ಶ್ರದ್ಧಾ ಶ್ರೀನಾಥ್ 
ಸಿನಿಮಾ ಸುದ್ದಿ

ಅಲಮೇಲಮ್ಮ ಯಾರು? ಹೇಳೋಕೆ ಬರ್ತಿದ್ದಾರೆ ಅನನ್ಯ ಟೀಚರ್

ಶ್ರದ್ಧಾ ಅಭಿನಯದ 'ಆಪರೇಷನ್ ಅಲಮೇಲಮ್ಮ' ಚಿತ್ರದ ಬಿಡುಗಡೆಗೆ ದಿನಗಣನೆ ಶುರುವಾಗಿದ್ದು, ಇದೇ ವಾರ ಜುಲೈ 21 ರಂದು ಸಿನಿಮಾ ಬಿಡುಗಡೆಯಾಗುತ್ತಿದೆ...

ಬೆಂಗಳೂರು: ಶ್ರದ್ಧಾ ಶ್ರೀನಾಥ್ ಅಭಿನಯದ ಎರಡು ಸಿನಿಮಾಗಳು ಒಂದೇ ದಿನ ರಿಲೀಸ್ ಆಗುತ್ತಿವೆ.
ಶ್ರದ್ಧಾ ಅಭಿನಯದ 'ಆಪರೇಷನ್ ಅಲಮೇಲಮ್ಮ' ಚಿತ್ರದ ಬಿಡುಗಡೆಗೆ ದಿನಗಣನೆ ಶುರುವಾಗಿದ್ದು, ಇದೇ ವಾರ ಜುಲೈ 21 ರಂದು ಸಿನಿಮಾ ಬಿಡುಗಡೆಯಾಗುತ್ತಿದೆ. ಈ ಸಂತಸದಲ್ಲಿರುವ ಶ್ರದ್ಧಾಗೆ ಈ ವಾರ ಡಬಲ್ ಧಮಾಕ ಆಗಿದೆ.
ಕನ್ನಡದ 'ಆಪರೇಷನ್ ಅಲಮೇಲಮ್ಮ' ಜೊತೆ ತಮಿಳಿನ 'ವಿಕ್ರಂ ವೇದ' ಚಿತ್ರವೂ ಅದೇ ದಿನ ತೆರೆಕಾಣುತ್ತಿದೆ. ಶ್ರದ್ಧಾ ನಾಯಕಿಯಾಗಿರುವ ಈ ಚಿತ್ರದಲ್ಲಿ ವಿಜಯ್ ಸೇಥುಪತಿ ಮತ್ತು ಮಾಧವನ್ ನಾಯಕರಾಗಿ ಅಭಿನಯಿಸಿದ್ದಾರೆ. ಪುಷ್ಕರ್ ಗಾಯಿತ್ರಿ ಈ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ.
ಒಂದೇ ಬಾರಿಗೆ ಎರಡು ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿರುವುದು ನನ್ನ ಅದೃಷ್ಟ.  ಈ ಬಗ್ಗೆ ನಾನು ತುಂಬಾ ಕುತೂಹಲ ಭರಿತಳಾಗಿದ್ದೇನೆ ಎಂದು ಶ್ರದ್ಧಾ ಹೇಳಿದ್ದಾರೆ.
ಎರಡು ಸಿನಿಮಾಗಳಿಗೂ ನಾನು ಸಮಾನವಾಗಿ ಸಮಯ ನೀಡಿದ್ದೇನೆ, ನಟಿಯೊಬ್ಬರ ವೃತ್ತಿ ಜೀವನದಲ್ಲಿ ಈ ರೀತಿಯ ಅವಕಾಶ ಬರುವುದು ಅರೂಪ ಎಂದು ಹಲವರು ಹೇಳಿದ್ದಾರೆ. ಈ ಸಮಯವನ್ನು ಸಂಭ್ರಮದಿಂದ ಆಚರಿಸುತ್ತೇನೆ ಎಂದು ಶ್ರದ್ಧಾ ತಿಳಿಸಿದ್ದಾರೆ.
