ಮುಂಬಯಿ: ಬಾಲಿವುಡ್ ನಟಿ ಸನ್ನಿ ಲಿಯೋನ್ ಮತ್ತು ಪತಿ ಡೆನಿಯಲ್ ವೆಬರ್ ಈಗ 21 ತಿಂಗಳ ಹೆಣ್ಣು ಮಗುವಿನ ಪೋಷಕರಾಗಿದ್ದಾರೆ.
ಕಳೆದ ಎರಡು ವರ್ಷಗಳ ಹಿಂದೆ ಮಗುವನ್ನು ದತ್ತು ಪಡೆಯಲು ಅನಾಥಾಶ್ರಮಕ್ಕೆ ಮನವಿ ಮಾಡಿದ್ದರು. ಅಂತಿಮವಾಗಿ ಸನ್ನಿ ಲಿಯೋನ್ ದಂಪತಿಯ ಕನಸು ನನಸಾಗಿದ್ದು.
ಮಹಾರಾಷ್ಟ್ರದ ಲಾತೂರ್‌ನಿಂದ ಹೆಣ್ಣು ಮಗುವನ್ನು ದತ್ತು ಪಡೆದಿದ್ದಾರೆ. ಮಗುವಿಗೆ ನಿಶಾ ಕೌರ್ ವೆಬರ್ ಎಂದು ಹೆಸರಿಡಲಾಗಿದೆ.
ಮಗುವನ್ನು ಕಾನೂನಾತ್ಮಕವಾಗಿ ಮನೆಗೆ ಕರೆದುಕೊಂಡು ಹೋಗಲು ಅವಕಾಶ ಪಡೆದು ಸಂಭ್ರಮಿಸಿದ್ದಾರೆ.
ಕಾನೂನು ಅನ್ವಯ ದತ್ತು ಪಡೆಯಲು ಹಲವು ಪತ್ರಗಳನ್ನು ಸಿದ್ದಪಡಿಸಲು ಹೆಚ್ಚು ತಿರುಗಾಡಬೇಕಾಯಿತು.ಈಗ ನಿಶಾಳ ಮುಖ ನೋಡಿ ಖುಷಿ ಎನಿಸುತ್ತಿದೆ ಎಂದು ಡೆನಿಯಲ್ ಹೇಳಿದ್ದಾರೆ.