ಬೆಂಗಳೂರು: 'xXx' ಸಿನೆಮಾ ಪ್ರಚಾರಕ್ಕಾಗಿ ಹಾಲಿವುಡ್ ತಾರೆ ವಿನ್ ಡೀಸೆಲ್ ಭಾರತ ಪ್ರವಾಸ ಬೆಳೆಸಿದ ಮೇಲೆ ಈಗ 'ಕುಂಗ್ ಫು ಯೋಗ' ಸಿನೆಮಾ ಪ್ರಚಾರಕ್ಕೆ ಹಾಂಕಾಂಗ್ ಮೂಲದ ಖ್ಯಾತ ಹಾಲಿವುಡ್ ನಟ ಜಾಕಿ ಚಾನ್ ಭಾರತ ಪ್ರವಾಸ ಬೆಳೆಸಲಿದ್ದಾರೆ.
ಇತ್ತೀಚೆಗಷ್ಟೇ ಜಾಕಿ ಚಾನ್ ಜೊತೆಗಿರುವ ವಿಡಿಯೋ ಒಂದನ್ನು ಹಂಚಿಕೊಂಡ ನಟ ಸೋನು ಸೂದ್, ಜಾಕಿ ಭಾರತಕ್ಕೆ ಬರಲು ಅತಿ ಉತ್ಸಾಹದಿಂದಿದ್ದಾರೆ ಮತ್ತು ಸಲ್ಮಾನ್ ಖಾನ್ ಅವರನ್ನು ಕೂಡ ಭೇಟಿ ಮಾಡಲು ಆಸಕ್ತಿ ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.