ಬೆಂಗಳೂರು: ಎಲ್ಲವೂ ಅಂದು ಕೊಂಡಂತೆ ಆಗಿದ್ದರೇ ಜೂನ್ ತಿಂಗಳಿನಲ್ಲಿ ನಿಖಿಲ್ ಕುಮಾರ್ ಹೊಸ ಸಿನಿಮಾ ಸೆಟ್ಟೇರಬೇಕಿತ್ತು. ಆದರೆ ನಿಖಿಲ್ ಹೊಸ ಸಿನಿಮಾ ಅಕ್ಟೋಬರ್ ನಲ್ಲಿ ಸೆಟ್ಟೇರಲಿದೆ.
ನಿಖಿಲ್ ಮುಂದಿನ ಸಿನಿಮಾಗೆ ಚೇತನ್ ಕುಮಾರ್ ನಿರ್ದೇಶನ ಮಾಡಬೇಕಿತ್ತು, ಆದರೆ ಸದ್ಯ ಭರ್ಜರಿ ಸಿನಿಮಾದಲ್ಲಿ ಚೇತನ್ ಬ್ಯುಸಿಯಾಗಿರುವ ಕಾರಣ ಡೇಟ್ಯ್ ಹೊಂದಾಣಿಕೆ ಕಾರಣ ಚೇತನ್ ನಿಖಿಲ್ ಸಿನಿಮಾದಿಂದ ಹೊರ ನಡೆದಿದ್ದಾರೆ. ಹೀಗಾಗಿ ಈ ಹಿಂದೆ ತಯಾರಿಸಿದ್ದ ಚಿತ್ರಕಥೆಯನ್ನ ಬಿಟ್ಟು ಮತ್ತೆ ಹೊಸದಾಗಿ ಕಥೆ ಬರೆಯಲಾಗುತ್ತಿದೆ.
ನಿಖಿಲ್ ಸಿನಿಮಾವನ್ನು ಮಹೇಶ್ ರಾವ್ ನಿರ್ದೇಶನ ಮಾಡುವುದು ಬಹುತೇಕ ಖಚಿತವಾಗಿದೆ. ಮಹೇಶ ಜೊತೆ ತೆಲುಗಿ ಗೋಪಿ ಮೋಹನ್ ಮತ್ತು ಮೆಹರ್ ರಮೇಶ್ ಚಿತ್ರಕಥೆ ಸಿದ್ಧಪಡಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ನಿಖಿಲ್ ಗಾಗಿ ಉತ್ತಮ ಕಥೆ ತಯಾರಿಸುತ್ತಿದ್ದು, ಅಕ್ಟೋಬರ್ ನಲ್ಲಿ ಸಿನಿಮಾ ಸೆಟ್ಟೇರಲಿದೆ.
ಕಥೆ ಆಯ್ಕೆಯಲ್ಲಿ ನಿಖಿಲ್ ತುಂಬಾ ಪರ್ಟಿಕುಲರ್,ಆದರೆ ಸಿನಿಮಾ ಸಂಬಂಧ ಚಿತ್ರತಂಡ ಎಲ್ಲಿಯೂ ಅಧಿಕೃತವಾಗಿ ಪ್ರಕಟಿಸಿಲ್ಲ, ಕಥೆ ಅಂತಿಮವಾದ ನಂತರ ಪ್ರೊಡಕ್ಷನ್ ಹೌಸ್ ಸಿನಿಮಾ ಬಗ್ಗೆ ಪ್ರಕಟಣೆ ಹೊರಡಿಸಲಿದೆ,
ಜಾಗ್ವಾರ್ ಸಿನಿಮಾಗೆ ಸೈಮಾ ಪ್ರಶಸ್ತಿ ಪಡೆದ ನಂತರ ನಿಖಿಲ್ ಕಥೆಯ ಆಯ್ಕೆಯಲ್ಲಿ ತುಂಬಾ ಜಾಗೃತರಾಗಿದ್ದಾರೆ. ನಿಖಿಲ್ ಮುಂದಿನ ಸಿನಿಮಾಗೆ ರಿಯಾ ನಲ್ವಾಡೆ ನಾಯಕಿಯಾಗಿದ್ದಾರೆ.