ಮುಂಬೈ: ಹಾಲಿವುಡ್ ನ ಖ್ಯಾತ ನಟ ಜಾಕಿ ಚಾನ್ ತಮ್ಮ ಮುಂದಿನ ಚಿತ್ರ 'ಕುಂಗ್ ಫು ಯೋಗ' ಪ್ರಚಾರಕ್ಕೆ ಭಾರತ ಪ್ರವಾಸ ಮಾಡಿದ್ದು, ಅವರು ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರನ್ನು ಭೇಟಿ ಮಾಡಿದ್ದಾರೆ.
'ರಶ್ ಹವರ್' ಸ್ಟಾರ್ ಅನ್ನು ಭೇಟಿ ಮಾಡಿದ ಈ ಘಳಿಗೆಯ ಫೋಟಿವನ್ನು ಸಲ್ಮಾನ್ ಸೋಮವಾರ ಹಂಚಿಕೊಂಡಿದ್ದಾರೆ.
ಈ ಇಬ್ಬರು ನಟರು ಪಾಂಡಾ ಬೊಂಬೆಯನ್ನು ಕೈನಲ್ಲಿಡಿದು, ಹಾಸ್ಯಮಯ ಪೋಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇದಕ್ಕೂ ಮೊದಲು ಸಲ್ಮಾನ್ ಜಾಕಿ ಚಾನ್ ಮತ್ತು ಅವರ 'ದಬಾಂಗ್' ಸಿನೆಮಾದ ಸಹ ನಟ ಸೋನು ಸೂದ್ ಅವರಿಗೆ ಧನ್ಯವಾದ ಹೇಳಿದ್ದರು.
ಚೀನಾ ಅಧ್ಯಕ್ಷ ಕ್ಸಿ ಜಿಂಪಿಂಗ್ ಭಾರತಕ್ಕೆ ಆಗಮಿಸಿದ್ದಾಗ ಎರಡು ದೇಶಗಳ ಸಹಯೋಗದಲ್ಲಿ ಮೂರು ಸಿನೆಮಾಗಳ ನಿರ್ಮಾಣಕ್ಕೆ ಒಪ್ಪಂದವಾಗಿತ್ತು. ಈಗ ಆ ಒಪ್ಪಂದದ ಭಾಗವಾಗಿ 'ಕುಂಗ್ ಫು ಯೋಗ' ಚಿತ್ರಣಗೊಂಡಿದೆ. ಈ ಸಿನೆಮಾದಲ್ಲಿ ದಿಶಾ ಪಠಾಣಿ, ಸೋನು ಸೂದ್ ಮತ್ತು ಅಮೈರಾ ದಸ್ತೂರ್ ಕೂಡ ನಟಿಸಿದ್ದಾರೆ.
ಸ್ಟಾನ್ಲಿ ಟಾಂಗ್ ನಿರ್ದೇಶಿಸಿರುವ ಈ ಹಾಸ್ಯ-ಆಕ್ಷನ್ ಚಿತ್ರವನ್ನು ಭಾರತ, ದುಬೈ ಮತ್ತು ಬೀಜಿಂಗ್ ನಲ್ಲಿ ಚಿತ್ರೀಕರಿಸಲಾಗಿದೆ.