ಶ್ರುತಿ ಹರಿಹರನ್ 
ಸಿನಿಮಾ ಸುದ್ದಿ

'ದ ವಿಲನ್' ಭಾಗವಾದ ಶ್ರುತಿ ಹರಿಹರನ್

ನಟ ಶಿವರಾಜ್ ಕುಮಾರ್ ಮತ್ತು ಸುದೀಪ್ ಒಟ್ಟಿಗೆ ನಟಿಸುತ್ತಿರುವ 'ದ ವಿಲನ್' ಚಿತ್ರದ ನಾಯಕನಟಿಯಾಗಿ ಅಮಿ ಜಾಕ್ಸನ್ ನಟಿಸಲಿದ್ದಾರೆ ಎಂಬ ಸುದ್ದಿ ಇನ್ನು ಅಧಿಕೃತವಾಗಿ ಘೋಷಣೆಯಾಗಬೇಕಿದ್ದರು,

ಬೆಂಗಳೂರು: ನಟ ಶಿವರಾಜ್ ಕುಮಾರ್ ಮತ್ತು ಸುದೀಪ್ ಒಟ್ಟಿಗೆ ನಟಿಸುತ್ತಿರುವ 'ದ ವಿಲನ್' ಚಿತ್ರದ ನಾಯಕನಟಿಯಾಗಿ ಅಮಿ ಜಾಕ್ಸನ್ ನಟಿಸಲಿದ್ದಾರೆ ಎಂಬ ಸುದ್ದಿ ಇನ್ನು ಅಧಿಕೃತವಾಗಿ ಘೋಷಣೆಯಾಗಬೇಕಿದ್ದರು, ಕನ್ನಡ ನಟಿ ಶ್ರುತಿ ಹರಿಹರನ್ ತಂಡವನ್ನು ಸೇರಿದ್ದಾರೆ. ಶ್ರುತಿ ಶಿವಣ್ಣನೆದುರು ಮೊದಲ ಬಾರಿಗೆ ನಟಿಸುತ್ತಿದ್ದು, ಅತಿ ಉತ್ಸುಕರಾಗಿದ್ದಾರೆ. ಪ್ರೇಮ್ ಈ ಸಿನೆಮಾದ ನಿರ್ದೇಶಕ. 
ಶ್ರುತಿ ಶನಿವಾರ ಶಿವಣ್ಣನವರೊಂದಿಗೆ ಫೋಟೋ ಶೂಟ್ ನಲ್ಲಿ ಭಾಗಿಯಾಗಿದ್ದು ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾರೆ. "ನಾನು ಇದೆ ಮೊದಲ ಬಾರಿಗೆ ಅವರ ಜೊತೆಗೆ ತೆರೆ ಹಂಚಿಕೊಳ್ಳುತ್ತಿದ್ದರೂ, ಅವರಿಗೆ ನೃತ್ಯ ತರಬೇತಿ ನೀಡಲು ಮೊದಲ ಬಾರಿಗೆ ಅವರ ಮನೆಯಲ್ಲಿಯೇ ಭೇಟಿಯಾಗಿದ್ದೆ. ಅವರು ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪ್ರದರ್ಶನ ನೀಡಬೇಕಿತ್ತು. ಆಗ ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ ಅವರಿಗೆ ಸಹಾಯಕಿಯಾಗಿ ಹೋಗಿದ್ದೆ. 
"ಆಗ ಶಿವಣ್ಣನವರಿಗೆ ತರಬೇತಿ ನೀಡಿದ ಆ ಕೆಲವು ಘಂಟೆಗಳು ಇನ್ನು ನೆನಪಿನಲ್ಲಿದೆ. ಅವರ ಜೊತೆಗೆ ನೃತ್ಯ ಮಾಡುವ ಅವಕಾಶ ಸಿಕ್ಕಿದ್ದು ಆಹ್ಲಾದಕಾರಿಯಾಗಿತ್ತು... ಅವರು ನನ್ನನ್ನು ವೇದಿಕೆಗೆ ಕರೆದು ಧನ್ಯವಾದ ಕೂಡ ಹೇಳಿದ್ದರು. ಅದು ಅವರ ವಿನಯವಂತಿಕೆ ತೋರಿಸುತ್ತದೆ" ಎನ್ನುವ ಶ್ರುತಿ "ನಾನು ಈ ಫೋಟೋ ಶೂಟ್ ಸಮಯದಲ್ಲಿ ಈ ವಿಷಯವನ್ನು ಅವರೊಂದಿಗೆ ಹಂಚಿಕೊಂಡೆ" ಎನ್ನುತ್ತಾರೆ. 
ಈ ಸಿನೆಮಾವನ್ನು ಸಿ ಆರ್ ಮನೋಹರ್ ನಿರ್ಮಿಸುತ್ತಿದ್ದು, ಶಿವಣ್ಣನವರ ಟೀಸರ್ ಬಿಡುಗಡೆಯ ನಂತರ ಸುದೀಪ್ ಫೋಟೋ ಶೂಟ್ ಜರುಗಲಿದೆಯಂತೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಎಲ್ಲವನ್ನೂ ತಡೆಯಲು ಸಾಧ್ಯವಿಲ್ಲ': CJP ದೆಹಲಿ ಪ್ರತಿಭಟನೆಗೆ ನಿರ್ಬಂಧ ಕುರಿತು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಚಾಟಿ

'ಮಕ್ಕಳನ್ನು ಪ್ರತಿಭಟನೆಗಳಿಂದ ದೂರವಿಡಿ': ದೆಹಲಿ ಪ್ರತಿಭಟನೆಗೆ ಸಿದ್ಧತೆ, ಮಸೀದಿ ಮೈಕ್‌ನಲ್ಲಿ ಪೊಲೀಸರ ಮನವಿ! Video

ಈ ಬಾರಿ ಮೈಸೂರು ದಸರಾ ಮತ್ತಷ್ಟು ಆಕರ್ಷಕ; 146 ಕಿ.ಮೀ. ದೀಪಾಲಂಕಾರ; 3,500 ಡ್ರೋನ್‌ಗಳ ಪ್ರದರ್ಶನ

ಭಾರತೀಯ ಮೂಲದ ನ್ಯಾಯಶಾಸ್ತ್ರಜ್ಞೆಗೆ ಈ ಬಾರಿಯ ನೊಬೆಲ್ ಶಾಂತಿ ಪ್ರಶಸ್ತಿ; ನವನೇತಮ್ ನವಿ ಪಿಳ್ಳೈಗೆ ಒಲಿದ ನೊಬೆಲ್ ಶಾಂತಿ ಗರಿ

Ramayana: ಕೊನೆಗೂ 'ರಾಮಾಯಣ' ರಿಲೀಸ್ ಡೇಟ್ ಫಿಕ್ಸ್; ದೀಪಾವಳಿಗೂ ಮೊದಲೇ ಬಿಡುಗಡೆ