದಿಗೆ ಶನಿವಾರ 'ಪಿಂಕ್' ಸಿನೆಮಾ ವೀಕ್ಷಿಸಲು ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಮತ್ತು ನಟಿ ತಾಪ್ಸೀ ಪನ್ನು ಅವರಿಗೆ ಆಹ್ವಾನಿಸಲಾಗಿದೆ.

ಮುಂಬೈ: ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರೊಂದಿಗೆ ಶನಿವಾರ 'ಪಿಂಕ್' ಸಿನೆಮಾ ವೀಕ್ಷಿಸಲು ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಮತ್ತು ನಟಿ ತಾಪ್ಸೀ ಪನ್ನು ಅವರಿಗೆ ಆಹ್ವಾನಿಸಲಾಗಿದೆ. 
ಅನಿರುದ್ಧ ರಾಯ್ ಚೌಧರಿ ನಿರ್ದೇಶನದ ಈ ಸಿನೆಮಾವನ್ನು ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ವೀಕ್ಷಿಸಲು ನಟರನ್ನು ಆಹ್ವಾನಿಸಲಾಗಿದೆ. 
"...ನಾಳೆ ದೆಹಲಿಯಲ್ಲಿ ಪ್ರಣಬ್ ಮುಖರ್ಜಿ ನಮ್ಮ ಸಿನೆಮಾ 'ಪಿಂಕ್' ವೀಕ್ಷಿಸಲಿದ್ದಾರೆ,... ಆದುದರಿಂದ ನಾವಲ್ಲಿಗೆ ಹೋಗಲಿದ್ದೇವೆ.. ಕೆಲವು ಘಂಟೆಗಳ ಕಾಲ" ಎಂದು ೭೪ ವರ್ಷದ ನಟ ಶುಕ್ರವಾರ ರಾತ್ರಿ ತಮ್ಮ ಬ್ಲಾಗ್ ನಲ್ಲಿ ಬರೆದುಕೊಂಡಿದ್ದಾರೆ. 
"ಸಿನೆಮಾದ ಸೃಜನಶೀಲ ಮನಸ್ಸುಗಳನ್ನು ಒಳಗೊಳ್ಳಲು ರಾಷ್ಟ್ರಪತಿ ತಮ್ಮ ಸಮಯದೊಂದಿಗೆ ಇಂದಿಗೂ ವಿಶಾಲ ಮನಸ್ಸಿನವರಾಗಿದ್ದಾರೆ. ಅವರಿಗೆ ಎಷ್ಟು ಧನ್ಯವಾದ ಹೇಳಿದರು ಕಡಿಮೆಯೇ" ಎಂದು ಕೂಡ ಬಿಗ್ ಬಿ ಬರೆದಿದ್ದಾರೆ. 
ಈ ಸಿನೆಮಾದ ಭಾಗವಾಗಿರುವ ತಾಪ್ಸೀ ಪನ್ನು ಕೂಡ ಟ್ವಿಟ್ಟರ್ ಮೂಲಕ ತಮ್ಮ ಅಭಿಮಾನಿಗಳಿಗೆ ಈ ವಿಷಯ ತಿಳಿಸಿದ್ದು "ಗೌರವಾನ್ವಿತ ರಾಷ್ಟ್ರಪತಿಗಳೊಂದಿಗೆ ಸಿನೆಮಾ ಮತ್ತು ರಾತ್ರಿ ಔತಣದ ಯೋಜನೆ ಇರುವುದು ಯಾರಿಗೆ ಊಹಿಸಿ?" ಎಂದು ಅವರು ಶನಿವಾರ ಬೆಳಗ್ಗೆ ಟ್ವೀಟ್ ಮಾಡಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT