ರ್ಯಾಪರ್ ಚಂದನ್ ಶೆಟ್ಟಿ 
ಸಿನಿಮಾ ಸುದ್ದಿ

ಹೀರೊ ಆಗಿ ಪಾದಾರ್ಪಣೆ ಮಾಡಲಿರುವ ರ್ಯಾಪರ್ ಚಂದನ್ ಶೆಟ್ಟಿ

ತಮ್ಮ ರ್ಯಾಪ್ ಶೈಲಿಯ ಹಾಡುಗಳ ಮೂಲಕ ಜನರ ಗಮನ ಸೆಳೆದಿದ್ದ ರ್ಯಾಪರ್ ಚಂದನ್ ಶೆಟ್ಟಿ ಈಗ 'ವಿಚಿತ್ರ ಪ್ರೇಮ ಕಥೆ' ಸಿನೆಮಾದಲ್ಲಿ ನಾಯಕನಟನಾಗಲಿದ್ದಾರೆ.

ಬೆಂಗಳೂರು: ತಮ್ಮ ರ್ಯಾಪ್ ಶೈಲಿಯ ಹಾಡುಗಳ ಮೂಲಕ ಜನರ ಗಮನ ಸೆಳೆದಿದ್ದ ರ್ಯಾಪರ್ ಚಂದನ್ ಶೆಟ್ಟಿ ಈಗ 'ವಿಚಿತ್ರ ಪ್ರೇಮ ಕಥೆ' ಸಿನೆಮಾದಲ್ಲಿ ನಾಯಕನಟನಾಗಲಿದ್ದಾರೆ. ಈ ಹಿಂದೆ ಗಣೇಶ್ ಅವರ 'ಸಂಗಮ' ಮತ್ತು ಅಜಯ್ ರಾವ್ ಅವರ 'ಜೈ ಭಜರಂಗ ಬಲಿ' ಸಿನೆಮಾಗಳಲ್ಲಿ ತೊಡಗಿಸಿಕೊಂಡಿದ್ದ ನಿರ್ದೇಶಕ ರವಿವರ್ಮ, ಚಂದನ್ ಅವರ ಚೊಚ್ಚಲ ನಿರ್ದೇಶನವನ್ನು ನಿರ್ದೇಶಿಸಲಿದ್ದಾರೆ. 
ಚಂದನ್ ತಿಳಿಸುವಂತೆ ರವಿವರ್ಮ ನಿರ್ದೇಶಕನಾಗುವ ಮೊದಲು ೪೦೦ ಸಿನೆಮಾಗಳ ಸಂಗೀತ ನಿರ್ದೇಶನಕ್ಕೆ ಸಾಥ್ ನೀಡುತ್ತಿದ್ದರಂತೆ. "ಹೀಗೆ ನಮ್ಮಿಬ್ಬರ ಸಂಬಂಧ ಬೆಳೆದದ್ದು" ಎನ್ನುವ ಚಂದನ್ "ನಿರ್ದೇಶಕರ ಪುತ್ರ ತಮ್ಮ ಸಂಗೀತದ ದೊಡ್ಡ ಅಭಿಮಾನಿ" ಎನ್ನುತ್ತಾರೆ.
"ನನ್ನ ವಿಡಿಯೋ ಆಲ್ಬಮ್ ಗಮನಿಸಿ ನನ್ನ ನಟನೆಯ ಬಗ್ಗೆ ರವಿಗೆ ಭರವಸೆ ಮೂಡಿತ್ತು ಮತ್ತು ಅವರ ಪಾತ್ರಕ್ಕೆ ನಾನು ನ್ಯಾಯ ಒದಗಿಸಬಲ್ಲೆ ಎಂದೆನಿಸಿತ್ತು" ಎನ್ನುತ್ತಾರೆ ಚಂದನ್. 
ಗುಬ್ಬಿ ವೀರಣ್ಣ ಪ್ರೊಡಕ್ಷನ್ ಅಡಿ 'ವಿಚಿತ್ರ ಪ್ರೇಮ ಕಥೆ' ಮೂಡಿ ಬರಲಿದೆ. ಈ ಸಿನೆಮಾಗೆ ಚಂದನ್ ಒಂದು ಹಾಡಿಗೆ ಸಂಗೀತ ನೀಡಿ, ಅದನ್ನು ಹಾಡಲಿದ್ದಾರೆ ಕೂಡ. ಆರ್ ಪಿ ಪಟ್ಟನಾಯಕ್ ಉಳಿದ ಭಾಗಕ್ಕೆ ಸಂಗೀತ ನೀಡಲಿದ್ದಾರೆ.
ಕಳೆದ ತಿಂಗಳು ಸಿನೆಮಾದ ಮುಹೂರ್ತ ನೆರವೇರಿದ್ದು, ಜುಲೈ ೧೨ ರಿಂದ ಚಿತ್ರೀಕರಣ ಪ್ರಾರಂಭವಾಗಲಿದೆ. ಈ ಸಿನೆಮಾದಲ್ಲಿ ನಿಷ್ವಿಕ ನಾಯ್ಡು ನಾಯಕ ನಟಿ ಮತ್ತು ಜಗದೀಶ್ ವಾಲಿ ಸಿನೆಮ್ಯಾಟೋಗ್ರಾಫರ್.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನೀವೇನ್ ಮುಚ್ಚೋದು ನಾವೇ ಬಂದ್ ಮಾಡ್ತೀವಿ: Hormuz ಜಲಸಂಧಿ ದಾಟುವ ಹಡಗುಗಳಿಗೆ US ನೌಕಾಪಡೆ ತಡೆ- ಇರಾನ್ ಗೆ ಟ್ರಂಪ್ ಶಾಕ್!

ಅತ್ಯಂತ ಸುಂದರ 'ಮದುವೆ ಹೆಣ್ಣು', 1 ಬಿಲಿಯನ್ ಡಾಲರ್ ಹಣ ಕೊಡಿ: Uganda ಸೇನಾ ಮುಖ್ಯಸ್ಥನ ವಿಚಿತ್ರ ಬೇಡಿಕೆ; Turkey ಬೇಸ್ತು!

ಪಕ್ಷ ವಿರೋಧಿ ಚಟುವಟಿಕೆ: ಜಬ್ಬಾರ್ ರಾಜೀನಾಮೆ ಬೆನ್ನಲ್ಲೇ ಮತ್ತೊಂದು ಶಾಕ್; KPCC ಅಲ್ಪಸಂಖ್ಯಾತ ಘಟಕವನ್ನೇ ವಿಸರ್ಜಿಸಿದ DK Shivakumar

ಮಿಸ್ಟರ್ 'ನಂಗ್ ಗೊತ್ತಿಲ್ಲಾ' ಗೃಹ ಸಚಿವರೇ.. ಇಲ್ನೋಡಿ, ಪುಡಿ ರೌಡಿಗಳ ಹಾವಳಿ: ಪರಮೇಶ್ವರ್ ವಿರುದ್ಧ ಜೆಡಿಎಸ್ ಕಿಡಿ

IPL 2026: ಬಟ್ಲರ್ 14,000 ರನ್ ದಾಖಲೆ; ಮಿಂಚಿದ ಶುಭ್ಮನ್ ಗಿಲ್, ಪ್ರಸಿದ್ಧ್ ಕೃಷ್ಣ; LSG ವಿರುದ್ಧ GT ಗೆಲುವು!

SCROLL FOR NEXT