ಎಸ್.ಎಸ್.ರಾಜಮೌಳಿ -ಶ್ರೀದೇವಿ(ಸಂಗ್ರಹ ಚಿತ್ರ) 
ಸಿನಿಮಾ ಸುದ್ದಿ

ನಟಿ ಶ್ರೀದೇವಿ ಬಗ್ಗೆ ನೀಡಿದ ಹೇಳಿಕೆಗೆ ವಿಷಾದವಿದೆ: ಬಾಹುಬಲಿ ನಿರ್ದೇಶಕ ರಾಜಮೌಳಿ

ಬಾಹುಬಲಿ ಚಿತ್ರ ಭಾರತೀಯ ಚಿತ್ರರಂಗದಲ್ಲಿ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೂಡ ಹೆಸರು...

ನವದೆಹಲಿ: ಬಾಹುಬಲಿ ಚಿತ್ರ ಭಾರತೀಯ ಚಿತ್ರರಂಗದಲ್ಲಿ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೂಡ ಹೆಸರು ಮಾಡಿದ್ದು ಹಳೆಯ ಸಂಗತಿ. ಚಿತ್ರ ನಿರ್ದೇಶಕ ಎಸ್.ಎಸ್.ರಾಜಮೌಳಿಯವರ ಸಿನಿಮಾ ಇತಿಹಾಸದಲ್ಲಿ ದಾಖಲೆ ಮಾಡಿದೆ.
ಚಿತ್ರದಲ್ಲಿ ಶಿವಗಾಮಿ ಪಾತ್ರದಲ್ಲಿ ಅಭಿನಯಿಸಲು ಖ್ಯಾತ ಅಭಿನೇತ್ರಿ ಶ್ರೀದೇವಿ ಆವರಿಗೆ ಆರಂಭದಲ್ಲಿ ಅವಕಾಶ ನೀಡಲಾಗಿತ್ತು. ಆದರೆ ಅವರು ಅದನ್ನು ನಿರಾಕರಿಸಿದರು ಎಂದೆಲ್ಲ ಸುದ್ದಿಯಾಗಿತ್ತು. ನಂತರ ಆ ಪಾತ್ರವನ್ನು ನಟಿ ರಮ್ಯ ಕೃಷ್ಣ ಮಾಡಿದರು. 
ಇದಕ್ಕೆ ನಟಿ ಶ್ರೀದೇವಿ ಪ್ರತಿಕ್ರಿಯೆ ನೀಡಿ, ರಾಜಮೌಳಿಯಂಥಹ ಘನತೆವೆತ್ತ ನಿರ್ದೇಶಕರು ನನ್ನ ಬಗ್ಗೆ ಹೀಗೆ ಏಕೆ ಮಾತನಾಡಿದರು ಎಂದು ನನಗೆ ನಂಬಲಾಗುತ್ತಿಲ್ಲ. ನಾನು ಯಾವುದೇ ರೀತಿಯ ಬೇಡಿಕೆಯೊಡ್ಡುವ ನಟಿಯಲ್ಲ. ಬಾಹುಬಲಿಯಲ್ಲಿ ನಡೆದಿದ್ದೆಲ್ಲ ಕಳೆದುಹೋದದ್ದು. ಈಗ ಅದರ ಬಗ್ಗೆ ಏಕೆ ಮಾತನಾಡುವುದು, ಈ ಹಿಂದೆ ಸಾಕಷ್ಟು ಪಾತ್ರಗಳನ್ನು ನಾನು ತಿರಸ್ಕರಿಸಿದ್ದೆ. ಅವುಗಳಲ್ಲಿ ಇದು ಕೂಡ ಒಂದು. ನೀವು ಮಾಡದಿರುವ ಚಿತ್ರದ ಬಗ್ಗೆ ಮಾತನಾಡುವುದು ಅವಿಧೇಯತೆ ಎಂದು ಹೇಳಿದ್ದರು.
ಈ ವಿವಾದಕ್ಕೆ ಇದೀಗ ಇತಿಶ್ರೀ ಹಾಡಲು ನಿರ್ಧರಿಸಿರುವ ನಿರ್ದೇಶಕ ರಾಜಮೌಳಿ, ಯಾರ ಮಾತನ್ನು ನಂಬಬೇಕು ಎಂಬುದನ್ನು ಜನತೆ ನಿರ್ಧರಿಸಬೇಕು. ಆದರೆ ಒಂದು ವಿಷಯವಂತೂ ಸತ್ಯ. ನಾನು ಈ ವಿಚಾರವನ್ನು ಸಾರ್ವಜನಿಕ ವೇದಿಕೆಯಲ್ಲಿ ಚರ್ಚಿಸಬಾರದಾಗಿತ್ತು. ಅದು ನಾನು ಮಾಡಿರುವ ತಪ್ಪು. ನನಗೆ ಈ ಬಗ್ಗೆ ವಿಷಾದವಿದೆ ಎಂದು ಹೇಳಿರುವುದಾಗಿ ಖಾಸಗಿ ವೆಬ್ ಸೈಟ್ ವರದಿ ಮಾಡಿದೆ.
ನನಗೆ ಶ್ರೀದೇವಿಯರ ಬಗ್ಗೆ ಅಪಾರ ಗೌರವವಿದೆ. ದಕ್ಷಿಣ ಭಾರತ ಚಿತ್ರರಂಗದ ಧ್ವಜ ಧಾರಕರಂತೆ ಅವರು ಮುಂಬೈಯಲ್ಲಿ ಕಳೆದ ಹಲವಾರು ವರ್ಷಗಳಿಂದ ಇದ್ದಾರೆ. ಅವರಿಗೆ ನಾನು ಒಳ್ಳೆಯದನ್ನು ಬಯಸುತ್ತೇನೆ. ಅವರ ಹೊಸ ಚಿತ್ರ ಮಾಮ್ ನ ಟ್ರೈಲರ್ ತುಂಬಾ ಆಸಕ್ತಿದಾಯಕ ಮತ್ತು ಭರವಸೆ ಹುಟ್ಟಿಸುತ್ತಿದ್ದು ಅವರಿಗೆ ತುಂಬಾ ದೊಡ್ಡ ಯಶಸ್ಸು ನೀಡಲಿ ಎಂದು ಆಶಿಸುತ್ತೇನೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ರಾಜ್ಯದಲ್ಲಿ ಪ್ರವಾಹದಿಂದ ಬೆಳೆಹಾನಿ: ಪ್ರತಿ ಹೆಕ್ಟೇರ್ ಗೆ ಹೆಚ್ಚುವರಿ 8,500 ರೂ ಪರಿಹಾರ- ಸಿಎಂ ಸಿದ್ದರಾಮಯ್ಯ

