ನಟ ಗಣೇಶ್ 
ಸಿನಿಮಾ ಸುದ್ದಿ

ಪವನ್ ಕುಮಾರ್ 'ನಿಕೋಟಿನ್' ಸಿನೆಮಾದಲ್ಲಿ ಗಣೇಶ್ ನಟನೆ?

ನಾಲ್ಕು ಸಿನೆಮಾಗಳ ಬಿಡುಗಡೆಯೊಂದಿಗೆ ೨೦೧೬ ರನ್ನು ಹಿಂದಕ್ಕೆ ಹಾಕಿ ಈಗ ನಟ ಗಣೇಶ್ ೨೦೧೭ ರಲ್ಲಿ 'ಪಟಾಕಿ' ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ. ಹಾಗೆಯೇ ಯೋಗರಾಜ್ ಭಟ್ ಗರಡಿಗೆ ಹಿಂದಿಗಿರುವ

ಬೆಂಗಳೂರು: ನಾಲ್ಕು ಸಿನೆಮಾಗಳ ಬಿಡುಗಡೆಯೊಂದಿಗೆ ೨೦೧೬ ರನ್ನು ಹಿಂದಕ್ಕೆ ಹಾಕಿ ಈಗ ನಟ ಗಣೇಶ್ ೨೦೧೭ ರಲ್ಲಿ 'ಪಟಾಕಿ' ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ. ಹಾಗೆಯೇ ಯೋಗರಾಜ್ ಭಟ್ ಗರಡಿಗೆ ಹಿಂದಿಗಿರುವ ನಟ 'ಮುಗುಳು ನಗೆ' ಸಿನೆಮಾದ ನಿರ್ಮಾಪಕ ಮತ್ತು ನಾಯಕ ನಟ ಕೂಡ. ಈ ಸಿನೆಮಾವನ್ನು ಎಸ್ ಎಸ್ ಫಿಲಂಸ್, ಯೋಗರಾಜ್ ಮೂವೀಸ್ ಮತ್ತು ಗೋಲ್ಡನ್ ಮೂವೀಸ್ ಜಂಟಿಯಾಗಿ ನಿರ್ಮಿಸುತ್ತಿದೆ. 
ಹಾಗೆಯೇ ಚಂದ್ರಶೇಖರ್ ನಿರ್ಮಿಸುತ್ತಿರುವ, ಸುನಿ ನಿರ್ದೇಶನದ ಮತ್ತೊಂದು ಯೋಜನೆಯ ಭಾಗವು ಆಗಿದ್ದಾರೆ ಗಣೇಶ್. ಪವನ್ ಕುಮಾರ್ ಅವರ ಸಿ೧೦ಎಚ್೧೪ಎನ್೨ (ನಿಕೋಟಿನ್) ಸಿನೆಮಾದಲ್ಲಿ ಕೂಡ ನಟಿಸುವ ಆಸಕ್ತಿ ತೋರಿದ್ದಾರಂತೆ. 
ಇನ್ನು ಇದರ ಅಧಿಕೃತ ಘೋಷಣೆ ಹೊರಬಿದ್ದಿಲ್ಲವಾದರೂ, ಮೂಲಗಳ ಪ್ರಕಾರ ಗಣೇಶ್ ಸ್ಕ್ರಿಪ್ಟ್ ಓದಿ ಮುಗಿಸಿದ್ದು, ಹಸಿರು ನಿಶಾನೆ ತೋರಿದ್ದಾರಂತೆ. "ಪವನ್ ಕುಮಾರ್, ಗಣೇಶ್ ನಟಿಸಲಿರುವ ಪಾತ್ರದ ಮೇಲೆ ಕೆಲಸ ಮಾಡುತ್ತಿದ್ದಾರೆ ಹಾಗೆಯೇ ಈ ಸಿನೆಮಾದ ಮತ್ತೊಂದು ಪ್ರಮುಖ ಪಾತ್ರಕ್ಕೆ ನಟನನ್ನು ಹುಡುಕುತ್ತಿದ್ದಾರೆ" ಎಂದು ತಿಳಿಸುತ್ತವೆ ಮೂಲಗಳು. 
'ಲೂಸಿಯಾ' ಮತ್ತು 'ಯು ಟರ್ನ್' ಸಿನೆಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಭರವಸೆಯ ನಿರ್ದೇಶಕನಾಗಿ ಹೊರಹೊಮ್ಮಿರುವ ಪವನ್, ಈ ನಿಕೋಟಿನ್ ಬಗೆಗಿನ ಸಿನೆಮಾವನ್ನು ದೊಡ್ಡ ಬಜೆಟ್ ನಲ್ಲಿ ನಿರ್ಮಿಸುತ್ತಿದ್ದಾರೆ ಎಂದು ತಿಳಿದಿದ್ದು, ಮೇ ನಿಂದ ಚಿತ್ರೀಕರಣವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT