ಬೆಂಗಳೂರು: ಕಿರಿಕ್ ಪಾರ್ಟಿಯ ಯಶಸ್ಸಿನಲ್ಲಿ ತೇಲುತ್ತಿರುವ ನಾಯಕ ನಟಿ ರಶ್ಮಿಕಾ ಗೆ ಅವಕಾಶಗಳು ಬಾಗಿಲ ಬಳಿ ಬಂದು ನಿಂತಿವೆ. ರಶ್ಮಿಕಾಗೆ ಹೊಸ ಸಿನಿಮಾವೊಂದರಿಂದ ಅವಕಾಶ ಸಿಕ್ಕಿದೆ. ಅದು ದರ್ಶನ್ ನಾಯಕರಾಗಿರುವ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇನ್ನೂ ನಿರ್ದೇಶಕ ಸುನಿ ಅವರ ಮುಂದಿನ ಚಿತ್ರ ಚಮಕ್ ಸಿನಿಮಾದಲ್ಲಿ ಗಣೇಶ್ ಅಭಿನಯವಿದ್ದು, ಆ ಸಿನಿಮಾಗೆ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಲಿದ್ದಾರೆ.
ಕಿರಿಕ್ ಪಾರ್ಟಿಯಲ್ಲಿ ರಶ್ಮಿಕಾ ಅಭಿನಯ ನೋಡಿದ ಸಿನಿಮಾ ತಯಾರಕರು ತಮ್ಮ ಸಿನಿಮಾಗಳಿಗೆ ರಶ್ಮಿಕಾ ಅವರನ್ನು ನಾಯಕಿಯಾಗಿ ಆರಿಸಿಕೊಂಡಿದ್ದಾರೆ. ಆದರೆ ಇದುವರೆಗೂ ಅಧಿಕೃತವಾಗಿ ಎಲ್ಲಿಯೂ ಘೋಷಿಸಿಲ್ಲ.
ತಮಿಳು ಮತ್ತು ತೆಲುಗು ಚಿತ್ರಗಳಿಂದಲೂ ಕಬಡ ರಶ್ಮಿಕಾಗೆ ಆಫರ್ ಬರುತ್ತಿವೆ ಎನ್ನಲಾಗಿದೆ. ಆದರೆ ಇದನ್ನು ನಿರಾಕರಿಸಿರುವ ರಶ್ಮಿಕಾ ಮಂದಣ್ಣ ಮೊದಲು ಕನ್ನಡ ಸಿನಿಮಾ ರಂಗದಲ್ಲಿ ಬೇರೂರಿ ನಂತರ ಬೇರೆಡೆ ಗಮನ ಹರಿಸುವುದಾಗಿ ರಶ್ಮಿಕಾ ತಿಳಿಸಿದ್ದಾರೆ.
ಚಂದ್ರಶೇಖರ್ ನಿರ್ಮಾಣದ ಸುನಿಲ್ ನಿರ್ದೇಶನದ ರೋಮ್ಯಾಂಟಿಕ್ ಕಾಮಿಡಿ ಸಿನಿಮಾ ಮಾರ್ಚ್ ತಿಂಗಳಲ್ಲಿ ಸೆಟ್ಟೇರಲಿದೆ.
ಯೋಗರಾಜ್ ಭಟ್ ರ ಮಗುಳು ನಗೆ ಸಿನಿಮಾದಲ್ಲಿ ಸದ್ಯ ಗಣೇ್ ಬ್ಯುಸಿ ಇದ್ದು ಅದಾದ ನಂತರ ಚಮಕ್ ಚಿತ್ರದ ಶೂಟಿಂಗ್ ಆರಂಭವಾಗವಲಿದೆ.