ಸಿನಿಮಾ ಸುದ್ದಿ

ಶಿಷ್ಯನ ಕನಸಿಗೆ ರೆಕ್ಕೆ ಪುಕ್ಕ ಹಚ್ಚಿದ ನಿರ್ದೇಶಕ ಹರ್ಷ

Guruprasad Narayana
ಬೆಂಗಳೂರು: ಜನವರಿ ಮಧ್ಯಭಾಗದಿಂದ ಪುನೀತ್ ರಾಜಕುಮಾರ್ ನಟನೆಯ ಸಿನೆಮಾ ನಿರ್ದೇಶನ ಪ್ರಾರಂಭಿಸುವುದಕ್ಕೂ ಮುಂಚಿತವಾಗಿ, ನಿರ್ದೇಶಕ ಹರ್ಷ ತಮ್ಮ ಹಿಂದಿನ ಯೋಜನೆಯನ್ನು ಸಂಪೂರ್ಣಗೊಳಿಸಿದ್ದಾರೆ. ಅವರ ನಿರ್ದೇಶನದ ಸದ್ಯದ ಚಿತ್ರ 'ಕಪಿ ಚೇಷ್ಟೆ'ಯನ್ನು ಬಹುತೇಕ ಮುಗಿಸಿದ್ದಾರೆ. 
'ಕಪಿ ಚೇಷ್ಟೆ'ಯ ಇನ್ನೊಂದು ವಾರದ ಚಿತ್ರೀಕರಣವಷ್ಟೇ ಬಾಕಿ ಉಳಿದಿದ್ದು, ಇದು ಮಂಡ್ಯದಲ್ಲಿ ನಡೆಯಲಿದೆ. ಈ ಸಿನೆಮಾದ ನಾಯಕನಟನ ಪಾತ್ರದಲ್ಲಿ ಹರ್ಷ ಅವರ ಶಿಷ್ಯ ನೃತ್ಯಕಾರ ಮೋಹನ್ ನಟಿಸಿರುವುದು ವಿಶೇಷ. ದೀರ್ಘಕಾಲದಿಂದಲೂ ಮೋಹನ್ ಅವರು ಹರ್ಷ ಅವರ ನೃತ್ಯನಿರ್ದೇಶನದಲ್ಲಿ ಸಹಾಯಕರಾಗಿ ದುಡಿದಿದ್ದಾರೆ. 
ರಿಷಿ ಕಂಬೈನ್ಸ್ ಅಡಿ ಭಾಸ್ಕರ್ ಈ ಸಿನೆಮಾ ನಿರ್ಮಿಸುತ್ತಿದ್ದು, ಅಂಜನಾ ದೇಶಪಾಂಡೆ ನಾಯಕ ನಟಿ ಮತ್ತು ದಡಿಯ ಗಿರಿ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದು, ಸ್ವಾಮಿ ಕೆ ಅವರ ಸಿನೆಮ್ಯಾಟೋಗ್ರಫಿ ಚಿತ್ರಕ್ಕಿದೆ. 
SCROLL FOR NEXT