2016 ರಲ್ಲಿ ಆರಂಭವಾದ ಆಪರೇಷನ್ ಅಲಮೇಲಮ್ಮ ಸಿನಿಮಾ  ಬಿಡುಗಡೆ ಕಾರಣಾಂತರಗಳಿಂದ ನಿಧಾನವಾಯಿತು. ಒಳ್ಳೆಯ ವಿಷಯ ಯಾವಾಗಲು ಪ್ರೇಕ್ಷಕರ ಹೃದಯವನ್ನು ಗೆಲ್ಲುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಆಪರೇಷನ್ ಅಲಮೇಲಮ್ಮ ಸಿನಿಮಾದಲ್ಲಿನ ಅನನ್ಯಾ ಟೀಚರ್ ಪಾತ್ರ ಶ್ರದ್ಧಾ ಮುಖದ ಮೇಲೆ ನಗು ತರುತ್ತದಂತೆ. ಮಧ್ಯಮ ವರ್ಗದ ಹೆಣ್ಣುಮಗಳೊಬ್ಬಳ ಜವಾಬ್ದಾರಿ, ಪ್ರೀತಿಯ ವಿಷಯ ಕಥಾ ವಸ್ತುವಾಗಿದೆ. ಹೋರಾಟವಿಲ್ಲದೇ ಅನನ್ಯಾ ಯಾವ ಕೆಲಸದಿಂದ ಹಿಂದೆ ಸರಿಯುವುದಿಲ್ಲ ಎಂಬುದನ್ನು ಪ್ರೋಮೋದಲ್ಲಿ ನೋಡಬಹುದಾಗಿದೆ.
ಅಲಮೇಲಮ್ಮ ಜೊತೆ ಅನನ್ಯಾ ಕೆಲಸ ಏನು, ಅಲಮೇಲಮ್ಮ ಯಾರು, ಇಡೀ ಆಪರೇಷನ್ ನಲ್ಲಿ ಆಕೆಯ ಪಾತ್ರವೇನು, ಎಂಬುದರ ಬಗ್ಗೆ ಅನನ್ಯಾ ತಿಳಿಸುತ್ತಾಳೆ ಎಂದು ಶ್ರದ್ಧಾ ಹೇಳಿದ್ದಾರೆ. ಆಪರೇಷನ್ ಅಲಮೇಲಮ್ಮದಲ್ಲಿ ಕಥೆಯೇ ಚಿತ್ರದ ಜೀವಾಳ, ಪಾತ್ರದ ಸಂಭಾಷಣೆ ಬಹಳ ಚೆನ್ನಾಗಿದೆ ಟೈಟಲ್ ತಮಾಷೆಯಾಗಿ ಕಂಡರೂ ಚಿತ್ರಕಥೆ ಬಹಳ ಗಂಭೀರವಾದದ್ದು, ನಿರ್ದೇಶಕ ಸುನಿ ಅವರಿಂದ ಪಾತ್ರಗಳು ಮತ್ತು ಸಿನಿಮಾ ವಿಶೇಷ ಶೈಲಿಯಲ್ಲಿ ಮೂಡಿ ಬಂದಿವೆ.
ಯೂ ಟರ್ನ್ ನಿಂದ ಆರಂಭವಾದ ಶ್ರದ್ಧಾ ಪಯಣ ಅನಂತರದ ಎಲ್ಲಾ ಪಾತ್ರಗಳು ಖುಷಿ ಕೊಟ್ಟಿವೆಯಂತೆ, ರಿಷಿ ಜೊತೆ ನಾನು ಅಭಿನಯಿಸಿದ ಮೊದಲ ಸಿನಿಮಾ ಇದಾಗಿದೆ.
ರಿಷಿಗೆ ಇದು ಮೊದಲ ಸಿನಿಮಾ, ಆದರೆ ಉತ್ತಮವಾಗಿ ಅಭಿನಯಿಸಿದ್ದಾರೆ. 
ವಿವಿಧ ವರ್ಗಗಳ ಪ್ರೇಕ್ಷಕರನ್ನು ಸೆಳೆಯಲು ಶ್ರದ್ಧಾ ಪ್ರಯತ್ನಿಸುತ್ತಿದ್ದಾರೆ, ಮಲ್ಟಿಫ್ಲೆಕ್ಸ್ ಪ್ರೇಕ್ಷಕರು ನನ್ನಿಂದ ವಿಭಿನ್ನವಾದದ್ದನ್ನು ನಿರೀಕ್ಷಿಸುತ್ತಾರೆ ಎಂದು ನನಗನ್ನಿಸುತ್ತದೆ ಎಂದು ಶ್ರದ್ಧಾ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

2030 Commonwealth Games: ಭಾರತದ ಬಿಡ್‌ಗೆ ಕ್ಯಾಬಿನೆಟ್ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

SCROLL FOR NEXT