ಸಮಂತಾ-ಪವನ್ ಕುಮಾರ್ 
ಸಿನಿಮಾ ಸುದ್ದಿ

ಸಮಂತಾರನ್ನು ತೆಲುಗು, ತಮಿಳಿನಲ್ಲಿ ನಿರ್ದೇಶಿಸಲಿರುವ ಪವನ್ ಕುಮಾರ್

ಪವನ್ ಕುಮಾರ್ ನಿರ್ದೇಶನದ 'ಯು-ಟರ್ನ್' ರಿಮೇಕ್ ಗಳಲ್ಲಿ ಭಾಗಿಯಾಗಬೇಕೆನ್ನುವ ಸಮಂತಾ ರುತ್ ಪ್ರಭು ಅವರ ಕನಸು ನನಸಾದಂತಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಸಿದ್ಧರಿರುವ

ಬೆಂಗಳೂರು: ಪವನ್ ಕುಮಾರ್ ನಿರ್ದೇಶನದ 'ಯು-ಟರ್ನ್' ರಿಮೇಕ್ ಗಳಲ್ಲಿ ಭಾಗಿಯಾಗಬೇಕೆನ್ನುವ ಸಮಂತಾ ರುತ್ ಪ್ರಭು ಅವರ ಕನಸು ನನಸಾದಂತಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಸಿದ್ಧರಿರುವ ನಿರ್ಮಾಪಕರು ಪವನ್ ಅವರಿಗೆ ಸಿಕ್ಕಿದ್ದಾರೆ. 
ಈ ಯೋಜನೆಯ ಮೂಲಕ ಪವನ್ ಕುಮಾರ್ ಟಾಲಿವುಡ್ ಮತ್ತು ಕಾಲಿವುಡ್ ನಲ್ಲಿ ಪಾದಾರ್ಪಣೆ ಮಾಡಲಿದ್ದಾರೆ. 'ಯು-ಟರ್ನ್' ಸಿನೆಮಾ ಬಿಡುಗಡೆಯಾಗಿದ್ದಾಗ ಇದನ್ನು ವೀಕ್ಷಿಸಿದ್ದ ಸಮಂತಾ ಈ ಚಿತ್ರದ ರಿಮೇಕ್ ಗಳಲ್ಲಿ ನಟಿಸಲು ಆಸಕ್ತಿ ತೋರಿದ್ದರಂತೆ. ನಟ ನಾಗ ಚೈತನ್ಯ ಅವರೊಂದಿಗೆ ಬೆಂಗಳೂರಿಗೆ ಬಂದು ಸಿನೆಮಾದ ಪ್ರಿವ್ಯು ವೀಕ್ಷಿಸಿ ನಿರ್ದೇಶಕರೊದಿಗೆ ಚರ್ಚೆ ಕೂಡ ನಡೆಸಿದ್ದರು. 
ಈಗ ಮೂಲಗಳ ಪ್ರಕಾರ "ನಿರ್ಮಾಪಕರನ್ನು ಅಂತಿಮಗೊಳಿಸಲಾಗಿದೆ. ಅಧುಕೃತ ಘೋಷಣೆಯಷ್ಟೇ ಬಾಕಿಯಿದ್ದು, ಸಮಂತಾರ ಜೊತೆಗೆ ತೆಲುಗು ಮತ್ತು ತಮಿಳು ರಿಮೇಕ್ ಗಳಲ್ಲಿ ಕೆಲಸ ಮಾಡಲಿ ಪವನ್ ಉತ್ಸುಕರಾಗಿದ್ದಾರೆ" ಎಂದು ತಿಳಿದುಬಂದಿದೆ. 
ಉಳಿದ ತಾರಾಗಣದ ಶೋಧನೆ ಜಾರಿಯಲ್ಲಿದ್ದು, ಏಪ್ರಿಲ್ ಅಥವಾ ಮೇನಲ್ಲಿ ಚಿತ್ರೀಕರಣ ಪ್ರಾರಂಭವಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಕಳೆದ ವರ್ಷ ಬಿಡುಗಡೆಯಾಗಿದ್ದ 'ಯು ಟರ್ನ್' ಯಶಸ್ವಿಯಾಗಿ ಶತ ದಿನ ಪ್ರದರ್ಶನ ಪೂರೈಸಿತ್ತು. ಇದು ನಟಿ ಶ್ರದ್ಧಾ ಶ್ರೀನಾಥ್ ಅವರನ್ನು ಬೆಳ್ಳಿ ತೆರೆಗೆ ಪರಿಚಯಿಸಿ, ಅಪಾರ ಹೆಸರು ತಂದುಕೊಟ್ಟಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