ಸಿನಿಮಾ ಸುದ್ದಿ

ದುಬೈಯಲ್ಲಿ ಮೂರು ದಿನಗಳಲ್ಲಿ 50 ಲಕ್ಷ ರೂ.ಗಳಿಕೆ ಕಂಡ ಕಿರಿಕ್ ಪಾರ್ಟಿ

Sumana Upadhyaya
ಬಿಡುಗಡೆಯಾದ ಎರಡನೇ ವಾರದಲ್ಲಿ ಗಲ್ಲಾಪೆಟ್ಟಿಗೆಯಲ್ಲಿ 18 ಕೋಟಿ ರೂಪಾಯಿ ಗಳಿಕೆಯ ನಂತರ ಕರ್ನಾಟಕದಲ್ಲಿ ಅಗಾಧ ಯಶಸ್ಸು ಕಂಡ ಕಿರಿಕ್ ಪಾರ್ಟಿ ಚಿತ್ರ ಇದೀಗ ಗಡಿಯಾಚೆ ದಾಟಿ ಸುದ್ದಿ ಮಾಡುತ್ತಿದೆ. ರಕ್ಷಿತ್ ಶೆಟ್ಟಿ ನಟನೆಯ ಚಿತ್ರ ಕಿರಿಕ್ ಪಾರ್ಟಿ ದುಬೈಯಲ್ಲಿ ಕಳೆದ ವಾರಾಂತ್ಯ ಬಿಡುಗಡೆಯಾಗಿದ್ದು 20ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ತೆರೆ ಕಂಡಿದೆ. ಮತ್ತು ಕೇವಲ ಮೂರು ದಿನಗಳಲ್ಲಿ ಸುಮಾರು 50 ಲಕ್ಷ ರೂಪಾಯಿ ಗಳಿಕೆ ಕಂಡಿದೆ. ದುಬೈಯಲ್ಲಿ ಕೆಲವೇ ದಿನಗಳಲ್ಲಿ ಅತಿ ಹೆಚ್ಚು ಹಣ ಗಳಿಕೆ ಕಂಡ ಚಿತ್ರವಿದು.
ಕಿರಿಕ್ ಪಾರ್ಟಿ ಚಿತ್ರ ಅಬು ದಾಬಿಯಲ್ಲಿ ಕೂಡ ಬಿಡುಗಡೆಯಾಗಿದೆ. ಚಿತ್ರದಲ್ಲಿ ನಟಿಸಿದ ರಕ್ಷಿತ್, ನಿರ್ದೇಶಕ ರಿಷಬ್ ಶೆಟ್ಟಿ, ನಟಿ ರಶ್ಮಿಕಾ ಮಂದಣ್ಣ ಅಲ್ಲಿನ ಥಿಯೇಟರ್ ಗಳಿಗೆ ಭೇಟಿ ನೀಡಿದಾಗ ಜನರ ಪ್ರತಿಕ್ರಿಯೆ ಕಂಡು ತುಂಬಾ ಖುಷಿಪಟ್ಟಿದ್ದಾರೆ. ಪರಮ್ವ ಸ್ಟುಡಿಯೋ ಜೊತೆ ಸಹಭಾಗಿತ್ವ ಹೊಂದಿರುವ ಪುಷ್ಕರ್ ಮಲ್ಲಿಕಾರ್ಜುನಯ್ಯ, ದುಬೈಯಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಮೊದಲ ಕನ್ನಡ ಚಿತ್ರ ಕಿರಿಕ್ ಪಾರ್ಟಿಯಾಗಿದೆ ಎಂದರು.
ಕನ್ನಡೇತರರು ಇತ್ತೀಚಿನ ದಿನಗಳಲ್ಲಿ  ಕನ್ನಡ ಚಿತ್ರಗಳನ್ನು ವೀಕ್ಷಿಸಲು ಒಲವು ತೋರುತ್ತಿದ್ದು, ಕಿರಿಕ್ ಪಾರ್ಟಿಯನ್ನು ಇನ್ನಷ್ಟು ಹೆಚ್ಚು ಥಿಯೇಟರ್ ಗಳಲ್ಲಿ ಬಿಡುಗಡೆ ಮಾಡಬೇಕು ಎಂದರು.
ಮುಂದಿನ ದಿನಗಳಲ್ಲಿ ಚಿತ್ರ ಆಸ್ಟ್ರೇಲಿಯಾ,  ಇಂಗ್ಲೆಂಡ್ ಗಳಲ್ಲಿ ಜನವರಿ 21ರಂದು ಮತ್ತು ಅಮೆರಿಕಾದಲ್ಲಿ ಫೆಬ್ರವರಿ ಮೊದಲ ವಾರದಲ್ಲಿ ತೆರೆ ಕಾಣಲಿದೆ.
SCROLL FOR NEXT