ಸಿನಿಮಾ ಸುದ್ದಿ

ಸ್ಫೂರ್ತಿ ಮಾತ್ರ, ನಕಲಲ್ಲ: ಪುಷ್ಪಕ ವಿಮಾನ ನಿರ್ದೇಶಕ ರವೀಂದ್ರನಾಥ್

Guruprasad Narayana
ಬೆಂಗಳೂರು: ನಟ-ನಿರ್ದೇಶಕ ರಮೇಶ್ ಅರವಿಂದ್ ನಟಿಸಿರುವ ೧೦೦ ನೇ ಚಿತ್ರ 'ಪುಷ್ಪಕ ವಿಮಾನ'ದ ನಿರ್ದೇಶಕ ಎಸ್ ರವೀಂದ್ರನಾಥ್, ತಾವು ನಿರ್ದೇಶಕರಾಗುವುದಕ್ಕೆ ಇರುವ ಅರ್ಹತೆಯನ್ನು, ಪದವಿಪೂರ್ವ ಕಾಲೇಜು ದಿನಗಳಿಂದ ಹಾಲಿವುಡ್ ಸಿನೆಮಾಗಳನ್ನು ನೋಡಿದ್ದು, ಗಾಂಧಿನನಗರದಲ್ಲಿ ಅಲೆದಾಡಿದ್ದು, ಕನ್ನಡ ಸಿನೆಮಾಗಳನ್ನು ಗಮನಿಸಿದ್ದು ಮತ್ತು 'ಎ' ಸಿನೆಮಾದ ನಿರ್ಮಾಪಕ ಬಿ ಜನನ್ನಾಥ್ ಜೊತೆಗೆ ಗೆಳೆಯನಾಗಿದ್ದು ಎಂದು ವಿವರಿಸುತ್ತಾರೆ. 
'ಪುಷ್ಪಕ ವಿಮಾನ' ತಮಿಳು ಸಿನೆಮಾ 'ದೈವ ತಿರುಮಗಳ್' ನ ರಿಮೇಕ್ ಎಂಬ ವದಂತಿಗಳನ್ನು ಅಲ್ಲಗೆಳೆಯುವ ನಿರ್ದೇಶಕ, ಹಾಲಿವುಡ್ ಸಿನೆಮಾಗಳಾದ 'ಮಿರಾಕಲ್ ಇನ್ ಸೆಲ್ ನಂ. ೭', ಲೈಫ್ ಇಸ್ ಬ್ಯುಟಿಫುಲ್' ಮತ್ತು 'ದ ಪರ್ಸ್ಯುಟ್ ಆಫ್ ಹ್ಯಾಪಿನೆಸ್' ಗಳಿಂದ ಸ್ಫೂರ್ತಿ ಪಡೆದಿದ್ದೇನೆ ಎನ್ನುತ್ತಾರೆ. "ತಮಿಳು ಸಿನೆಮಾದ ಒಂದು ಸಾಲು ಕೂಡ 'ಪುಷ್ಪಕ ವಿಮಾನ'ದಲ್ಲಿ ನಿಮಗೆ ಕಾಣಸಿಗುವುದಿಲ್ಲ. ನಾನು ಮಾನಸಿಕ ಅಸ್ವಸ್ಥ ವ್ಯಕ್ತಿಯ ಚಿತ್ರಣವನ್ನು ಮಾಡಬೇಕು ಎಂದೆನಿಸಿದಾಗ ನನ್ನ ಅಧ್ಯಯನವನ್ನು ಮಾಡಿದೆ. ಆಗಲೇ ನಾನು 'ಮಿರಾಕಲ್ ಇನ್ ಸೆಲ್ ನಂ. ೭' ನೋಡಿದ್ದು ಮತ್ತು ನನ್ನ ತಲೆಯಲ್ಲಿದ್ದ ಪಾತ್ರ, ಈ ಸಿನೆಮಾದ ಪಾತ್ರಕ್ಕೆ ಬಹಳ ಸಮೀಪವಿದೆ ಎನಿಸಿತು. ಭಾರತೀಯ ಸಂವೇದನೆಗಳಿಗೆ ಈ ಪಾತ್ರವನ್ನು ಅಭಿವೃದ್ಧಿಪಡಿಸಲು ಈ ಸಿನೆಮಾ ಸಹಕರಿಸಿತು. ಸ್ಫೂರ್ತಿ ಮತ್ತು ಕೆಲವು ಅಂಶಗಳನ್ನು ತೆಗೆದುಕೊಳ್ಳುವುದಕ್ಕೂ, ನಕಲು ಮಾಡುವುದಕ್ಕೂ ವ್ಯತ್ಯಾಸವಿದೆ" ಎನ್ನುತ್ತಾರೆ. 
ನಿರ್ಮಾಪಕರಿಗೆ 'ಮಿರಾಕಲ್ ಇನ್ ಸೆಲ್ ನಂ. ೭' ಸಿನೆಮಾದ ಸ್ಕ್ರೀನ್ ಪ್ಲೆ ಅನ್ನು ಆಡವಳಿಸಿಕೊಳ್ಳುತ್ತಿರುವುದಾಗಿ ಮೊದಲೇ ತಿಳಿಸಿದ್ದರಂತೆ ರವೀಂದ್ರನಾಥ್. "ಇಲ್ಲಿನ ಪ್ರೇಕ್ಷಕರ ನಿರೀಕ್ಷೆಗೆ ತಕ್ಕಂತೆ ಸಾಕಷ್ಟು ಬದಲಾವಣೆ ಮಾಡಿದ್ದೇನೆ. ಭಾರತೀಯ ಸಿನೆಮಾಗಳಲ್ಲಿ ಸಂಗೀತ ಮತ್ತು ಸಿನೆಮ್ಯಾಟೋಗ್ರಫಿ ಭಾವನೆಗಳನ್ನು ಕೆರಳಿಸುತ್ತದೆ. ಇಲ್ಲಿ ಪಾತ್ರಗಳ ಪರಿಕಲ್ಪನೆ ಕೂಡ ಸಂಪೂರ್ಣ ವಿಭಿನ್ನವಾಗಿದೆ. ತಂದೆ ಮತ್ತು ಮಗಳ ಸಂಬಂಧದ ಬಗ್ಗೆ ಮಾತನಾಡುವ ಸರಳ ಮನರಂಜನಾ ಸಿನೆಮಾ ಮತ್ತು ಇತ್ತೀಚಿನ ದಿನಗಳಲ್ಲಿ ಬಹಳ ವಿರಳ" ಎಂದು ವಿವರಿಸುತ್ತಾರೆ. 
ಈ ಸಿನೆಮಾ ಜನವರು ೬ ರಂದು ಬಿಡುಗಡೆಯಾಗಲಿದೆ. 
SCROLL FOR NEXT