ಬೆಂಗಳೂರು: ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಎರಡನೇ ಪುತ್ರ ವಿಕ್ರಮ್ ರವಿಚಂದ್ರನ್ ಅವರನ್ನು ನಾಯಕನನ್ನಾಗಿ ನಿರ್ದೇಶಕ ನಾಗಶೇಖರ್ ಪರಿಚಯಿಸುತ್ತಿದ್ದಾರೆ.
ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ ಸಿನಿಮಾ ಮೂಡಿ ಬರುತ್ತಿದ್ದು, ವಿಕ್ರಮ್ ಹುಟ್ಟುಹಬ್ಬದಂದು ಅಂದರೇ ಆಗಸ್ಟ್ 16ರಂದು ಸಿನಿಮಾದ ಮೊದಲ ಫರ್ಸ್ಟ್ ಲುಕ್ ಮತ್ತು ಟೀಸರ್ ಬಿಡುಗಡೆಯಾಗಲಿದೆ.
ಚಿತ್ರಕ್ಕೆ ಅಪರೂಪವೆನಿಸುವಂತ ಟೈಟಲ್ ಇಡಲಾಗಿದೆ. "ನವೆಂಬರ್ ನಲ್ಲಿ ನಾನು ಅವಳು' ಎಂದು ಹೆಸರಿಡಲಾಗಿದೆ. ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂನಲ್ಲಿಸಿದ್ಧವಾಗುತ್ತಿದೆ. ತಮಿಳಿನಲ್ಲಿ "ಅವಳುಂ ನಾನುಂ ಅಲೆಯುಂ ಕಡಲಂ' ಎಂದು , ತೆಲುಗಿನಲ್ಲಿ "ಅಪ್ಪುಡಪ್ಪುಡು' ಎಂದು ನಾಮಕರಣ ಮಾಡಲಾಗಿದೆ.
ಶರತ್ ಕುಮಾರ್, ಸುಹಾಸಿನಿ, ನಸ್ಸರ್ ಮತ್ತು ,ಸಾಧುಕೋಕಿಲಾ ಎಲ್ಲಾ ಭಾಷೆಗಳಲ್ಲೂ ಅಭಿನಯಿಸಲಿದ್ದಾರೆ, ಕನ್ನಡದಲ್ಲಿ ಮಾತ್ರ ಚಿಕ್ಕಣ್ಣ ಅಭಿನಯಿಸುತ್ತಿದ್ದು, ಅಜಯ್ ತೆಲುಗು ವರ್ಸನ್ ನಲ್ಲಿ ನಟಿಸುತ್ತಿದ್ದಾರೆ.
ಚಿತ್ರಕ್ಕೆ ಅಕ್ಷರ ಹಾಸನ್ ನಾಯಕಿ ಆಗಲಿದ್ದಾರೆ. ಅಕ್ಷರಾ ಅವರ ಮ್ಯಾನೇಜರ್ ಜೊತೆ ನಾವು ಈ ಸಂಬಂಧ ಚರ್ಚಿಸಿದ್ದೇವೆ, ಆದರೆ ಅವರಿಂದ ಇನ್ನೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ, ಶೀಘ್ರದಲ್ಲೇ ಸ್ಪಷ್ಟಪಡಿಸಲಿದ್ದಾರೆ ಎಂದು ನಾಗಶೇಖರ್ ಹೇಳಿದ್ದಾರೆ.
ನಮ್ಮ ಸುತ್ತಮುತ್ತ ನಡೆದಿರುವ ಹಲವು ನೈಜ ಘಟನೆಗಳನ್ನು ನೋಡಿ ನಾನು ಚಿತ್ರಕಥೆ ಬರೆದಿದ್ದೇನೆ ಎಂದು ನಾಗಶೇಖರ್ ತಿಳಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತವಿದ್ದು, ಸಿನಿಮಾಗೆ ಸತ್ಯ ಹೆಗಡೆ ಛಾಯಾಗ್ರಹಣವಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos