ಬೆಂಗಳೂರು: 'ಲೂಸಿಯಾ'ದಲ್ಲಿ ಮುಖ್ಯಪಾತ್ರದಲ್ಲಿ ನಟಿಸಿ, ಕನ್ನಡ ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸಿದ ನಟಿ ಶ್ರುತಿ ಹರಿಹರನ್ ಈಗ 'ಬ್ಯುಟಿಫುಲ್ ಮನಸುಗಳು' ಬಿಡುಗಡೆಗೆ ಎದುರು ನೋಡುತ್ತಿದ್ದಾರೆ.
ಈ ಚಿತ್ರದ ಪಾತ್ರವನ್ನು ಪೋಷಿಸುವುದು ಒಂದು ಅನುಭವವಾಗಿತ್ತು ಮತ್ತು ಅದಕ್ಕೆ ನಟಿಸುವ ಅವಶ್ಯಕತೆ ಇರಲಿಲ್ಲ ಎನ್ನುತ್ತಾರೆ ನಟಿ.
ಸ್ವಂತವನ್ನು ಮರೆತು ಬೇರೆ ಪಾತ್ರಕ್ಕೆ ಪರಕಾಯ ಪ್ರವೇಶ ಮಾಡುವುದು ಆಸಕ್ತಿದಾಯಕ ಎನ್ನುವ ಶ್ರುತಿ "ಇದರಿಂದಲೇ ನಾನು ನಟಿಯಾಗಿದ್ದು. ನೀವಲ್ಲದ ಮತ್ತೊಬ್ಬ ವ್ಯಕ್ತಿಯಾಗುವುದು ಎಂದಿಗೂ ಸವಾಲು ಮತ್ತು ಆಸಕ್ತಿದಾಯಕ. ಈಗ 'ಬ್ಯುಟಿಫುಲ್ ಮನಸುಗಳು' ನಂದಿನಿ ಪಾತ್ರ ಆ ಅವಕಾಶ ನೀಡಿದೆ. ಇಲ್ಲಿ ನಂದಿನಿಯದ್ದು ಸಂಕೀರ್ಣ ಪಾತ್ರ, ಅವಳು ಬ್ಯುಟಿ ಸಲೂನ್ ನಲ್ಲಿ ಕೆಲಸ ಮಾಡುತ್ತಿರುತ್ತಾಳೆ, ತನ್ನ ಅನಾರೋಗ್ಯಪೀಡಿತ ಪೋಷಕರನ್ನು ನೋಡಿಕೊಳ್ಳುತ್ತಿರುತ್ತಾಳೆ, ಕುಟುಂಬವನ್ನು ನಿರ್ವಹಿಸುತ್ತಿರುತ್ತಾಳೆ. ಇಂತಹ ಕಥೆಗಳು ನಿರ್ದೇಶಕರ ಸಲಹೆಯನ್ನು ಬೇಡುತ್ತವೆ ಮತ್ತು ಕಥೆ ಬೆಳೆಯುವ ರೀತಿಯನ್ನು ಅರ್ಥ ಮಾಡಿಕೊಳ್ಳುವುದು ಕೂಡ ಅವಶ್ಯಕ" ಎನ್ನುತ್ತಾರೆ.
ಇದು ನಿಜ ಕಥೆಯೊಂದನ್ನು ಆಧರಿಸಿದ ಚಿತ್ರ. "ಈ ಘಟನೆ ಎಂತಹ ಮಹಿಳೆಗೂ ಆಕ್ರೋಶ ತರಿಸುತ್ತದೆ. ಇದೂ ೨೦೧೩ ರಲ್ಲಿ ನಡೆದ ಘಟನೆಯಾದರೂ, ೨೦೨೦ ರಲ್ಲಿ ಕೂಡ ನಡೆಯಬಹುದು. ಪ್ರತಿ ಸಮಯದಲ್ಲಿ ಮಹಿಳೆಗೆ ಆಘಾತ ತರುವಂತದ್ದು" ಎನ್ನುತ್ತಾರೆ ಶ್ರುತಿ.
ಲೂಸಿಯಾ ನಂತರ ನೀನಾಸಂ ಸತೀಶ್ ಜೊತೆಗೆ ಮತ್ತೆ ನಟಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸುವ ಶ್ರುತಿ "ಲೂಸಿಯಾದಲ್ಲಿ ನಾನು ಹೊಸಬಳು. ಈಗ ಮೂರು ವರ್ಷಗಳ ನಂತರ ನಾನು ಸಾಕಷ್ಟು ಬದಲಾಗಿದ್ದೇನೆ, ಸತೀಶ್ ಕೂಡ. ಅವರ ಜೊತೆ ನಟಿಸುವುದು ಬಹಳ ಸಂತಸದ ಸಮಯವಾಗಿತ್ತು. ನಾನು ಸತೀಶ್ ಮತ್ತು ನಿರ್ದೇಶಕ ಜಯತೀರ್ಥ ಸೆಟ್ ನಲ್ಲಿ ಕನ್ನಡ ಸಿನೆಮಾಗಳ ಬಗ್ಗೆ ಬಹಳಷ್ಟು ಚರ್ಚೆ ಮಾಡುತ್ತಿದ್ದೆವು" ಎನ್ನುತ್ತಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos