ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 4 ವಿನ್ನರ್ ಪ್ರಥಮ್ ಎಂದು ಹೇಳಲಾಗುತ್ತಿದೆ.
ಈ ಬಾರಿಯ ಬಿಗ್ ಬಾಸ್ ನಲ್ಲಿ ಅತ್ಯಂತ ಜನಪ್ರಿಯತೆ ಗಳಿಸಿರುವ ಪ್ರಥಮ್ ಅವರೇ ಗೆಲುವಿನ ಹಾದಿಯಲ್ಲಿ ಮುಂಚೂಣಿಯಲ್ಲಿದ್ದಾರೆ ಎನ್ನಲಾಗಿದೆ. ಫಿನಾಲೆಗೆ ಏರಿದ ಪ್ರಥಮ್, ರೇಖಾ, ಕೀರ್ತಿಕುಮಾರ್, ಮೋಹನ್ ಮತ್ತು ಮಾಳವಿಕಾ ಪೈಕಿ ಪ್ರಥಮ್ ಅತಿ ಹೆಚ್ಚು ಮತಗಳನ್ನು ಗಳಿಸಿದ್ದಾರೆ ಎನ್ನುವ ಸುದ್ದಿ ಹಲವಾರು ಮಾಧ್ಯಮಗಳಲ್ಲಿ ಈಗ ವೈರಲ್ ಆಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಸಮೀಕ್ಷೆಯಲ್ಲೂ ಪ್ರಥಮ್ ಗೆ ಅತೀ ಹೆಚ್ಚು ಜನರ ಬೆಂಬಲ ವ್ಯಕ್ತವಾಗಿದೆ. ರೇಖಾ ಮತ್ತು ಪ್ರಥಮ್ ನಡುವೆ ತೀವ್ರ ಪೈಪೋಟಿ ನಡೆದಿದೆ.
ಬಿಗ್ ಬಾಸ್ ನ ಅನೇಕ ಮಾಜಿ ಕಂಟೆಸ್ಟೆಂಟ್ ಗಳೂ ಕೂಡ ಪ್ರಥಮ್ ಮತ್ತು ರೇಖಾಗೆ ಹೆಚ್ಚು ಒಲವು ವ್ಯಕ್ತಪಡಿಸಿದ್ದರು.
ಬಿಗ್ ಬಾಸ್ ಸೀಸನ್ 4 ಫಿನಾಲೆ ಕಾರ್ಯಕ್ರಮ ಜನವರಿ 28 ಮತ್ತು 29ರಂದು ಕಲರ್ಸ್ ಕನ್ನಡ ಚಾನೆಲ್ ನಲ್ಲಿ ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ.
ಈ ಹಿಂದಿನ ಬಿಗ್ ಬಾಸ್ ವಿಜೇತರು
ಬಿಗ್ ಬಾಸ್ ಸೀಸಸ್ 1: ವಿಜಯ ರಾಘವೇಂದ್ರ
ಬಿಗ್ ಬಾಸ್ ಸೀಸಸ್ 2: ಅಕುಲ್ ಬಾಲಾಜಿ