ಬೆಂಗಳೂರು: ಭರ್ಜರಿ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ನಟಿ ರಚಿತಾ ರಾಮ್ ಶೀಘ್ರವೇ ಟಾಲಿವುಡ್ ಅಥವಾ ಕಾಲಿವುಡ್ ನಲ್ಲಿ ತಮ್ಮ ಅದೃಷ್ಟ ಪರೀಕ್ಷಿಸಲಿದ್ದಾರೆ.
ಅದಕ್ಕಾಗಿ ಅವರು ಇತ್ತೀಗಷ್ಟೆ ಫೋಟೋ ಶೂಟ್ ನಡೆಸಿದ್ದಾರೆ. ಬೇರೆ ಭಾಷೆಗಳಲ್ಲಿ ನಟಿಸುವ ಅವಕಾಶ ಸಿಕ್ಕಿರುವುದಕ್ಕೆ ರಚಿತಾ ಸಂತಸ ವ್ಯಕ್ತ ಪಡಿಸಿದ್ದಾರೆ.
ಈ ಸಂಬಂಧ ಅವರನ್ನು ಪ್ರಶ್ನಿಸಿದಾಗ, ಯಾವುದೇ ಮಾಹಿತಿಯನ್ನು ಈಗಲೇ ಹೇಳಲಾಗದು. ಚಿತ್ರ ನಿರ್ಮಾಣ ತಂದ ಅಧಿಕೃತವಾಗಿ ಪ್ರಕಟಿಸುವವರೆಗೂ ಕಾಯಬೇಕು ಎಂದು ಹೇಳಿದ್ದಾರೆ. ಕನ್ನಡ ಇಂಡಸ್ಟ್ರಿ ಬಿಟ್ಟು ಬೇರೆ ಭಾಷೆಗಳಲ್ಲಿ ನೆಲೆ ಕಂಡುಕೊಂಡಿರುವ ನಟಿಯರಂತೆ ರಚಿತಾ ಕೂಡ ಬೇರೆ ಭಾಷೆಯಲ್ಲಿ ನಟಿಸಲು ಹೊರಟಿದ್ದಾರೆ.
ತಮಿಳು ಮತ್ತು ತೆಲುಗು ಚಿತ್ರರಂಗದಿಂದ ರಚಿತಾಗೆ ಆಫರ್ ಬಂದಿದೆ. ಆದರೆ ನಿರ್ಧರಿಸಲು ರಚಿತಾ ಸಮಯಾವಕಾಶ ಕೋರಿದ್ದರು. ಸದ್ಯ ರಚಿತಾ ಬೇರೆ ಭಾಷೆಯ ಸಿನಿಮಾಗಳಲ್ಲಿ ನಟಿಸಲು ಆಸಕ್ತಿ ತೋರಿದ್ದಾರೆ.
ಕಿರುತೆರೆಯ ಮೂಲಕ ಎಂಟ್ರಿ ಪಡೆದ ರಚಿತಾ ರಾಮ್, ದರ್ಶನ್, ಸುದೀಪ್, ಪುನೀತ್. ಗಣೇಶ್ ಸೇರಿದಂತೆ ಹಲವು ಸ್ಟಾರ್ ನಟರ ಜೊತೆ ನಟಿಸಿದ್ದಾರೆ. ಪುಷ್ಪಕ ವಿಮಾನದಲ್ಲಿ ನಟಿಸಿದ್ದ ರಚಿತಾ, ಧ್ರುವ ಸರ್ಜಾ ಅಭಿನಯದ ಭರ್ಜರಿ ಸಿನಿಮಾದ ನಾಯಕಿಯಾಗಿದ್ದಾರೆ. ಉಪೇಂದ್ರ ಅಭಿನಯದ ಉಪ್ಪಿ ರುಪ್ಪಿ ಸಿನಿಮಾ ಶೂಟಿಂಗ್ ನಲ್ಲೂ ರಚಿತಾ ನಟಿಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics