ರಾಜ್-ವಿಷ್ಣು ಸಿನಿಮಾ ಸ್ಟಿಲ್
ಬೆಂಗಳೂರು: ಅಧ್ಯಕ್ಷ ನಂತರ ಶರಣ್-ಚಿಕ್ಕಣ್ಣ ಕಾಂಬಿನೇಷನ್ ನಲ್ಲಿ ರಾಜ್-ವಿಷ್ಣು ಸಿನಿಮಾ ಮೂಡಿ ಬರುತ್ತಿದೆ. ಮೊದಲ ಬಾರಿ ನಿರ್ದೇಶಕ ಕೆ, ಮಾದೇಶ ಅವರ ಜೊತೆ ಈ ಇಬ್ಬರು ನಟರು ಕೆಲಸ ಮಾಡುತ್ತಿದ್ದಾರೆ. ಶ್ರೀಮುರುಳಿ ಕೂಡ ಈ ಸಿನಿಮಾದಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ತಮಿಳಿನ ರಜನಿ-ಮುರುಗ್ ಸಿನಿಮಾದ ರಿಮೇಕ್ ರಾಜ್ -ವಿಷ್ಣು ಚಿತ್ರವನ್ನು ರಾಮು ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಸಿನಿಮಾ ಟೈಟಲ್ ಜವಾಬ್ದಾರಿ ಹೊತ್ತಿರುವ ನಿರ್ದೇಶಕ ಕೆ.ಮಾದೇಶ್ ಕನ್ನಡ ಚಿತ್ರರಂಗದ ಇಬ್ಬರು ದಿಗ್ಗಜ ನಟರುಗಳ ಹೆಸರಿಗೆ ಯಾವುದೇ ರೀತಿ ಧಕ್ಕೆಯಾಗದಂತೆ ಸಿನಿಮಾ ಕಥೆ ಹೆಣೆದಿದ್ದಾರೆ,.
ಸಿನಿಮಾಗೆ ಸೂಕ್ತ ಟೈಟಲ್ ಕೊಡುವುದು ಬಹಳ ಮುಖ್ಯ. ಕಥೆ ಇಬ್ಬರು ಹಿರಿಯರದ್ದು. ಈ ಇಬ್ಬರು ನಾಯಕ ಮತ್ತು ನಾಯಕಿಯ ತಂದೆಯರು. ಜೊತೆಗೆ ಇಬ್ಬರು ನಾಯಕರು ಹುಚ್ಚು ಅಭಿಮಾನಿಗಳಾಗಿರುತ್ತಾರೆ ಎಂದು ನಿರ್ದೇಶಕ ಮಾದೇಶ್ ಚಿತ್ರದ ಪಾತ್ರಗಳ ಬಗ್ಗೆ ಕಿರು ವಿವರಣೆ ನೀಡಿದ್ದಾರೆ.
ಶರಣ್ ಮತ್ತು ಚಿಕ್ಕಣ್ಣ ಕೆಮಿಸ್ಟ್ರಿ ಅದ್ಭುತವಾಗಿದೆ. ಇಬ್ಬರು ಒಟ್ಟೊಟ್ಟಿಗೆ ಅಭಿನಯಿಸುವ ಸನ್ನಿವೇಶಗಳಲ್ಲಿ ಉತ್ತಮವಾಗಿ ನಟಿಸಿದ್ದಾರೆ.
ಸಿನಿಮಾ ಕಥೆ ಯೂನಿವರ್ಸಲ್ ಆಗಿರುವುದರಿಂದ ರಿಮೇಕ್ ಮಾಡಲು ನಿರ್ಧರಿಸಿದೆ. ಈ ಕಥೆಯನ್ನು ಹಲವು ಭಾಷೆಗಳಲ್ಲಿ ಹೇಳಬಹುದಾಗಿದೆ. ರಾಜ್-ವಿಷ್ಣು ಇಬ್ಬರು ಭಾರತ ಬಿಟ್ಟು ವಿದೇಶಕ್ಕೆ ಹೋಗುತ್ತಾರೆ. ಅಲ್ಲಿಗೆ ಹೋದ ನಂತರ ಕುಟುಂಬದ ಮೌಲ್ಯಗಳನ್ನು ಮರೆಯುತ್ತಾರೆ, ಕಥೆ ಪ್ರಸ್ತುತ ದಿನಗಳಲ್ಲಿ ಎಲ್ಲರಿಗೂ ಅನ್ವಯವಾಗುವಂತಹದ್ದು, ಅದನ್ನು ರಾಜ್ -ವಿಷ್ಣು ಸಿನಿಮಾದಲ್ಲಿ ಉತ್ತಮವಾಗಿ ತೋರಿಸಲಾಗಿದೆ. ನಾಯಕ ಮತ್ತು ಅಜ್ಜನ ನಡುವಿನ ಸಂಬಂಧದ ನಡುವಿನ ಕಥೆಯಾಗಿದೆ ಎಂದು ಮಾದೇಶ್ ವಿವರಿಸಿದ್ದಾರೆ.
ರಾಮು ಅವರಂತ ನಿರ್ಮಾಪಕರೊಂದಿಗೆ ಕೆಲಸ ಮಾಡುವುದು ಅದೃಷ್ಟ. ಅವರ ಅನುಭವ ಚಿತ್ರತಂಡಕ್ಕೆ ಮಾರ್ಗದರ್ಶನವಾಗಿದೆ, ತಮಿಳು ಸಿನಿಮಾಗಿಂತ ಶೇ.60 ರಷ್ಟು ಕನ್ನಡ ಕಥೆಯಲ್ಲಿ ಬದಲಾವಣೆ ಮಾಡಲಾಗಿದೆ ಎಂಗು ಮಾದೇಶ್ ತಿಳಿಸಿದ್ದಾರೆ.
ಸಾಧುಕೋಕಿಲಾ 4 ಗೆಟಪ್ ಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ರಾಜ ಕುಮಾರ್ ಮತ್ತು ವಿಷ್ಣು ವರ್ದನ್ ಅವರ ಸಿನಿಮಾಗಳ ಹಲವು ಸನ್ನಿವೇಶಗಳನ್ನು ಚಿತ್ರದಲ್ಲಿ ಬಳಸಲಾಗಿದೆ, ಅರ್ಜುನ್ ಜನ್ಯ ಸಿನಿಮಾಗೆ ಸಂಗೀತ ನೀಡಿದ್ದಾರೆ.