ರಾಜ್ಯದಲ್ಲಿ ಮಳೆ ಹಾನಿಯಿಂದ 52 ಮಂದಿ ಸಾವು; ವಾರಸುದಾರರಿಗೆ ಪರಿಹಾರ ವಿತರಣೆ: ಸಿಎಂ ಸಿದ್ದರಾಮಯ್ಯ

Gaza peace deal: ಹಮಾಸ್‌ಗೆ ಮೂರ್ನಾಲ್ಕು ದಿನಗಳ ಗಡುವು, ನಕಾರ ಮಾಡಿದ್ರೆ 'ನರಕ'ಕ್ಕೆ ದಾರಿ ತೋರಿಸ್ತಿವಿ! ಟ್ರಂಪ್ ಗುಡುಗು

Rahul Security: ರಾಹುಲ್, ಸೋನಿಯಾ, ಪ್ರಿಯಾಂಕಾ ಜೀವಕ್ಕೆ ಅಪಾಯ; ಭದ್ರತೆ ಹೆಚ್ಚಳಕ್ಕೆ ಕಾಂಗ್ರೆಸ್ ಒತ್ತಾಯ

ನಾನು ಜೋಕರ್ ರೀತಿ ನಿಂತಿದ್ದೆ: ಏಷ್ಯಾಕಪ್ ಟ್ರೋಫಿ ಖಾಸಗಿ ವ್ಯಕ್ತಿಯ ಆಸ್ತಿಯಲ್ಲ; BCCI ಉಪಾಧ್ಯಕ್ಷರ ಪ್ರಶ್ನೆಗೆ ನಖ್ವಿ ತತ್ತರ!

SCROLL FOR NEXT