'ಮಫ್ತಿ' ಸಿನೆಮಾ ಚಿತ್ರೀಕರಣದಲ್ಲಿ ಶ್ರೀಮುರಳಿ
ಬೆಂಗಳೂರು: ಶ್ರೀಮುರಳಿ ನಟಿಸುತ್ತಿರುವ ಮುಂದಿನ ಚಿತ್ರ 'ಮಫ್ತಿ' ಮಂಗಳೂರಿನ ಬಂದರಿನಲ್ಲಿ ಕಳೆದ ಒಂದು ವಾರದಿಂದ ಚಿತ್ರೀಕರಣಗೊಳ್ಳುತ್ತಿದೆ. ಬಂದರಿನ ಬಗ್ಗೆ ಮುಕ್ತ ಪ್ರಶಂಸೆ ವ್ಯಕ್ತಪಡಿಸಿರುವ ನಟ "ನಾನು ಚಿತ್ರೀಕರಣದಲ್ಲಿ ಪಾಲ್ಗೊಂಡಿರುವ ಅದ್ಭುತ ಪ್ರದೇಶಗಳಲ್ಲಿ ಇದು ಒಂದು.. ಮಂಗಳೂರು ಬಂದರು... ಪ್ರತಿ ಕ್ಷಣವನ್ನು ಸಂತಸದಿಂದ ಕಳೆಯುತ್ತಿದ್ದೇನೆ... ಚಿತ್ರ ತಂಡಕ್ಕೆ! #ಮುಫ್ತಿ ಚಿತ್ರೀಕರಣ ಅದ್ಭುತ" ಎಂದು ಮುರಳಿ ಟ್ವೀಟ್ ಮಾಡಿದ್ದಾರೆ.
ಈ ಮಂಗಳೂರಿನ ಬಂದರಿನ ಹಿನ್ನಲೆಯಲ್ಲಿ ನಡೆಯುವ ಹಾಡು ನೃತದ ಮೂಲಕ ಶ್ರೀಮುರಳಿ ಅವರ ಪಾತ್ರದ ಪರಿಚಯವಾಗಲಿದೆಯಂತೆ. ಇದರ ಸ್ಟಿಲ್ ಒಂದು ಈಗ ಲಭ್ಯವಿದ್ದು, ದೊಡ್ಡ ಹಡಗಿನ ಹಿನ್ನಲೆಯಲ್ಲಿ, ಸೇನೆಯ ಹರಿಸು ಬಣ್ಣದ ಪ್ಯಾಂಟ್ ಧರಿಸಿ ನೃತ್ಯ ಮಾಡುತ್ತಿರುವುದನ್ನು ಗಮನಿಸಬಹುದಾಗಿದೆ.
"ನನ್ನ ಪರಿಚಯಾತ್ಮಕ ದೃಶ್ಯಾವಳಿಗೆ ಮೂರು-ನಾಲ್ಕು ರೀತಿಯ ಹಿನ್ನಲೆ ದೃಶ್ಯಗಳ ಅವಶ್ಯಕತೆ ಇತ್ತು. ಅದರಲ್ಲಿ ಒಂದಕ್ಕೆ ತಂಡ ಬಂದರನ್ನು ಆಯ್ಕೆ ಮಾಡಿಕೊಂಡಿತು. ಬಂದರು ಅಧಿಕಾರಿಗಳಿಂದ ಅನುಮತಿ ಪಡೆಯಲು ಇದಕ್ಕಾಗಿ ಒಂದು ತಿಂಗಳು ಹಿಡಿಯಿತು. ಅನುಮತಿ ಸಿಕ್ಕ ಕ್ಷಣದಿಂದಲೇ ನಾವು ಚಿತ್ರೀಕರಣ ಪ್ರಾರಂಭಿಸಿದೆವು. ಅಧಿಕಾರಿಗಳು ನಮ್ಮ ಚಿತ್ರೀಕರಣಕ್ಕೆ ಬಹಳ ಸಹಕರಿಸಿದರು. ಅವರಿಗೆ ಧನ್ಯವಾದಗಳು" ಎಂದು ತಿಳಿಸುತ್ತಾರೆ ಶ್ರೀಮುರಳಿ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos