ಜೋಧ್ಪುರ: ೧೮ ವರ್ಷದ ಹಳೆಯ ಅಕ್ರಮ ಶಸ್ತ್ರಾಸ್ತ್ರ ಪ್ರಕರಣದಲ್ಲಿ ಇಲ್ಲಿನ ನ್ಯಾಯಾಲಯ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರನ್ನು ಆರೋಪಮುಕ್ತಗೊಳಿಸಿದ ನಂತರ, ನಟ ಬುಧವಾರ ತಮ್ಮ ಅಭಿಮಾನಿಗಳಿಗೆ, ಬೆಂಬಲಿಗರಿಗೆ ಧನ್ಯವಾದ ಸಮರ್ಪಿಸಿದ್ದಾರೆ.
"ನಿಮ್ಮೆಲ್ಲರ ಬೆಂಬಲ ಮತ್ತು ಶುಭ ಹಾರೈಕೆಗೆ ಧನ್ಯವಾದಗಳು" ಎಂದು ಸಲ್ಮಾನ್ ಟ್ವೀಟ್ ಮಾಡಿದ್ದಾರೆ.
೧೯೯೯ರಲ್ಲಿ ದಾಖಲಾಗಿದ್ದ ಈ ಪ್ರಕರಣದ ತೀರ್ಪನ್ನು ಮುಖ್ಯ ಜ್ಯುಡಿಶಿಯಲ್ ಮೆಜೆಸ್ಟ್ರೇಟ್ ದಲ್ಪತ್ ಸಿಂಗ್ ರಾಜಪುರೋಹಿತ ಇಂದು ಘೋಷಿಸಿದ್ದಾರೆ. ಈ ಸಮಯದಲ್ಲಿ ಸಲ್ಮಾನ್ ತಮ್ಮ ಸಹೋದರಿ ಅಲ್ವಿರಾ ಖಾನ್ ಅವರೊಂದಿಗೆ ಉಪಸ್ಥಿತರಿದ್ದರು.
ಚಿಂಕಾರಾ ಕೃಷ್ಣಮೃಗ ಬೇಟೆಯ ಮತ್ತೊಂದು ಪ್ರಕರಣದಲ್ಲಿ ರಾಜಸ್ಥಾನ ಹೈಕೋರ್ಟ್ ಜುಲೈನಲ್ಲಿ ಸಲ್ಮಾನ್ ಅವರನ್ನು ಆರೋಪಮುಕ್ತಗೊಳಿಸಿತ್ತು.