ದೇಶದ ಪರಂಪರೆ ಮತ್ತು ಸಂಸ್ಕೃತಿ ಕುರಿತ ಆಲ್ಬಂನಲ್ಲಿ ಆಡಲಿರುವ ಹರ್ಭಜನ್ ಸಿಂಗ್
ನವದೆಹಲಿ: ಭಾರತ ಕ್ರಿಕೆಟ್ ತಂಡದಲ್ಲಿ ಮಿಂಚು ಹರಿಸಿದ್ದ ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ಇದೀಗ ಸಿಂಗರ್ ಆಗಲಿದ್ದಾರೆ.
ದೇಶಕ್ಕಾಗಿ ಸರ್ವವನ್ನು ಅರ್ಪಿಸಿದ ರಿಯಲ್ ಹೀರೋಗಳ ಸ್ಮರಣೆಗಾಗಿ ಸಂಗೀತ ನಿರ್ದೇಶಕ ಮಿಥೂನ್ ಆಲ್ಬಂ ಸಾಂಗ್ ವೊಂದನ್ನು ಕಂಪೂಸ್ ಮಾಡಿದ್ದು ಇದಕ್ಕೆ ಹರ್ಭಜನ್ ಸಿಂಗ್ ಧ್ವನಿಯಾಗಲಿದ್ದಾರೆ.
ಹರ್ಭಜನ್ ಸಿಂಗ್ ಅವರು ಕೆಲವೊಂದು ವಿಚಾರಗಳನ್ನು ನನ್ನಲ್ಲಿ ಹೇಳಿಕೊಳ್ಳುತ್ತಿದ್ದರು. ನಾವಿಬ್ಬರು ಒಳ್ಳೆಯ ಗೆಳೆಯರು, ನಮ್ಮಿಬ್ಬರಿಗೂ ಸಂಗೀತ ಅಂದರೆ ಪಂಚಪ್ರಾಣ. ಹೀಗಾಗಿ ರಾಷ್ಟ್ರೀಯ ಪರಂಪರೆ ಮತ್ತು ಸಂಸ್ಕೃತಿ ಕುರಿತು ಒಂದು ಆಲ್ಬಂ ಮಾಡುವ ಇರಾದೆಯನ್ನು ಹರ್ಭಜನ್ ಸಿಂಗ್ ವ್ಯಕ್ತಪಡಿಸಿದ್ದರು ಎಂದು ಮಿಥುನ್ ಹೇಳಿದ್ದಾರೆ.
ದೇಶಾದ ನಾನಾ ಭಾಗಗಳಲ್ಲಿ ಈ ಆಲ್ಬಂನ ಶೂಟಿಂಗ್ ಮಾಡಲಾಗುವುದು. ಸಾಮಾನ್ಯ ವ್ಯಕ್ತಿ ದೇಶದ ಪ್ರಗತಿಯಲ್ಲಿ ಹೇಗೆ ಭಾಗಿಯಾಗುತ್ತೇನೆ ಎಂಬುದನ್ನು ಬಿಂಬಿಸುವ ದೃಶ್ಯಗಳನ್ನು ಸೆರೆಹಿಡಿಯಲಾಗುವುದು. ಈ ಆಲ್ಬಂ ಹಿಂದಿ ಮತ್ತು ಇಂಗ್ಲೀಷ್ ನಲ್ಲಿದ್ದು ಡಿಸೆಂಬರ್ ವೇಳೆ ಸಿದ್ಧಗೊಳ್ಳಲಿದೆ ಎಂದರು.