ಮಹೆರ್ಶಲಾ ಆಲಿ ಅತ್ಯುತ್ತಮ ಪೋಷಕ ನಟ, ವಿಯೊಲಾ ಡೇವಿಸ್ ಅತ್ಯುತ್ತಮ ಪೋಷಕ ನಟಿ,
ನವದೆಹಲಿ: 89ನೇ ಆಸ್ಕರ್ ಪ್ರಶಸ್ತಿ ಪ್ರಕಟಗೊಂಡಿದ್ದು, 2017ನೇ ಸಾಲಿನ ಅತ್ಯುತ್ತಮ ಚಿತ್ರ ಪ್ರಶಸ್ತಿ ಲಾ ಲಾ ಲ್ಯಾಂಡ್ ಗೆ ಸಿಕ್ಕಿದೆ.
ಡೇಮಿಯಲ್ ಚಾಝೆಲ್ಲೆ ನಿರ್ದೇಶನದ ಅಮೆರಿಕಾದ ರೊಮ್ಯಾಂಟಿಕ್ ಕಾಮಿಡಿ ಚಿತ್ರವಾಗಿರುವ ಲಾ ಲಾ ಲ್ಯಾಂಡ್ ನಲ್ಲಿ ರ್ಯಾನ್ ಗೋಸ್ಲಿಂಗ್ ಮತ್ತು ಎಮ್ಮಾ ಸ್ಟೋನ್ ಅಭಿನಯಿಸಿದ್ದಾರೆ. 2017ನೇ ಸಾಲಿನ ಗೋಲ್ಡನ್ ಗ್ಲೋಬ್ಸ್ ನಲ್ಲಿ ಏಳು ಪ್ರಶಸ್ತಿ ಬಾಚಿಕೊಂಡಿದ್ದ ಮತ್ತು14ನೇ ಅಕಾಡೆಮಿ ಅವಾರ್ಡ್ಸ್ ಗೆ ನಾಮಾಂಕಿತಗೊಂಡಿದ್ದ ಲಾ ಲಾ ಲ್ಯಾಂಡ್ ಅಪಾರ ಜನಮೆಚ್ಚುಗೆ ಗಳಿಸಿತ್ತು.
ಉತ್ತಮ ಪೋಷಕ ನಟ ಮಹೆರ್ಶಾಲಾ ಆಲಿ ಅವರಿಗೆ ಸಂದಿದ್ದು ಮೂನ್ ಲೈಟ್ ಚಿತ್ರದ ಅತ್ಯತ್ತಮ ನಟನೆಗಾಗಿ ಆಲಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇನ್ನು ಫೆನ್ಸೆಸ್ ಚಿತ್ರದ ಅಭಿನಯಕ್ಕಾಗಿ ವಿಯೊಲಾ ಡೇವಿಸ್ ಗೆ ಉತ್ತಮ ಪೋಷಕ ನಟಿ ಪ್ರಶಸ್ತಿ ಸಿಕ್ಕಿದೆ. ಆಸ್ಕರ್ ಪ್ರಶಸ್ತಿ ಗಳಿಸಿದ ಮೊದಲ ಕಪ್ಪು ವರ್ಣದ ನಟಿ ಈಕೆಯಾಗಿದ್ದಾರೆ.