ಬೆಂಗಳೂರು: ಮಹೇಶ್ ಬಾಬು ನಿರ್ದೇಶನದ ಸಿನೆಮಾ 'ಅತಿರಥ'ದಲ್ಲಿ ಮನರಂಜನೆಯ ಭಾಗವಾಗಿ ಐಟಂ ನೃತ್ಯವೊಂದಕ್ಕೆ ಎಸ್ಟರ್ ನರೋನ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.
ನಟಿ ಈ ನೃತ್ಯಕ್ಕೆ ನಾಯಕನಟ ಚೇತನ್ ಅವರೊಂದಿಗೆ ಹೆಜ್ಜೆ ಹಾಕಲಿದ್ದಾರೆ.
ಮುರಳಿ ಮಾಸ್ಟರ್ ನಿರ್ದೇಶಿಸಿರುವ ಈ ನೃತ್ಯಕ್ಕೆ ಎಸ್ಟರ್ ಹೆಜ್ಜೆ ಹಾಕುತ್ತಿರುವುದಲ್ಲದೆ, ಹಾಡಿಗೆ ಕಂಠದಾನ ಮಾಡಿರುವುದು ಕೂಡ ವಿಶೇಷ. ಇದಕ್ಕೆ ನಾಗೇಂದ್ರ ಪ್ರಸಾದ್ ಗೀತರಚನೆ ಮಾಡಿದ್ದಾರೆ.
ಕಥೆಯನ್ನು ಮುಂದಕ್ಕೆ ಕೊಂಡೊಯ್ಯಲು ಈ ಹಾಡಿನ ಅವಶ್ಯಕೆತೆ ಇತ್ತು ಎನ್ನುತ್ತಾರೆ ನಿರ್ದೇಶಕ ಮಹೇಶ್. ಇದು ಕೇವಲ ಗಮನ ಸೆಳೆಯುವುದಕ್ಕಾಗಿ ಸೃಷ್ಟಿಸಿರುವ ಹಾಡಲ್ಲ ಎನ್ನುವ ಅವರು "ಮೈಸೂರಿನಲ್ಲಿ ಈ ಹಾಡನ್ನು ನಾಲ್ಕು ದಿನಗಳ ಕಾಲ ಚಿತ್ರೀಕರಣ ಮಾಡಿದ್ದೇವೆ" ಎನ್ನುತ್ತಾರೆ.
'ಅತಿರಥ' ಸಿನೆಮಾದ ಮೂಲಕ ಲತಾ ಹೆಗಡೆ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದು, ಸುರಾಗ್ ಸಂಗೀತ ನೀಡಿದ್ದಾರೆ. ಜೈ ಆನಂದ್ ಅವರ ಸಿನೆಮ್ಯಾಟೋಗ್ರಫಿ ಚಿತ್ರಕ್ಕಿದೆ.