ರಿಮ್ಮಿ ಟೋಮಿ 
ಸಿನಿಮಾ ಸುದ್ದಿ

ಮಲೆಯಾಳಂ ನಟಿ ಲೈಂಗಿಕ ದೌರ್ಜನ್ಯ ಪ್ರಕರಣ: ಹಿನ್ನಲೆ ಗಾಯಕಿ, ನಟಿ ರಿಮ್ಮಿ ವಿಚಾರಣೆ

ಮಲೆಯಾಳಂ ನಟಿಯ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ತನಿಖೆ ನಡೆಸುತ್ತಿರುವ....

ಕೊಚ್ಚಿ: ಮಲೆಯಾಳಂ ನಟಿಯ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಹಿನ್ನಲೆ ಗಾಯಕಿ ಹಾಗೂ ನಟಿ ರಿಮ್ಮಿ ಟೋಮಿ ಅವರನ್ನು ಗುರುವಾರ ವಿಚಾರಣೆಗೆ ಒಳಪಡಿಸಿದೆ. 
ಮೂಲಗಳ ಪ್ರಕಾರ, ಪ್ರಕರಣದ ಮತ್ತೊಬ್ಬ ಆರೋಪಿ ಮಲೆಯಾಳಂ ನಟ ದಿಲೀಪ್ ಹಾಗೂ ಅವರ ಪತ್ನಿ, ನಟಿ ಕಾವ್ಯ ಮಾಧವನ್ ಅವರಿಗೆ ರಿಮ್ಮಿ ಆತ್ಮೀಯ ಸ್ನೇಹಿತೆಯಾಗಿದ್ದು, ಅವರೊಂದಿಗೆ ಹಣಕಾಸಿನ ವ್ಯವಹಾರ ಹೊಂದಿರುವ ಹಿನ್ನೆಲೆಯಲ್ಲಿ ಅವರಿಂದ ಹೇಳಿಕೆ ಪಡೆದುಕೊಳ್ಳಲಾಗಿದೆ.
ತನಿಖಾಧಿಕಾರಿಗಳು ರಿಮ್ಮಿ ಟೋನಿ ಅವರನ್ನು ಇಂದು ದೂರವಾಣಿ ಮೂಲಕ ವಿಚಾರಣೆ ನಡೆಸಿದ್ದು, ಮತ್ತೊಮ್ಮೆ ವಿಚಾರಣೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಈ ಮಧ್ಯೆ, ದಿಲೀಪ್ ದಂಪತಿಗಳೊಂದಿಗಿನ ಹಣಕಾಸು ವ್ಯವಹಾರವಿದೆ ಎಂಬ ವರದಿಗಳನ್ನು ರಿಮ್ಮಿ ಸ್ಪಷ್ಟವಾಗಿ ತಳ್ಳಿಹಾಕಿದ್ದು, ಮಲೆಯಾಳಂ ನಟಿ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತಮ್ಮಿಂದ ಕೆಲವು ಮಾಹಿತಿ ಪಡೆದಿದ್ದಾರೆ. ಅದು ವಿಚಾರಣೆ ಅಲ್ಲ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪ್ರತಿಪಕ್ಷಗಳು ಸಂಪುಟದಿಂದ ವಜಾಕ್ಕೆ ಆಗ್ರಹಿಸುತ್ತಿರುವ ಮಧ್ಯೆ ಸಚಿವ ಬಿ. ನಾಗೇಂದ್ರಗೆ ಹೈಕೋರ್ಟ್ ಬಿಗ್ ರಿಲೀಫ್!

ಶಿವಗಂಗೆ ಬೆಟ್ಟಕ್ಕೆ ಟ್ರೆಕ್ಕಿಂಗ್‌ ಹೋಗಿದ್ದ ಟೆಕ್ಕಿ ನಾಪತ್ತೆ: ಲ್ಯಾಪ್‌ಟಾಪ್‌ನಲ್ಲಿ ಶಾಂತಲಾ ಡ್ರಾಪ್‌ ಪಾಯಿಂಟ್‌ ಸರ್ಚ್‌; ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ!

ರಾಂಚಿ ಪರೀಕ್ಷೆ ವಿವಾದ: ಬ್ಯಾರಿಕೇಡ್ ಮುರಿದು ವಿಧಾನಸೌಧದತ್ತ ನುಗ್ಗಿದ ವಿದ್ಯಾರ್ಥಿಗಳು! ಜಲಫಿರಂಗಿ ಬಳಸಿದ ಪೊಲೀಸರು, Video

'ಬಸವಣ್ಣನನ್ನೇ ಬಿಡಲಿಲ್ಲ.. ನಾನ್ಯಾರು..'; ‘ಅವರಿಗೆ ಸಚಿವ ಸ್ಥಾನ ಸಿಗದಿರಲು ನಾನು ಕಾರಣ ಅಲ್ಲ’ ಎಂದ ಎಂಬಿ ಪಾಟೀಲ್ ಸ್ಪಷ್ಟನೆ, Video

'JDS ಪಾದಯಾತ್ರೆಯ ಬಂಡವಾಳ ಬಯಲು ಮಾಡಿದ ವಿಜಯೇಂದ್ರ': ಕಾಂಗ್ರೆಸ್​​ನಿಂದ ವಿಡಿಯೋ ಬಿಡುಗಡೆ!