ಗುರುನಂದನ್ ಮತ್ತು ಅವಂತಿಕಾ ಶೆಟ್ಟಿ
ಬೆಂಗಳೂರು: ಚೊಚ್ಚಲ ಸಿನೆಮಾ '೧ಸ್ಟ್ ರ್ಯಾಂಕ್ ರಾಜು' ನಿರ್ದೇಶಿಸಿ ಗಮನ ಸೆಳೆದ ನಿರ್ದೇಶಕ ನರೇಶ್ ಕುಮಾರ್, ಈಗ ತಮ್ಮ ಎರಡನೇ ಸಿನೆಮಾಗೆ ಸಜ್ಜಾಗಿದ್ದಾರೆ. ಅವರಿಗೆ ಅದೃಷ್ಟ ತಂದಿದ್ದ ರಾಜು ಹೆಸರನ್ನು ಉಳಿಸಿಕೊಂಡಿದ್ದು, ನೂತನ ಸಿನೆಮಾಗೆ 'ರಾಜು ಕನ್ನಡ ಮೀಡಿಯಮ್' ಎಂದು ನಾಮಕರಣ ಮಾಡಿದ್ದಾರೆ. ಜೊತೆಗೆ '೧ಸ್ಟ್ ರ್ಯಾಂಕ್ ರಾಜು' ನಟ ಗುರುನಂದನ್ ಕೂಡ ಸದರಿ ಸಿನೆಮಾಗೆ ಹಿಂದಿರುಗಿದ್ದಾರೆ.
"ಗುರುನಂದನ್ ನಟಿಸಿದ ರಾಜು ಪಾತ್ರ ಬಹಳ ಜನಪ್ರಿಯವಾಗಿತ್ತು. ಹಲವಾರು ಶೀರ್ಷಿಕೆಗಳನ್ನು ಪರಿಗಣಿಸಿದ ಮೇಲೆ 'ರಾಜು' ಹೆಸರಿಗೆ ಹಿಂದಿರುಗಲು ನಿಶ್ಚಯಿಸಿದೆವು. ಇದು ಕನ್ನಡದಲ್ಲಿ ಅತಿ ಸಾಮಾನ್ಯ ಹೆಸರು" ಎನ್ನುತ್ತಾರೆ ನಿರ್ಮಾಪಕ ಸುರೇಶ. ಇವರು 'ಶಿವಲಿಂಗ' ಸಿನೆಮಾದ ನಿರ್ಮಾಪಕ ಕೂಡ.
'ರಂಗಿತರಂಗ'ದ ನಟಿ ಅವಂತಿಕಾ ಶೆಟ್ಟಿ 'ರಾಜು ಕನ್ನಡ ಮೀಡಿಯಮ್'ನಲ್ಲಿ ನಾಯಕ ನಟಿ. ಚಿತ್ರತಂಡ ಈಗಾಗಲೇ ೬೦% ಚಿತ್ರೀಕರಣ ಮುಗಿಸಿದ್ದು, ಉಳಿದ ಭಾಗವನ್ನು ಮಲೇಷಿಯಾ ಅಥವಾ ಥೈಲ್ಯಾಂಡ್ ನಲ್ಲಿ ಚಿತ್ರೀಕರಿಸಲು ಎದುರು ನೋಡುತ್ತಿದೆ.
ಈಮಧ್ಯೆ ಭಾನುವಾರ ಸಿನೆಮಾದ ಟೀಸರ್ ಅನ್ನು ತಂಡ ಬಿಡುಗಡೆ ಮಾಡಲಿದೆ. 'ರಾಜು ಕನ್ನಡ ಮೀಡಿಯಮ್' ತಂಡ ಹಿಂದಿನ ಸಿನೆಮಾದ ಯಶಸ್ಸನ್ನು ಪುನರ್ ಸೃಷ್ಟಿಸಲಿದೆಯೇ? ಕಾದು ನೋಡಬೇಕು!
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos