'ರಾಜು ಕನ್ನಡ ಮೀಡಿಯಂ'ನಲ್ಲಿ ಆಶಿಕಾ ಮತ್ತು ಗುರುನಂದನ್
ಬೆಂಗಳೂರು: '೧ಸ್ಟ್ ರ್ಯಾಂಕ್ ರಾಜು' ಯಶಸ್ಸಿನ ನಂತರ ನಿರ್ದೇಶಕ ನರೇಶ್ ಕುಮಾರ್ ಮತ್ತು ನಟ ಗುರುನಂದನ್ 'ರಾಜು ಕನ್ನಡ ಮೀಡಿಯಂ'ಗೆ ಒಂದಾಗಿದ್ದಾರೆ. ಈ ಹೊಸ ಸಿನೆಮಾದ ಮೇಲೆ ಕೂಡ ಜನರ ಭಾರಿ ನಿರೀಕ್ಷೆ ಇರಲಿದೆ ಎಂದು ನಂಬುವ ನಟ ಗುರುನಂದನ್, ಯಾವುದನ್ನು ಸುಲಭವಾಗಿ ತೆಗೆದುಕೊಂಡಿಲ್ಲ.
ಶಾಲಾ ಬಾಲಕ, ಕಾಲೇಜು ಯುವಕ ಮತ್ತು ಸಾಫ್ಟ್ವೇರ್ ಎಂಜಿನಿಯರ್ ಈ ಮೂರು ಛಾಯೆಗಳುಳ್ಳ ಪಾತ್ರವನ್ನು ನಟ ನಿರ್ವಹಿಸಬೇಕಿದ್ದು, ಶಾಲಾ ಬಾಲಕನ ಛಾಯೆಯನ್ನು ಪೋಷಿಸಲು ೮ ಕೆಜಿ ತೂಕ ಕಳೆದುಕೊಂಡಿದ್ದಾರಂತೆ. "ಈ ಸಿನೆಮಾದ ಪಾತ್ರಕ್ಕಾಗಿ ಹೊಂದಾಣಿಕೆ ಮಾಡಿಕೊಳ್ಳಲು, ಅವರು ಸಂಪೂರ್ಣ ದಕ್ಷತೆ ತೋರಿದ್ದಾರೆ" ಎನ್ನುತ್ತಾರೆ ನರೇಶ್ ಕುಮಾರ್.
'ಕ್ರೇಜಿ ಬಾಯ್' ನಲ್ಲಿ ಕಾಲೇಜು ಯುವತಿ ಪಾತ್ರದಲ್ಲಿ ನಟಿಸಿದ್ದ ಆಶಿಕಾ, ಗುರುನಂದನ್ ಎದುರು ನಟಿಸುತ್ತಿದ್ದಾರೆ, "ಈ ಪಾತ್ರ ಅವರಿಗೆ ಸುಲಭವಾಗಿತ್ತು ಆದರೆ ಅವರು ಕೂಡ ಇದಕ್ಕಾಗಿ ಡಯಟ್ ನಲ್ಲಿದ್ದರು" ಎಂದು ನರೇಶ್ ವಿವರಿಸುತ್ತಾರೆ.
ಕೆ ಎ ಸುರೇಶ ನಿರ್ಮಿಸುತ್ತಿರುವ ಈ ಸಿನೆಮಾಗೆ ಕಿರಣ್ ರವೀಂದ್ರನಾಥ್ ಸಂಗೀತ ನೀಡಿದ್ದು, ಶೇಖರ್ ಚಂದ್ರ ಅವರ ಸಿನೆಮ್ಯಾಟೋಗ್ರಫಿ ಇದೆ.