ಬಿಗ್ ಬಾಸ್ ಕನ್ನಡ ಸೀಸನ್ 4 ಈ ವಾರಾಂತ್ಯಕ್ಕೆ ಮುಗಿಯಲಿದ್ದು, ಫಿನಾಲೆ ಕಾರ್ಯಕ್ರಮಕ್ಕೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಆಗಮಿಸಲಿದ್ದಾರೆ.
ನಟ ಸುದೀಪ್ ಅವರ ನಿರೂಪಣೆಯಲ್ಲಿ ಮೂಡಿಬರುತ್ತಿರುವ ಕಾರ್ಯಕ್ರಮದಲ್ಲಿ ಶಿಲ್ಪಾ ಶೆಟ್ಟಿ ನೃತ್ಯವೊಂದಕ್ಕೆ ಹೆಜ್ಜೆ ಹಾಕಲಿದ್ದಾರೆ. ಗ್ರಾಂಡ್ ಫಿನಾಲೆ ಕಾರ್ಯಕ್ರಮಕ್ಕೆ ಈ ಮೂಲಕ ರಂಗು ಹೆಚ್ಚಾಗಲಿದೆ.
ಕನ್ನಡ ಚಿತ್ರರಂಗದೊಂದಿಗಿನ ನಂಟು ಶಿಲ್ಪಾ ಶೆಟ್ಟಿಗೆ ಈ ಹಿಂದಿನಿಂದಲೂ ಇದೆ. ಮಂಗಳೂರು ಮೂಲದವರಾದ ಶಿಲ್ಪಾ ಈಗಾಗಲೇ ಕನ್ನಡ ಚಿತ್ರಗಳಾದ ಪ್ರೀತ್ಸೋದ್ ತಪ್ಪಾ, ಒಂದಾಗೋಣ ಬಾ ಚಿತ್ರಗಳಲ್ಲಿ ರವಿಚಂದ್ರನ್ ಅವರೊಂದಿಗೆ ಮತ್ತು ಆಟೋ ಶಂಕರದಲ್ಲಿ ಉಪೇಂದ್ರ ಅವರೊಂದಿಗೆ ಅಭಿನಯಿಸಿದ್ದರು.
ಬಿಸ್ ಬಾಸ್ ಕನ್ನಡ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಶೋ ಎರಡು ವಾರಗಳ ಕಾಲ ಮುಂದೂಡಲ್ಪಟ್ಟಿದೆ. ಈ ವಾರಾಂತ್ಯದ ಅಂತಿಮ ಸುತ್ತಿಗೆ 5 ಜನ ಸ್ಪರ್ಧಿಗಳು ಪ್ರವೇಶಿಸಲಿದ್ದಾರೆ.